CM ಬದಲಾವಣೆಗೆ ಪಟ್ಟು, ವಿಮಾನ ಹಾರಾಟಕ್ಕೆ ಮತ್ತೆ ಆಪತ್ತು; ನ.26ರ ಟಾಪ್ 10 ಸುದ್ದಿ!

By Suvarna News  |  First Published Nov 26, 2020, 5:26 PM IST

ಡಿಸೆಂಬರ್ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಭಾರತ ನಿಷೇಧಿಸಿದೆ. ತಮಿಳುನಾಡಿನಲ್ಲಿ ಅಬ್ಬರಿಸುತ್ತಿರುವ 'ನಿವಾರ್' ಚಂಡಮಾರುತದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಸಿಎಂ ಬಿಎಸ್ ಯಡಿಯೂರಪ್ಪ ಬದಲಾವಣೆಗೆ ಮತ್ತೆ ಬಿಗಿಪಟ್ಟು ಆರಂಭಗೊಂಡಿದೆ. ನೂತನ ಕೃಷಿ ಕಾಯ್ದೆ ಖಂಡಿಸಿ ಪಂಜಾಬ್ ರೈತರು ಪ್ರತಿಭಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೊಸ ಸಂಸತ್ತು ಕಟ್ಟಡ, 6 ಕ್ರಿಕೆಟಿಗರಿಗೆ ಕೊರೋನಾ ಸೇರಿದಂತೆ ನವೆಂಬರ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


ಅನ್‌ಲಾಕ್ 6.0 ಬಿಡುಗಡೆ ಹಿನ್ನಲೆ; ಅಂತಾರಾಷ್ಟ್ರೀಯ ವಿಮಾನಗಳಿಗೆ ನಿಷೇಧ!...

Latest Videos

undefined

ದೇಶದಲ್ಲಿ ಕೊರೋನಾ ಆಟ ಮತ್ತೆ ಶುರುವಾಗಿದೆ. ನಿಯಂತ್ರಣಕ್ಕೆ ಬರುತ್ತಿದೆ ಅನ್ನೋವಷ್ಟರಲ್ಲೇ ಮತ್ತೆ ಪರಿಸ್ಥಿತಿ ಕೈಮೀರುತ್ತಿದೆ. ಕೇಂದ್ರ ಸರ್ಕಾರ ಅನ್‌ಲಾಕ್ 6.0 ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ವಿಮಾನಯಾನ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

ಬೆಂಗಳೂರಿಗೂ 'ನಿವಾರ್' ಸೈಕ್ಲೋನ್ ಎಫೆಕ್ಟ್; ಇಂದು, ನಾಳೆ ಭಾರೀ ಮಳೆ ಸಾಧ್ಯತೆ...

ತಮಿಳುನಾಡಿನಲ್ಲಿ ಅಬ್ಬರಿಸುತ್ತಿರುವ 'ನಿವಾರ್' ಚಂಡಮಾರುತ ರಾಜ್ಯದ ಮೇಲೆಯೂ ಪ್ರಭಾವ ಬೀರುವ ಲಕ್ಷಣಗಳು ಕಾಣಿಸುತ್ತಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ಭಾರೀ ಮಳೆಯ ನಿರೀಕ್ಷೆಯೂ ಇದೆ. 

ಹೊಸ ಸಂಸತ್ತಿನ ಕಟ್ಟಡಕ್ಕೆ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕು!...

ಸೆಂಟ್ರಲ್‌ ವಿಸ್ತಾ ಮರು ಅಭಿವೃದ್ಧಿ ಯೋಜನೆಯಡಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಿರ್ಮಾಣ ಮಾಡಲು ನಿಶ್ಚಯಿಸಿರುವ ಹೊಸ ಸಂಸತ್ತಿನ ಕಟ್ಟಡ ಕಾಮಗಾರಿಗೆ ಡಿಸೆಂಬರ್‌ ಮೊದಲ ಮಧ್ಯಂತರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್‌ಗೆ ಬಂದಳಿದ 6 ಪಾಕಿಸ್ತಾನ ಕ್ರಿಕೆಟಿಗರಿಗೆ ಕೊರೋನಾ!...

ನಾಲ್ಕು ಬಾರಿ ಕೊರೋನಾ ವೈರಸ್ ಪರೀಕ್ಷೆ ಮಾಡಿಸಿದ ಪಾಕಿಸ್ತಾನ ಕ್ರಿಕೆಟಿಗರು ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್ ಬಂದಿಳಿದ್ದಾರೆ. ಆದರೆ ಕಿವೀಸ್ ನಾಡಲ್ಲ ಮಾಡಿದ ಪರೀಕ್ಷೆಯಲ್ಲಿ 6 ಪಾಕಿಸ್ತಾನ ಕ್ರಿಕೆಟಿಗರಿಗೆ ಕೊರೋನಾ ಪಾಸಿಟೀವ್. ಇದೀಗ ಟೂರ್ನಿ ಆಯೋಜನೆಗೆ ತೀವ್ರ ಹಿನ್ನಡೆ ಎದುರಾಗಿದೆ

ಥೇಟರಿಗೆ ಬರಲು ರೆಡಿಯಾಗಿದೆ ಪೊಗರು; ಪರಿಸ್ಥಿತಿ ಹೀಗೇ ಇದ್ದರೆ ಡಿ.25 ಫಿಕ್ಸ್!...

ಸದ್ಯಕ್ಕೆ ಮೇಲಿನ ಎರಡೂ ಉತ್ತರಗಳು ಕೇಳಿ ಬರುತ್ತಿವೆ. ಇನ್ನು 20 ದಿನಗಳಲ್ಲಿ ಮೊದಲ ಪ್ರತಿ ಹೊರಬರಲಿದೆ. ಬಿಡುಗಡೆಗೆ ಬೇಕಾದ ಎಲ್ಲಾ ತಯಾರಿಗಳು ಮುಗಿದಿವೆ.

ವಿಶ್ವದ ಅತ್ಯಂತ ದುಬಾರಿ ಕಾರಿನ ಓನರ್‌ ನೀತಾ ಅಂಬಾನಿ ಡ್ರೈವರ್‌ ಸ್ಯಾಲರಿ ಎಷ್ಟು?...

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಅಂಬಾನಿ ಕುಟುಂಬ ಯಾವಾಗಲೂ ಸುದ್ದಿಯಾಗುತ್ತಿರುತ್ತದೆ. ಅವರ ಲೈಫ್‌ಸ್ಟೈಲ್‌ ಸದಾ ಚರ್ಚೆಯಾಗುತ್ತದೆ. ಮುಖೇಶ್ ಅಂಬಾನಿ ಹಾಗೂ ಅವರ ಮಡದಿ ನೀತಾ ಬಳಿ ಹಲವು ದುಬಾರಿ ಕಾರುಗಳಿವೆ. ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾಗಾಗಿ ವಿಶ್ವದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದಾರೆ. ಅದೇ ಸಮಯದಲ್ಲಿ, ಮುಖೇಶ್ ಅಂಬಾನಿ ತಮ್ಮ ಚಾಲಕರಿಗೆ ನೀಡುವ ಸಂಬಳ ಕೇಳಿದರೆ ನೀವು ಶಾಕ್‌ ಆಗುತ್ತೀರಾ. ಇಲ್ಲಿದೆ ವಿವರ.

ಬಿಡುಗಡೆಯಾಗುತ್ತಿದೆ ಹೊಸ ಬಣ್ಣದಲ್ಲಿ ಟೆಸ್ಲಾ ರೋಡ್‌ಸ್ಟರ್ ಸೂಪರ್ ಕಾರು!...

ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಉತ್ಪಾದಕ ಕಂಪನಿ ಟೆಸ್ಲಾ ಇದೀಗ ತನ್ನ ರೋಡ್‌ಸ್ಟರ್ ಸೂಪರ್ ಕಾರನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡುತ್ತಿದೆ. ಈ ಕುರಿತು ಟೆಸ್ಲಾ ಸಿಇಒ ಎಲನ್ ಮಸ್ಕ್ ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ.

'ನನಗಿರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿತಾರೆ'...

ನನಗಿರುವ ಮಾಹಿತಿ ಪ್ರಕಾರ ಸಿಎಂ ಸ್ಥಾನದಿಂದ ಯಡಿಯೂರಪ್ಪ ಇಳಿಯುತ್ತಾರೆಂದು ಹೇಳಿದ್ದೆ. ಏನು ಕೆಲಸ ಮಾಡದಿರೋ ಮುಖ್ಯಮಂತ್ರಿ ಅಲ್ವಾ. ಇವರು ಹೋಗಿ ಕೆಲಸ ಮಾಡುವವರು ಬರಲಿ ಎಂದು ಮುಖಂಡರೋರ್ವರು ಹೇಳಿದ್ದಾರೆ

ಕೊರೋನಾ ಸೋಲಿಸಿದ ನಂತರ 106 ವರ್ಷದ ಬರ್ತ್‌ಡೇ ಆಚರಣೆ..!...

ಕೊರೋನಾ ವೈರಸ್ ಮುಖ್ಯವಾಗಿ ಪುಟ್ಟ ಮಕ್ಕಳಿಗೂ ವೃದ್ಧರಿಗೂ ಹೆಚ್ಚು ಅಪಾಯಕಾರಿಯಾಗಿ ಬದಲಾಗಿದೆ. ಆದರೆ ಬಹಳಷ್ಟು ಜನ ಹಿರಿಯ ಜೀವಗಳು ಕೊರೋನಾ ವಿರುದ್ಧ ಗೆದ್ದಿದ್ದಾರೆ.

ಪಂಜಾಬ್ -ಹರ್ಯಾಣ ಗಡಿಯಲ್ಲಿ ಉದ್ಗಿಗ್ನ ಸ್ಥಿತಿ; ಪೊಲೀಸರು, ರೈತರ ನಡುವೆ ಜಟಾಪಟಿ...

ನೂತನ ಕೃಷಿ ಕಾಯ್ದೆ ಖಂಡಿಸಿ ಪಂಜಾಬ್ ರೈತರು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ರಾಕ್ಟರ್, ಟ್ರಕ್ಕುಗಳನ್ನು ಹತ್ತಿ ದೆಹಲಿಯತ್ತ ಹೊರಟಿದ್ದಾರೆ. ಪಂಜಾಬ್ -ಹರ್ಯಾಣ ಗಡಿಯಲ್ಲಿ ಪೊಲೀಸರು ರೈತರನ್ನು ತಡೆದಿದ್ದಾರೆ. 

click me!