ಯೋಗಿ ಸರ್ಕಾರದ ಮತ್ತೊಂದು ದಿಟ್ಟ ಹೆಜ್ಜೆ; ಪ್ರತಿಭಟನೆ ಮಾಡಿದ್ರೆ ಅಷ್ಟೆ!

Published : Nov 26, 2020, 04:36 PM ISTUpdated : Nov 26, 2020, 04:43 PM IST
ಯೋಗಿ ಸರ್ಕಾರದ ಮತ್ತೊಂದು ದಿಟ್ಟ ಹೆಜ್ಜೆ; ಪ್ರತಿಭಟನೆ ಮಾಡಿದ್ರೆ ಅಷ್ಟೆ!

ಸಾರಾಂಶ

ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಯೋಗಿ ಸರ್ಕಾರ/ ಸರ್ಕಾರಿ ನೌಕರರ ಪ್ರತಿಭಟನೆಗೆ ಬ್ರೇಕ್/  ಎಸ್ಮಾ ಜಾರಿ ಮಾಡಿದ ಸರ್ಕಾರ./  ಮೇ 2021 ರವರೆಗೆ ಎಸ್ಮಾ ಜಾರಿಯಲ್ಲಿ ಇರಲಿದೆ

ಲಕ್ನೋ(ನ.  26)  ದಿಟ್ಟ ನಿರ್ಧಾರಗಳನ್ನು ಥಟ್ಟನೆ ತೆಗೆದುಕೊಳ್ಳುವ ಯೋಗಿ ಸರ್ಕಾರ ಅಂಥದ್ದೆ ಮತ್ತೊಂದು ಹೆಜ್ಜೆ ಇಟ್ಟಿದೆ.  ಎಸೆಂಶಿಯಲ್ ಸರ್ವೀಸ್ ಮೆಂಟೆನೆನ್ಸ್ ಆಕ್ಟ್(ಎಸ್ಮಾ) ಜಾರಿ ಮಾಡಿದ್ದು ಸರ್ಕಾರಿ ಸೇವಾ ನೌಕರರು ಪ್ರತಿಭಟನೆ ಮಾಡುವಂತೆ ಇಲ್ಲ.

ಇದರ ನಡುವೆ  ರಾಜಧಾನಿ ಲಕ್ನೋದಲ್ಲಿ  144  ನೇ ಸೆಕ್ಷನ್  ಹಾಕಲಾಗಿದೆ.  ಡಿಸೆಂಬರ್ 1 ರವೆಗೆ  ಕರ್ಫ್ಯೂ ಆದೇಶ ಜಾರಿಯಲ್ಲಿ ಇರಲಿದೆ.

ಕೊರೋನಾ ಪ್ರಕರಣಗಳು ಏರಿಕೆ ಕಾಣುತ್ತಿರುವುದರಿಂದ ಕಠಿಣ ಕ್ರಮ ಅನಿವಾರ್ಯವಾಗಿದೆ.   ಪರವಾನಗಿ ಪಡೆದುಕೊಳ್ಳದೇ ಯಾವುದೆ ಕಾರ್ಯಕ್ರಮ ನಡೆಸುವಂತೆ ಇಲ್ಲ ಎಂದು  ಸರ್ಕಾರ ಅಧಿಕೃತವಾಗಿ ತಿಳಿಸಿದೆ.

ಲವ್ ಜಿಹಾದ್‌ಗೆ ಕಠಿಣ ಕಾನೂನು ತಂದ ಯೋಗಿ ಸರ್ಕಾರ

ಸೆಂಟ್ರಲ್ ಟ್ರೇಡ್ ಯೂನಿಯನ್ ಕರೆ ನೀಡಿರುವ ಪ್ರತಿಭಟನೆಗೆ  ನವೆಂಬರ್  26  ರಂದು ಕೆಲ ಸರ್ಕಾರಿ ನೌಕರರು  ಸಾಥ್ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕ ನಂತರ ಸರ್ಕಾರ ಎಸ್ಮಾ ಜಾರಿಮಾಡಿದೆ. ಮೇ 2021 ರವರೆಗೆ ಎಸ್ಮಾ ಜಾರಿಯಲ್ಲಿರಲಿದ್ದು ಸರ್ಕಾರಿ ನೌಕರರು ಸೊಲ್ಲು ಎತ್ತುವ ಹಾಗೆ ಇಲ್ಲ.

ಉತ್ತರ ಪ್ರದೇಶದ ರಾಜ್ಯಪಾಲೆ ಅನಾದಿಬೆನ್ ಪಟೇಲ್ ಅನುಮತಿ ಪಡೆದುಕೊಂಡೆ ಎಸ್ಮಾ ಜಾರಿಮಾಡಲಾಗಿದೆ.  ಎಸ್ಮಾ ಉಲ್ಲಂಘನೆ ಮಾಡಿ ಪ್ರತಿಭಟನೆಗೆ ಮುಂದಾದರೆ ದಂಡ ಮತ್ತು ಜೈಲುವಾಸ ಎರಡನ್ನೂ ಅನುಭವಿಸಬೇಕಾಗುತ್ತದೆ. ಹಿಂದೆ ಜಯಲಲಿತಾ ಸರ್ಕಾರ ತಮಿಳುನಾಡಿನಲ್ಲಿ ಎಸ್ಮಾ ಜಾರಿ ಮಾಡಿ ನೌಕರರನ್ನು ದಾರಿಗೆ ತಂದಿತ್ತು.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !