
ಬೆಂಗಳೂರು (ನ.26): ನನಗಿರುವ ಮಾಹಿತಿ ಮೇಲೆ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂದಿದ್ದೆ. ಎರಡು ವರ್ಷ ಉಳಿದುಕೊಳ್ಳುತ್ತೀನಿ ಎನ್ನುವುದಾದರೆ ಉಳಿದುಕೊಳ್ಳಲಿ ನಮಗೇನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
"
ಏನು ಕೆಲಸ ಮಾಡದಿರೋ ಮುಖ್ಯಮಂತ್ರಿ ಅಲ್ವಾ. ಇವರು ಹೋಗಿ ಕೆಲಸ ಮಾಡುವವರು ಬರಲಿ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ನಲ್ಲೆ ಒಡಕಿದೆ ಎನ್ನುತ್ತಾರೆ. ಇವರ ಮನೆಯಲ್ಲೆ ಎರಡೆರಡು ಕಡೆ ಮೀಟಿಂಗ್ ಮಾಡ್ತಾರಲ್ಲ. ಇದಕ್ಕೆ ಏನ್ ಹೇಳಬೇಕು..? ರಮೇಶ್ ಜಾರಕಿಹೋಳಿ ಮನೆಯಲ್ಲಿ ಒಂದು ಕಡೆ. ಇವರ ಮನೆಯಲ್ಲಿ ಒಂದು ಕಡೆ ಮೀಟಿಂಗ್ ಮಾಡ್ತಾರಲ್ಲ ಇದಕ್ಕೆ ಏನೆಂದು ಹೇಳಬೇಕು..?
ಬಿಜೆಪಿ ಶಾಸಕನ ವಿರುದ್ಧ ಹೆಚ್. ವಿಶ್ವನಾಥ್ ಕಿಡಿ..! .
ಬಹಳ ಗಟ್ಟಿ ಮಡಿಕೆ ಅನ್ನಬೇಕಾ..? ಸಿಎಂ ಮಂತ್ರಿ ಮಂಡಲ ಮಾಡುತ್ತಾರೋ ಮಂತ್ರಿ ಮಂಡಲ ಕೆಡವಿಕೊಳ್ತಾರೋ ಗೊತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇಲ್ಲ. ಸರ್ಕಾರ ಸಂಪೂರ್ಣ ಸತ್ತು ಹೋಗಿದೆ. ಆಡಳಿತದ ಕಡೆ ಗಮನ ಕೊಡುವುದು ಬಿಟ್ಟು ಚೇರ್ ಮನ್ ಗಳನ್ನ ಮಾಡಿಕೊಂಡಿದ್ದಾರೆ..
ಸರ್ಕಾರದಲ್ಲಿ ಸಂಬಳ ಕೊಡಲು ದುಡ್ಡಿಲ್ಲ, ಓಲ್ಢೇಜ್ ಪೆನ್ಷನ್ ಕೊಡೋಕೆ ದುಡ್ಡಿಲ್ಲ, ವಿಡೋ ಪೆನ್ಷನ್ ಕೊಡುತ್ತಿಲ್ಲ. ಅನೇಕ ಅಭಿವೃದ್ದಿ ಕಾರ್ಯಗಳಿಗೆ ದುಡ್ಡಿಲ್ಲ. ಅನಗತ್ಯ ಖರ್ಚಿಗೆ ಚೇರ್ ಮನ್ ಮಾಡ್ತಿದಾರೆ.
ಅನಗತ್ಯ ಖರ್ಚುಗಳನ್ನ ಖಡಿತ ಮಾಡಿ ಎಂದು ನಾನು ಹೇಳಿದ್ದೆ. ಆದರೆ ಮಾಡಿಲ್ಲ. ಇವರು ಇನ್ನು 2ವರ್ಷ ಇದ್ದರೆ ರಾಜ್ಯ ಹಾಳು ಮಾಡಿ ರಾಜ್ಯ 20 ವರ್ಷ ಹಿಂದಕ್ಕೆ ತಳ್ಳುತ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.