ಇದ್ದಕ್ಕಿದ್ದಂತೆ ಬಿಜೆಪಿ ಕೋರ್ ಕಮಿಟಿ ಸಭೆ ಮುಂದಕ್ಕೆ ಹೋಗಿದ್ಯಾಕೆ?

By Web DeskFirst Published Feb 5, 2019, 4:50 PM IST
Highlights

ರಾಜ್ಯದ ದೋಸ್ತಿ ಸರಕಾರ ಬಜೆಟ್ ಮಂಡನೆಗೆ ಮುಂದಾಗಿರುವ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸಹ ಒಂದಿಲ್ಲೊಂದು ರಾಜಕಾರಣದ ತಂತ್ರ ಮಾಡುತ್ತಲೇ ಇದೆ. ಆದರೆ ಮಂಗಳವಾರ ನಡೆಯಬೇಕಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ರದ್ದಾಗಿದೆ.

ಬೆಂಗಳೂರು [ಫೆ.05]  ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ರದ್ದಾಗಿದೆ. ಮಂಗಳವಾರ ಸಂಜೆ  ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಬೇಕಾಗಿತ್ತು.

ಕೆಲವು ಕೋರ್ ಕಮಿಟಿ  ಕೆಲ ಸದಸ್ಯರು ದೆಹಲಿಯಲ್ಲಿ ಇದ್ದಾರೆ.  ಇರುವ ಕೋರ್ ಕಮಿಟಿ ಸದಸ್ಯರಾದ ಡಿ.ವಿ. ಸದಾನಂದ ಗೌಡ, ಪ್ರಹ್ಲಾದ್ ಜೋಷಿ ಮತ್ತು ನಳೀನ್ ಕುಮಾರ್ ಕಟೀಲ್  ದೆಹಲಿಯಲ್ಲಿ ಇದ್ದಾರೆ.  ಆದರೆ ಶಾಸಕಾಂಗ ಸಭೆ ನಡೆಯಲಿದೆ.

50 ಕೋಟಿ ಸಿನಿಮಾವನ್ನು 5 ಕೋಟಿಗೆ ಪಣಕ್ಕಿಟ್ಟ ಮುನಿರತ್ನ?

ದೋಸ್ತಿ ಸರಕಾರದ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಆತ್ಮವಿಶ್ವಾಸದಿಂದಲೇ ಮಾತನಾಡಿದ್ದಾರೆ. ಇನ್ನು ಆಯಾ ಪಕ್ಷದ ಪ್ರಮುಖರು ತಮ್ಮ ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಔತಣಕೂಟದ ಮೊರೆ ಹೋಗಿದ್ದಾರೆ.


 

click me!