ಲೋಕಸಭಾ ಚುನಾವಣೆ 2024: ಮಂಡ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಭರ್ಜರಿ ರೋಡ್‌ ಶೋ

By Kannadaprabha News  |  First Published Apr 25, 2024, 9:52 AM IST

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು) ಪರ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಸಕ ಪಿ.ರವಿಕುಮಾರ್, ಸ್ಥಳೀಯ ಮುಖಂ ಡರು,ಕಾರಕರ್ತರು ಬೈಕ್‌ ರ್ಯಾಲಿಯೊಂದಿಗೆ ವಿವಿಧ ರಸ್ತೆಗಳಲ್ಲಿ ಪ್ರಚಾರ ನಡೆಸಿದರು. ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ರೋಡ್ ಶೋಗೆ ಜನಸಾಗ ರವೇ ಹರಿದು ಬಂದಿತ್ತು.


ಮಂಡ್ಯ(ಏ.25): ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಬುಧವಾರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು) ಪರ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಸಕ ಪಿ.ರವಿಕುಮಾರ್, ಸ್ಥಳೀಯ ಮುಖಂ ಡರು,ಕಾರಕರ್ತರು ಬೈಕ್‌ ರ್ಯಾಲಿಯೊಂದಿಗೆ ವಿವಿಧ ರಸ್ತೆಗಳಲ್ಲಿ ಪ್ರಚಾರ ನಡೆಸಿದರು. ನಗರದ ಕಾರೇಮನೆ ಗೇಟ್‌ನಿಂದ ಆರಂಭ ವಾದ ಪ್ರಚಾರ ರ್ಯಾಲಿ ಹೊಳಲು ವೃತ್ತದ ಮಾರ್ಗವಾಗಿ ಜಯಚಾಮರಾಜೇಂದ್ರ ಒಡೆಯ‌ರ್ ರಸ್ತೆಗೆ ಆಗಮಿಸಿತು. ಅಲ್ಲಿಂದ ಕೆ.ಆ‌ರ್.ರಸ್ತೆ ಮೂಲಕ ಹೊಸಹಳ್ಳಿ ವೃತ್ತಕ್ಕೆ ಆಗಮಿಸಿ ರೋಡ್‌ ಶೋ ಅಂತ್ಯಗೊಂಡಿತು. ರಾಲಿಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

Tap to resize

Latest Videos

ಕಾಂಗ್ರೆಸ್‌ದು ತಾಲಿಬಾನ್ ಸರ್ಕಾರ ಮಾದರಿ: ಸಿ.ಟಿ.ರವಿ

ಜನಸಾಗರದ ನಡುವೆ ಜೆಡಿಎಸ್ ರೋಡ್ ಶೋ: 

ಸಂಜೆ 3.30ರ ಸಮಯಕ್ಕೆ ಆರಂಭವಾದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ರೋಡ್ ಶೋಗೆ ಜನಸಾಗ ರವೇ ಹರಿದು ಬಂದಿತ್ತು. ಕೊಪ್ಪದಲ್ಲಿ ರೋಡ್ ಶೋ ಮುಗಿಸಿ ಆಗಮಿಸಿದ ಕುಮಾರಸ್ವಾಮಿ, ತೆರೆದ ವಾಹನದಲ್ಲಿ ಮಂಡ್ಯ ವಿಶ್ವವಿದ್ಯಾಲಯದಿಂದ ರೋಡ್ ಶೋ ಆರಂಭಿಸಿದರು. ಎತ್ತಿನಗಾಡಿ, ಹತ್ತಾರು ವಾಹನಗಳು, ಸಹಸ್ರಾರು ಜನರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ಮತಯಾಚನೆ ನಡೆಸಿದರು.

click me!