ಕಾಶ್ಮೀರದಲ್ಲಿ ಭರ್ಜರಿ ಭೇಟೆ: 3 ದಿನದಲ್ಲಿ 10 ಉಗ್ರರ ಬಲಿ!

By Web DeskFirst Published Aug 4, 2019, 9:51 AM IST
Highlights

ಕಾಶ್ಮೀರದಲ್ಲಿ ಭರ್ಜರಿ ಭೇಟೆ: 3 ದಿನದಲ್ಲಿ 10 ಉಗ್ರರ ಬೇಟೆ, ಹತ್ಯೆ| ಗಡಿಯಲ್ಲಿ, ಗಡಿಯೊಳಗೆ ದಾಳಿ

ಶ್ರೀನಗರ[ಆ.04]: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಮುಗಿಬಿದ್ದಿರುವ ಭಾರತೀಯ ಸೇನೆ ಕಳೆದ 3 ದಿನಗಳ ಅವಧಿಯಲ್ಲಿ ಭರ್ಜರಿ 10ಕ್ಕೂ ಹೆಚ್ಚು ಉಗ್ರರ ಬೇಟೆಯಾಡಿದೆ. ಜುಲೈ 31 ಮತ್ತು ಆ.1ರಂದು ಗಡಿ ನಿಯಂತ್ರಣ ರೇಖೆ ಬಳಿ ಬರುವ ಕೇರಾನ್‌ ವಲಯದಲ್ಲಿ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ ಪಾಕಿಸ್ತಾನದ ಗಡಿ ಭದ್ರತಾ ಪಡೆ ಬ್ಯಾಟ್‌ನ 5ರಿಂದ 7 ಉಗ್ರರನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದಾರೆ.

ಹತ್ಯೆಗೀಡಾದ ಪಾಕ್‌ ಯೋಧರು/ ಉಗ್ರರ ದೇಹಗಳನ್ನು ವಶಪಡಿಸಿಕೊಳ್ಳುವ ಭಾರತೀಯ ಯೋಧರ ಯತ್ನಕ್ಕೆ ಪಾಕ್‌ ಪಡೆಗಳು ನಿರಂತರ ಗುಂಡಿನ ದಾಳಿ ನಡೆಸುವ ಮೂಲಕ ಅಡ್ಡಿ ಮಾಡಿವೆ.

ಮತ್ತೊಂದು ಸರ್ಜಿಕಲ್ ಸ್ಟ್ರೈಕ್: POK ಒಳನುಗ್ಗಿದ ಸೇನೆ?

ಈ ನಡುವೆ ಶನಿವಾರ ಜಮ್ಮು-ಕಾಶ್ಮೀರದ ಶೋಪಿಯಾನ್‌ ಮತ್ತು ಬಾರಾಮುಲ್ಲಾ ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ಸೇನಾ ಕಾರ್ಯಾಚರಣೆ ವೇಳೆ ಜೈಷ್‌-ಎ-ಮಹಮ್ಮದ್‌ ಸಂಘಟನೆಗೆ ಸೇರಿದ ಮೂವರು ಕುಖ್ಯಾತ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಬಾರಾಮುಲ್ಲಾದ ಸೊಪೋರ್‌ ನಗರದಲ್ಲಿ ಉಗ್ರರು ಅಡಗಿರುವ ಬಗ್ಗೆ ಸುಳಿವು ಅರಿತು ಸೈನಿಕರು ಶುಕ್ರವಾರವೇ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ಸೈನಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಸೈನಿಕರೂ ಕೂಡ ದಾಳಿ ನಡೆಸಿ ಜೆಇಎಂ ಸಂಘಟನೆಗೆ ಸೇರಿದ ಮಂಜೂರ್‌ ಭಟ್‌ ಸೇರಿ ಇಬ್ಬರು ಉಗ್ರರನ್ನು ಎನ್‌ಕೌಂಟರ್‌ ಮಾಡಿದ್ದಾರೆ. ಇನ್ನೊಂದೆಡೆ ಶೋಫಿಯಾನ್‌ನ ಮೆಮಂದಾರ್‌ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಝೀನತ್‌ ಉಲ್‌ ಇಸ್ಲಾಂ ನಾಯ್ಕೋ ಎಂಬ ಉಗ್ರ ಸೈನಿಕರ ಗುಂಡಿಗೆ ಹತನಾಗಿದ್ದಾನೆ. ನಾಯ್ಕೋ ಮೇಲೆ ಭಯೋತ್ಪಾದನೆ ಸಂಬಂಧಿಸಿದ ಹಲವು ಪ್ರಕರಣಗಳು ದಾಖಲಾಗಿವೆ. ಶೋಫಿಯಾನದ ಪೊಲೀಸ್‌ ಠಾಣೆ ಧ್ವಂಸ, ನಾಲ್ವರು ಪೊಲೀಸರನ್ನು ಅಪಹರಿಸಿ ಕೊಲೆ, ನಾಗರಿಕರ ಅಪಹರಣ, ಕೊಲೆ ಮಾಡಿದ ಪ್ರಕರಣಗಳು ಇವನ ಮೇಲಿದ್ದವು.

click me!