ಝಂಡಾ ಊಂಚಾ ರಹೇ ಹಮಾರಾ: ಲಡಾಖ್ ನಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ!

By Web DeskFirst Published Jan 26, 2019, 3:29 PM IST
Highlights

ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿಯಲ್ಲಿ ರಾರಾಜಿಸಿದ ತಿರಂಗಾ| ಐಟಿಬಿಪಿ ಯೋಧರಿಂದ ಲಡಾಖ್ ನಲ್ಲಿ ಧ್ವಜಾರೋಹಣ| 18 ಸಾವಿರ ಅಡಿ ಎತ್ತರದ ಲಡಾಖ್ ಯುದ್ಧ ಭೂಮಿಯಲ್ಲಿ ಮೈನಸ್​ 30 ಡಿಗ್ರಿ ತಾಪಮಾನ| 70ನೇ ಗಣರಾಜ್ಯೋತ್ಸವ ಆಚರಿಸಿದ ಯೋಧರು

ನವದೆಹಲಿ(ಜ.26): ದೇಶಾದ್ಯಂತ 70ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ಇಂಡೋ- ಟಿಬೆಟಿಯನ್​ ಗಡಿಯಲ್ಲೂ ಭಾರತೀಯ ಸೇನೆಯ ಯೋಧರು ಮೈನಸ್​ 30 ಡಿಗ್ರಿ ತಾಪಮಾನದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.

ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಎಂದೇ ಖ್ಯಾತಿ ಗಳಿಸಿರುವ ಲಡಾಖ್ ನಲ್ಲಿ ಯೋಧರು ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ 70ನೇ ಗಣರಾಜ್ಯೋತ್ಸವವನ್ನು ಆಚರಿಸಿದರು.

Indo-Tibetan Border Police personnel celebrating at 18,000 feet and -30 degree celsius in Ladakh pic.twitter.com/3u9yOP0mDM

— ANI (@ANI)

ಸಮುದ್ರ ಮಟ್ಟದಿಂದ ಸುಮಾರು 18 ಸಾವಿರ ಅಡಿ ಎತ್ತರದ ಲಡಾಖ್ ಯುದ್ಧ ಭೂಮಿಯಲ್ಲಿ, ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಧ್ವಜಾರೋಹಣ ಮಾಡಿದರು.

click me!