National Judicial Data Grid : ಹೈಕೋರ್ಟ್ ಗಳಲ್ಲಿ ಕಳೆದ 3 ವರ್ಷದಿಂದ ಶೇ.55ರಷ್ಟು ಕೇಸ್ ಪೆಂಡಿಂಗ್, ಕರ್ನಾಟಕದಲ್ಲೆಷ್ಟು?

By Suvarna NewsFirst Published Dec 18, 2021, 11:34 PM IST
Highlights

ಒಟ್ಟಾರೆ 30.61 ಲಕ್ಷ ಕೇಸ್ ಗಳು ಇನ್ನೂ ಇತ್ಯರ್ಥವಾಗಬೇಕಿದೆ
ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್  ನೀಡಿದ ಮಾಹಿತಿ
ಅಲಹಾಬಾದ್ ಹೈಕೋರ್ಟ್ ನಲ್ಲಿ ಗರಿಷ್ಠ ಕೇಸ್ ಪೆಂಡಿಂಗ್

ನವದೆಹಲಿ (ಡಿ.18): ಕಳೆದ ಮೂರು ಹಾಗೂ ಅದಕ್ಕಿಂತ ಸ್ವಲ್ಪ ಹೆಚ್ಚಿನ ವರ್ಷದಲ್ಲಿ ದೇಶದ 25 ಹೈಕೋರ್ಟ್ ಮೆಟ್ಟಿಲೇರಿದ 56.38 ಲಕ್ಷ ಕೇಸ್ ಗಳ ಪೈಕಿ ಶೇಕಡಾ 55 ರಷ್ಟು ಕೇಸ್ ಗಳೂ ಇನ್ನೂ ಇತ್ಯರ್ಥವಾಗದೇ ಉಳಿದಿವೆ ಎಂದು ಸರ್ಕಾರದ ಮಾಹಿತಿ ತಿಳಿಸಿದೆ. ಕಳೆದ ಮೂರು ವರ್ಷಗಳಿಂದ ಶೇಕಡಾ 30.61ರಷ್ಟು ಪ್ರಕರಣಗಳು ಇತ್ಯರ್ಥವಾಗದೇ ಉಳಿದಿದೆ. ಇದರಲ್ಲಿ 40%ನಷ್ಟು ಸಿವಿಲ್ ಪ್ರಕರಣಗಳಾಗಿವೆ ಎಂದು ನ್ಯಾಷನಲ್ ಜ್ಯುಡೀಷಲ್ ಗ್ರಿಡ್ ಡೇಟಾ (National Judicial Data Grid ) (ಎನ್‌ಜೆಡಿಜಿ) ತಿಳಿಸಿದೆ. ಎನ್‌ಜೆಡಿಜಿ ನ್ಯಾಯಾಂಗದ ಡೇಟಾವನ್ನು ಮೇಲ್ವಿಚಾರಣೆ ಮಾಡುವ ಸರ್ಕಾರದ ಸಂಸ್ಥೆಯಾಗಿದೆ.

ಒಟ್ಟು 56.38 ಲಕ್ಷ ಪ್ರಕರಣಗಳಲ್ಲಿ, ಸುಮಾರು 77 ಪ್ರತಿಶತ  ಅಂದರೆ 43.40 ಲಕ್ಷ ಪ್ರಕರಣಗಳು  ಕಳೆದ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಉಳಿದಿವೆ ಮತ್ತು ಶೇಕಡಾ 20 ಕ್ಕಿಂತ ಹೆಚ್ಚು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಾಕಿ ಉಳಿದ ಪ್ರಕರಣಗಳಾಗಿವೆ.  ಇನ್ನು ಕಾನೂನು ಮತ್ತು ನ್ಯಾಯ ಸಚಿವಾಲಯದ (Ministry of Law and Justice) ಮಾಹಿತಿ ಅಧರಿಸಿ ಹೇಳುವುದಾದರೆ, ಅಲಹಾಬಾದ್ ಹೈಕೋರ್ಟ್ ನಲ್ಲಿ (Allahabad High Court ) ಮಂಜೂರಾಗಿರುವ 160 ಹುದ್ದೆಗಳ ಪೈಕಿ ಶೇ.40ರಷ್ಟು ಹುದ್ದೆ ಇನ್ನೂ ಖಾಲಿಯಾಗಿಯೇ ಉಳಿದುಕೊಂಡಿದ್ದರಿಂದ ಇಲ್ಲಿನ ಕೋರ್ಟ್ ಈಗಲೂ ಶೇ.60ರ ಕಾರ್ಯಕ್ಷಮತೆಯಲ್ಲಿ ಕೆಲಸ ನಡೆಸುತ್ತಿದೆ.

ಒಟ್ಟಾರೆ ದೇಶದಲ್ಲಿರುವ ಹೈಕೋರ್ಟ್ ಗಳಿಗೆ ಸರ್ಕಾರ 1098 ನ್ಯಾಯಾಧೀಶ ಹುದ್ದೆಯನ್ನು ಮಂಜೂರು ಮಾಡಿದೆ. ಇವುಗಳ ಪೈಕಿ ಕೇವಲ 694 ನ್ಯಾಯಾಧೀಶರು ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದು, 404 ಹುದ್ದೆಗಳು ಖಾಲಿ ಉಳಿದಿವೆ. ಒಟ್ಟಾರೆಯಾಗಿ ದೇಶದಲ್ಲಿ ಶೇ.37ರಷ್ಟು ನ್ಯಾಯಾಧೀಶರ ಹುದ್ದೆಯಲ್ಲಿ ಖಾಲಿಯಾಗಿಯೇ ಉಳಿದುಕೊಂಡಿದೆ.

Karnataka High Court : ಕನ್ನಡ ಕಲಿಕೆಗೆ ಒತ್ತಾಯ ಬೇಡ
"ಉನ್ನತ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ನಿರಂತರ, ಸಮಗ್ರ ಮತ್ತು ಸಹಯೋಗದ ಪ್ರಕ್ರಿಯೆಯಾಗಿದೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಮಟ್ಟದ ವಿವಿಧ ಸಾಂವಿಧಾನಿಕ ಪ್ರಾಧಿಕಾರಗಳಿಂದ ಸಮಾಲೋಚನೆ ಮತ್ತು ಅನುಮೋದನೆಯ ಅಗತ್ಯವಿದೆ. ಅಸ್ತಿತ್ವದಲ್ಲಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದರೂ, ನಿವೃತ್ತಿ, ರಾಜೀನಾಮೆ ಅಥವಾ ನ್ಯಾಯಾಧೀಶರ ಉನ್ನತೀಕರಣ ಮತ್ತು ನ್ಯಾಯಾಧೀಶರ ಬಲದ ಹೆಚ್ಚಳದ ಕಾರಣದಿಂದಾಗಿ ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಖಾಲಿ ಹುದ್ದೆಗಳು ಉದ್ಭವಿಸುತ್ತಲೇ ಇರುತ್ತವೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯವು ಕಳೆದ ವಾರ ಲೋಕಸಭೆಯಲ್ಲಿ ( Lok Sabha) ಹೇಳಿತ್ತು.

Karnataka High Court Recruitment: ಕರ್ನಾಟಕ ಹೈ ಕೋರ್ಟ್ ನಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಅರ್ಜಿ ಆಹ್ವಾನ
ಇನ್ನು ಡಿಸೆಂಬರ್ 6ರವರೆಗಿನ ಮಾಹಿತಿಯನ್ನು ಪರಿಶೀಲನೆ ಮಾಡಿದರೆ, ಸುಪ್ರೀಂ ಕೋರ್ಟ್ ನಲ್ಲಿ (Supreme Court) ಕನಿಷ್ಠ70 ಸಾವಿರ ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ಇನ್ನು ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳ  (district and subordinate court) ವಿಚಾರಕ್ಕೆ ಬಂದರೆ 4.06 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ  ಎಂದು ಸಚಿವಾಲಯದ ಅಂಕಿ-ಅಂಶಗಳು ತೋರಿಸಿವೆ.

ಕರ್ನಾಟಕ ಹೈ ಹೋರ್ಟ್ ನಲ್ಲಿ ಎಷ್ಟಿದೆ ಪ್ರಕರಣ?
ಎನ್‌ಜೆಡಿಜಿ ನೀಡಿರುವ ಡೇಟಾವನ್ನು ಪರಿಶೀಲನೆ ಮಾಡಿದರೆ, ಹೈಕೋರ್ಟ್ ಗಳ ಪೈಕಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಗರಿಷ್ಠ ಪ್ರಕರಣಗಳು ಇತ್ಯರ್ಥವಾಗದೇ ಉಳಿದುಕೊಂಡಿವೆ. ಅಂದಾಜು ಎಂಟು ಲಕ್ಷಕ್ಕಿಂತ ಅಧಿಕ ಪ್ರಕರಣಗಳು ಅಲಹಾಬಾದ್ ಹೈಕೋರ್ಟ್ ನಲ್ಲಿ ಪೆಂಡಿಂಗ್ ಲಿಸ್ಟ್ ನಲ್ಲಿದೆ. ನಂತರದ ಸ್ಥಾನದಲ್ಲಿ ಮದ್ರಾಸ್ ಹೈಕೋರ್ಟ್ (Madras High Court) ಇದ್ದು, ಇಲ್ಲಿ 5.78 ಲಕ್ಷ ಪ್ರಕರಣಗಳು ಇನ್ನೂ ಇತ್ಯರ್ಥವಾಗಬೇಕಿದೆ. ರಾಜಸ್ಥಾನದ ಹೈ ಕೋರ್ಟ್ ನಲ್ಲಿ (High Court of Rajasthan)5.74 ಲಕ್ಷ ಇದ್ದರೆ, ಬಾಂಬೆ ಹೈ ಕೋರ್ಟ್ ನಲ್ಲಿ (Bombay High Court) 5.63 ಲಕ್ಷ ಪ್ರಕರಣಗಳಲ್ಲಿ ಇನ್ನೂ ನ್ಯಾಯ ಸಂದಾನವಾಗಬೇಕಿದೆ. ಕಳೆದ ಮೂರು ಹಾಗೂ ಅದಕ್ಕಿಂತ ಹೆಚ್ಚಿನ ವರ್ಷಗಳಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ (Karnataka High Court) 2.71 ಲಕ್ಷ ಪ್ರಕರಣಗಳು ಇನ್ನೂ ಇತ್ಯರ್ಥವಾಗಬೇಕಿದೆ. ಇದರಲ್ಲಿ 2.31 ಲಕ್ಷ ಸಿವಿಲ್ ಕೇಸ್ ಆಗಿದ್ದರೆ, 40 ಸಾವಿರ ಕ್ರಿಮಿನಲ್ ಕೇಸ್ ಗಳಾಗಿವೆ.

click me!