ಎಂ.ಬಿ. ಪಾಟೀಲ್ ಗೆ ಸಿಗುತ್ತಾ ಮಂತ್ರಿಗಿರಿ ? ಯಾರು ಔಟ್ - ಯಾರು ಇನ್..?

By Web DeskFirst Published Oct 3, 2018, 11:45 AM IST
Highlights

ಎಂ.ಬಿ.ಪಾಟೀಲ್‌ ಅವರಿಗೆ ಸಚಿವ ಸ್ಥಾನ ಸಿಗುವುದನ್ನು ಸ್ವಾಗತಿಸುತ್ತೇನೆ. ನನಗೆ ಆರೋಗ್ಯ ಖಾತೆ ಸಿಕ್ಕಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್‌ ಹೇಳಿದರು. 
 

ಬಾಗಲಕೋಟೆ: ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ಬಿ.ಪಾಟೀಲ್‌ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್‌ ಹೇಳಿದರು. 

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಎಂ.ಬಿ.ಪಾಟೀಲ್‌ ಅವರಿಗೆ ಸಚಿವ ಸ್ಥಾನ ಸಿಗುವುದನ್ನು ಸ್ವಾಗತಿಸುತ್ತೇನೆ. ನನಗೆ ಆರೋಗ್ಯ ಖಾತೆ ಸಿಕ್ಕಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ. ನಾನು ಫಾರ್ಮಸಿ ಮುಗಿಸಿದ್ದರಿಂದ ಆರೋಗ್ಯಖಾತೆ ಸಿಕ್ಕಿದೆ. 

ಕೆಎಲ್‌ಇ ಸಂಸ್ಥೆ ಪುಣ್ಯದಿಂದ ಫಾರ್ಮಸಿ ಡಿಗ್ರಿ ಮುಗಿಸಿದ್ದೇನೆ ಎಂದರು. ಸರ್ಕಾರಿ ಆಸ್ಪತ್ರೆಗೆ ವೈದ್ಯರ ನೇಮಕ ಜಾರಿಯಲ್ಲಿದೆ. ಈಗಾಗಲೇ ರಾಜ್ಯದಲ್ಲಿ ವೈದ್ಯರು ಮತ್ತು ತಜ್ಞ ವೈದ್ಯರು ಸೇರಿ 450 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ನೇಮಕಾತಿ ಇಂದಿಗೂ ಮುಂದುವರಿದಿದೆ ಎಂದರು.

ಈಗಾಗಲೇ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಭರ್ಜರಿ ಚರ್ಚೆಗಳು ನಡೆಯುತ್ತಿದ್ದು, ಕಾಂಗ್ರೆಸ್ ನಿಂದ 6 ಸ್ಥಾನಗಳನ್ನು ಭರ್ತಿ ಮಾಡಲು ತಯಾರಿ ನಡೆದಿದೆ. ನಾಲ್ವರು ಸಚಿವರನ್ನ ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸಿ  10 ಸ್ಥಾನ ತುಂಬಲು ಕೈ ನಾಯಕರು  ಕಸರತ್ತು ಆರಂಭಿಸಿದ್ದಾರೆ.

ರಾಜ್ಯ ಸಂಪುಟ ವಿಸ್ತರಣೆ : ಯಾರು ಇನ್ - ಯಾರು ಔಟ್ ?
click me!