ಭಾರೀ ಪ್ರವಾಹ : ಜನಜೀವನ ತತ್ತರ!

By Web DeskFirst Published Sep 15, 2018, 3:25 PM IST
Highlights

ಭಾರೀ ಪ್ರಮಾಣದಲ್ಲಿ  ಅಪ್ಪಳಿಸಿದ ಚಂಡಮಾರುತದಿಂದ ರಾಜ್ಯದಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದ್ದು ಜನಜೀವನ ತತ್ತರಿಸಿದೆ. ಅಮೆರಿಕದ  ಉತ್ತರ ಕೆರೆಲಿನಾ ಮಳೆಯ ಅಬ್ಬರಕ್ಕೆ ನಲುಗಿದೆ. 

ವಿಲ್ಲಿಂಗ್ ಟನ್ :  ಉತ್ತರ ಕೆರೊಲಿನಾದಲ್ಲಿ ಭಾರೀ ಚಂಡಮಾರುತ ಅಪ್ಪಳಿಸಿದ್ದು, ನಗರದಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. 

ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಹಲವೆಡೆ ಮರಗಳು ಧರೆಗುರುಳಿವೆ. ನದಿಗಳು ಉಕ್ಕಿಹರಿಯುತ್ತುವೆ. ದಿನದಿನಕ್ಕೂ ಕೂಡ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಲವು ಕಡೆ ಭೂ ಕುಸಿತ ಸಂಭವಿಸಿದೆ.

ಗುರುವಾರದಿಂದಲೇ ಚಂಡಮಾರುತದ ಅಬ್ಬರ ಮಿತಿ ಮೀರಿದ್ದು ಇನ್ನಾದರೂ ಕೂಡ ತಣ್ಣಗಾಗಿಲ್ಲ. ವಿಲ್ಲಿಂಗ್ ಟನ್ ಪ್ರದೇಶದಲ್ಲಿ ಮನೆಯೊಂದರ ಮೇಲೆ ಮರವೊಂದು ಉರುಳಿ ಬಿದ್ದು  ತಾಯಿ - ಮಗು ಇಬ್ಬರೂ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ರಕ್ಷಣಾ ಕಾರ್ಯಾಚರಣೆಯು ಭರದಿಂದ ಸಾಗಿದೆ. ದಿನ ದಿನಕ್ಕೂ ಕೂಡ ಚಂಡಮಾರುತದ ಅಬ್ಬರ ಹೆಚ್ಚಾಗುತ್ತಲೇ ಇದೆ ಎಂದು ಗವರ್ನರ್ ರಾಯ್ ಕೂಪರ್ ಹೇಳಿದ್ದಾರೆ. 

ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಸ್ಥಳದಲ್ಲಿ ಕೆಲವು ಅಡಿಗಳಷ್ಟು ನೀರು ನಿಂತಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಹೇಳಿದೆ.  ಗಾಳಿಯೂ  ಒಂದು ಗಂಟೆಗೆ 150 ಕಿ.ಮೀ ವೇಗದಲ್ಲಿ ಬೀಸುತ್ತಿದೆ.

click me!