ಶ್ರವಣ ಬೆಳಗೊಳ ಮಸ್ತಕಾಭಿಷೇಕಕ್ಕೆ ತೆರೆ

By Web DeskFirst Published Sep 14, 2018, 9:09 AM IST
Highlights

ಬಾಹುಬಲಿ ಮಹಾ ಮಸ್ತಕಾಭಿಷೇಕ ಬೃಹತ್ ಉತ್ಸವಕ್ಕೆ ಶುಕ್ರವಾರ ವಿದ್ಯುಕ್ತ ತೆರೆ ಬೀಳಲಿದೆ.   ವಿಸರ್ಜನಾ ವಿಧಿ ಕಾರ್ಯಕ್ರಮದ ಮೂಲಕ ಮಸ್ತಕಾಭಿಷೇಕವನ್ನು ಮುಕ್ತಾಯಗೊಳಿಸಲಾಗುತ್ತದೆ. ಕಳೆದ 8 ತಿಂಗಳಿನಿಂದ ನಡೆದ ಬೃಹತ್ ಉತ್ಸವ ಇಂದು ಕೊನೆಗೊಳ್ಳಲಿದೆ. 

ಹಾಸನ :  ಶ್ರವಣ ಬೆಳಗೊಳದ ಬಾಹುಬಲಿ ಮಹಾ ಮಸ್ತಕಾಭಿಷೇಕ ಬೃಹತ್ ಉತ್ಸವಕ್ಕೆ ಶುಕ್ರವಾರ ವಿದ್ಯುಕ್ತ ತೆರೆ ಬೀಳಲಿದೆ.   ವಿಸರ್ಜನಾ ವಿಧಿ ಕಾರ್ಯಕ್ರಮದ ಮೂಲಕ ಮಸ್ತಕಾಭಿಷೇಕವನ್ನು ಮುಕ್ತಾಯಗೊಳಿಸಲಾಗುತ್ತದೆ. 

ಶ್ರೀ ‌ಕ್ಷೇತ್ರ ವಿಂಧ್ಯಗಿರಿಯಲ್ಲಿ ಜಯಮಂಗಲ ಮಹೋತ್ಸವ ಕಾರ್ಯಕ್ರಮವನ್ನು ನಡೆಸಲಿದ್ದು ಈ ಮೂಲಕ ಕಳೆದ 8 ತಿಂಗಳಿನಿಂದ ನಡೆದ ಬೃಹತ್ ಉತ್ಸವ ಕೊನೆಗೊಳ್ಳಲಿದೆ. 

24 ತೀರ್ಥಂಕರರ ಮೂರ್ತಿ ಹಾಗೂ ಭಗವಾನ್ ಬಾಹುಬಲಿ ಗೆ ಏಕ ಕಾಲದಲ್ಲಿ 108 ಕಲಶಗಳಿಂದ ಅಭಿಷೇಕ ಮಾಡಲಾಗುತ್ತದೆ. ಬಳಿಕ ವಿಸರ್ಜನಾ ವಿಧಿ ಕಾರ್ಯಕ್ರಮ ನಡೆಸಿ  ಪಾದಪೂಜೆ ಆರಂಭದ ನಂತರ ಓಕಳಿ ವಸಂತೋತ್ಸವವನ್ನೂ ನೆರವೇರಿಸಲಾಗುತ್ತದೆ. 

ಕಳೆದ ಫೆಬ್ರವರಿ ತಿಂಗಳ 7 ರಿಂದ 88ನೇ ಮಸ್ತಕಾಭಿಷೇಕ  ಶುಭಾರಂಭಗೊಂಡಿತ್ತು. ಈ ಉತ್ಸವಕ್ಕೆ ದೇಶ ವಿದೇಶಗಳಿಂದಲೂ ಕೂಡ ಲಕ್ಷಾಂತರ ಭಕ್ತ ಸಮೂಹ ಆಗಮಿಸಿತ್ತು. ಇಷ್ಟೂ ದಿನಗಳಲ್ಲಿ ವಿವಿಧ ರೀತಿಯ ಬಗೆ ಬಗೆಯ ದ್ರವ್ಯಗಳಲ್ಲಿ ಅಭಿಷೇಕ ಮಾಡಲಾಗಿದ್ದು, ಮತ್ತೆ 12 ವರ್ಷಗಳ ಬಳಿಕ ಉತ್ಸವ ನಡೆಯಲಿದೆ. 

click me!