ಜಗತ್ತಿನಲ್ಲಿಯೇ ಅತಿ ದೊಡ್ಡ ಸೈಬರ್ ದಾಳಿ: ಭಾರತ ಸೇರಿದಂತೆ 99 ರಾಷ್ಟ್ರಗಳ ಕಂಪ್ಯೂಟರ್'ಗಳು ಹ್ಯಾಕ್!

By Suvarna Web DeskFirst Published May 14, 2017, 3:14 AM IST
Highlights

ಜಗತ್ತಿನ ಇತಿಹಾಸದಲ್ಲೇ ಅತಿ ದೊಡ್ಡ  ಸೈಬರ್‌ ದಾಳಿ ನಡೆದಿದೆ. ನಿನ್ನೆಯಿಂದ ಲಕ್ಷಾಂತರ ಕಂಪ್ಯೂಟರ್‌'ಗಳು  ಹ್ಯಾಕ್  ಆಗಿದ್ದು,  ತುರ್ತು ಸೇವೆಗಳಿಗೆ ಅಡ್ಡಿಯಾಗಿದೆ. ಆಸ್ಪತ್ರೆಗಳಲ್ಲಿ  ರೋಗಿಗಳ ಕುರಿತ ಮಾಹಿತಿಯನ್ನು ಪಡೆಯಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಹಲವು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಭಾರತದ ಮೇಲೂ ಸೈಬರ್ ಎಫೆಕ್ಟ್ ದಾಳಿ ನಡೆಸಿದೆ.

ನವದೆಹಲಿ(ಮೇ.14): ಜಗತ್ತಿನ ಇತಿಹಾಸದಲ್ಲೇ ಅತಿ ದೊಡ್ಡ  ಸೈಬರ್‌ ದಾಳಿ ನಡೆದಿದೆ. ನಿನ್ನೆಯಿಂದ ಲಕ್ಷಾಂತರ ಕಂಪ್ಯೂಟರ್‌'ಗಳು  ಹ್ಯಾಕ್  ಆಗಿದ್ದು,  ತುರ್ತು ಸೇವೆಗಳಿಗೆ ಅಡ್ಡಿಯಾಗಿದೆ. ಆಸ್ಪತ್ರೆಗಳಲ್ಲಿ  ರೋಗಿಗಳ ಕುರಿತ ಮಾಹಿತಿಯನ್ನು ಪಡೆಯಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಹಲವು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಭಾರತದ ಮೇಲೂ ಸೈಬರ್ ಎಫೆಕ್ಟ್ ದಾಳಿ ನಡೆಸಿದೆ.

ಭಾರತ ಸೇರಿದಂತೆ ನಿನ್ನೆ  ವಿಶ್ವದ 99 ದೇಶಗಳಲ್ಲಿ 45 ಸಾವಿರ ಕ್ಕೂ ಹೆಚ್ಚು  ಸೈಬರ್‌ ದಾಳಿಯಾಗಿದೆ. ರಷ್ಯಾ ರಾಜಧಾನಿ ಮಾಸ್ಕೊದಲ್ಲಿರುವ ಸೈಬರ್‌ ಸೆಕ್ಯೂರಿಟಿ ಸಂಸ್ಥೆ ಕಾಸ್ಪರ್‌ಸ್ಕೈ ಲ್ಯಾಬ್‌ ಇದನ್ನು  ಮೊದಲಿಗೆ  ಪತ್ತೆ ಹಚ್ಚಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ಅಭಿವೃದ್ಧಿ ಪಡೆಸಿದ್ದಾರೆ ಎನ್ನಲಾದ ಹ್ಯಾಕರ್ ಟೂಲ್  ಕದ್ದಿರುವ ದುಷ್ಕರ್ಮಿಗಳು 99 ದೇಶಗಳ ಬೃಹತ್ ಕಂಪನಿಗಳ ಮೇಲೆ ಸೈಬರ ದಾಳಿ ನಡೆಸಿದ್ದಾರೆ.

RANSOMWARE' ಎಂಬ ಹೆಸರಿನ ಮೇಲೆ   ಸೈಬರ್‌ ದಾಳಿ ನಡೆದಿದೆ. ಮೊದಲು ಇಂಗ್ಲೆಂಡ್‌'ನ ನ್ಯಾಷನಲ್‌ ಹೆಲ್ತ್‌ ಸರ್ವೀಸ್‌ ಈ ಸೈಬರ್‌ ದಾಳಿಗೀಡಾಗಿದೆ. ಇದರಿಂದ ತುರ್ತು ಸೇವೆಗಳು ಸಿಗದೆ ರೋಗಿಗಳು ತೀವ್ರ ತೊಂದರೆ ಅನುಭವಿಸಿದ್ದಾರೆ.  ಕಂಪ್ಯೂಟರ್‌ಗಳ ಆಕ್ಸೆಸ್, ರಿಸ್ಟೋರ್ ಮಾಡಲು ಸೈಬರ್ ದಾಳಿಕೋರರು 300 ರಿಂದ 500 ರೂ ಡಾಲರ್ ಬೇಡಿಕೆಯನ್ನ ಇಟ್ಟಿದ್ದಾರೆ.

ಜಗತ್ತಿನಾದ್ಯಂತ ಸುಮಾರು 75 ಸಾವಿರ ಪೋಗ್ರಾಂಮ್ ಗಳು ಎನ್ಕ್ರಿಪ್ಟ್ ಆಗಿದ್ದು, ರಷ್ಯಾ, ಉಕ್ರೇನ್  ಮತ್ತು ತೈವಾನ್ ಕಂಪನಿಗಳನ್ನೆ ಹೆಚ್ಚು ಟಾರ್ಗೆಟ್ ಮಾಡಲಾಗಿದೆ ಎಂದು ಸಾಪ್ಟವೇರ್ ತಯಾರಿಕಾ ಕಂಪನಿ ಅವಾಸ್ತಾ ಹೇಳಿದೆ. ಸೈಬರ್ ದಾಳಿಯಿಂದ  ಆಸ್ಟ್ರೇಲಿಯಾ, ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಮೆಕ್ಸಿಕೊದ ಸಂಸ್ಥೆಗಳ ಮೇಲೆ  ಜಾಗತಿಕ ಪರಿಣಾಮ ಬೀರಿದೆ. ಈ ದಾಳಿಯಿಂದ ಬ್ರಿಟನ್‌ ಆರೋಗ್ಯ ಸೇವೆಯಲ್ಲಿನ  ಹಲವು ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಉಂಟಾಗಿದೆ.  ಇದು ಅಂತರರಾಷ್ಟ್ರೀಯ ದಾಳಿ ಎಂದು ಬ್ರಿಟನ್‌ ಪ್ರಧಾನಿ ಥೆರೆಸಾ ಮೇ ಹೇಳಿದ್ದಾರೆ.

ಈ ಸೈಬರ್ ದಾಳಿಯ ಬಿಸಿ ಭಾರದ ಮೇಲು ತಟ್ಟಿದ್ದು, ಆಂಧ್ರ ಪ್ರದೇಶದ ಚಿತ್ತೂರು, ಗುಂಟೂರು, ವಿಶಾಖಪಟ್ಟಣಂ, ಶ್ರೀಕಾಕುಳಂ ಹಾಗೂ ಕೃಷ್ಣ ಜಿಲ್ಲೆಗಳ 18 ಪೊಲೀಸ್‌ ಘಟಕಗಳ ಕಂಪ್ಯೂಟರ್‌ಗಳು ಕೂಡ ಹ್ಯಾಕ್‌ ಮಾಡಲಾಗಿದೆ. ಇದನ್ನು ಸರಿ ಪಡಿಸಲು ಹ್ಯಾಕರ್‌ಗಳು ಡಿಜಿಟಲ್‌ ಕರೆನ್ಸಿ ಬಿಟ್‌ ಕಾಯಿನ್‌ ಮೂಲಕ ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ.

ಒಟ್ಟಾರೆಯಾಗಿ  ಮೈಕ್ರೋಸಾಫ್ಟ್'ನ ವಿಂಡೋಸ್‌ ಆಪರೇಟಿಂಗ್‌ ಸಿಸ್ಟಮ್‌ ಬಳಕೆ ಹೊಂದಿರುವ ಕಂಪ್ಯೂಟರ್‌ಗಳು ಸೈಬರ್‌ ದಾಳಿಗೆ ತುತ್ತಾಗಿದ್ರೆ. ಆ್ಯಪಲ್‌'ನ ಐಒಎಸ್‌ ಆಪರೇಟಿಂಗ್‌ ಸಿಸ್ಟಮ್‌ ಒಳಗೊಂಡ ಕಂಪ್ಯೂಟರ್‌ಗಳು ಸುರಕ್ಷಿತವಾಗಿವೆ. ಸೈಬರ್ ದಾಳಿಯಿಂದ  ಅನೇಕ ಸಂಸ್ಥೆ ಹಾಗೂ ಕಂಪನಿಗಳು ಅವ್ಯವಸ್ಥೆಯ ಸುಳಿಯಲ್ಲಿ ಸಿಲುಕಿವೆ.

click me!