ಸಿದ್ದರಾಮಯ್ಯ ರಣತಂತ್ರಕ್ಕೆ ಶಿರಬಾಗಿದ ದೇವೇಗೌಡ..!

By Web DeskFirst Published Nov 17, 2018, 4:11 PM IST
Highlights

ತೀವ್ರ ಕುತೂಹಲ ಕೆರಳಿಸಿದ ಮೈಸೂರು ಮಹಾನಗರ ಪಾಲಿಕೆಯ ಮೇಯರ್  ಹಾಗೂ ಉಪಮೇಯರ್ ಎಲೆಕ್ಷನ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೇಲುಗೈ ಸಾಧಿಸಿದ್ದಾರೆ. 

ಮೈಸೂರು, [ನ.17]: ಎಲ್ಲ ಹೈಕಮಾಂಡ್ ನಂತೆ ನಡೆಯುತ್ತದೆ, ಮೈಸೂರಲ್ಲಿ ನಮ್ಮದೇನೂ ನಡೆಯುವುದಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಹಿರಿಯ ಮೈತ್ರಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಮೈಸೂರು ಮೇಯರ್ ಎಲೆಕ್ಷನ್ ಸಂಬಂಧ ಇಂದು ಮೈಸೂರಿನಲ್ಲಿ ಮಾತನಾಡಿದ ಜಿಟಿಡಿ, ಕಾಂಗ್ರೆಸ್ ಗೆ ಮೇಯರ್ ಗಿರಿ ಸಿಕ್ಕಿದೆ. ಮೈಸೂರು JDS ನಾಯಕರಿಗೆ ಕಿರಿಕಿರಿಯಾಗಿದೆ ಹಾಗೂ ಇದರ ಉಸಾಬರಿ ಸಾಕಪ್ಪ ಸಾಕು ಎಂದರು. 

ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್‌ಗೆ G.T ದೇವೇಗೌಡ ಫುಲ್ ಸೈಲೆಂಟ್..!

ಮೈಸೂರಿನಿಂದ ಉತ್ತಮ ಸಂದೇಶ ನೀಡಲು, ಜೆಡಿಎಸ್ ಮೇಯರ್ ಸ್ಥಾನ ತ್ಯಾಗ ಮಾಡಿದ್ದೇವೆ ಅಂತ ಹೇಳಿದ್ದಾರೆ. ವರಿಷ್ಠರು ಹೇಳಿದ ಹಾಗೆ ಕೇಳಲೇಬೇಕು. ಅವರು ಹೇಳಿದಂತೆ ಶಿರಬಾಗಿ ಒಪ್ಪಿಕೊಂಡಿದ್ದೇವೆ ಅಂತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಹೇಳಿದ್ದಾರೆ.

ಸಿದ್ದು ರಣತಂತ್ರಕ್ಕೆ ಶಿರಬಾಗಿದ ಜಿಟಿಡಿ:
ಹೌದು, ಮೈಸೂರು ಪಾಲಿಕೆ ಮೇಯರ್ ಸ್ಥಾನವನ್ನ ಒಲಿಸಿಕೊಳ್ಳಲು ಬಿಜೆಪಿ ಜೊತೆಗೂ ಮಾತುಕತೆ ನಡೆಸಿದ್ದ ಸಚಿವ ಜಿ.ಟಿ. ದೇವೇಗೌಡ ಅವರಿಗೆ ಹಿನ್ನಡೆಯಾಗಿದೆ. 

ಹೇಗಾದ್ರೂ ಮಾಡಿ ಮೇಯರ್ ಹುದ್ದೆಯನ್ನ ಕಾಂಗ್ರೆಸ್ ಗೆ ಒಲಿಸಿಕೊಳ್ಳಬೇಕೆಂದು ಪಟಣತೊಟ್ಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ನೇರವಾಗಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಜೊತೆ ಮಾತುಕತೆ ನಡೆಸಿದ್ದು, ಸಿದ್ದು ಮಾತಿಗೆ ದೊಡ್ಡ ಗೌಡ್ರು ಜೈ ಎಂದಿದ್ದಾರೆ. 
ಬಳಿಕ ಜಿಟಿಡಿಗೆ ದೊಡ್ಡಗೌಡ್ರು ಖಡಕ್ ಸಂದೇಶವೊಂದನ್ನ ರವಾನಿಸಿದ್ದಾರೆ. ಇದ್ರಿಂದ ಮೇಯರ್ ಗೆ ಹಗ್ಗಜಗ್ಗಾಟ ನಡೆಸಿದ್ದ ಜಿಟಿಡಿ ಯಾವುದಕ್ಕೂ ತಲೆ ಹಾಕದೇ ಸೈಲೆಂಟ್ ಆಗಿದ್ರು.

ಒಟ್ಟಿನಲ್ಲಿ ಸಿದ್ದು ರಣತಂತ್ರಕ್ಕೆ ಜಿ.ಟಿ. ದೇವೇಗೌಡ ಶಿರಬಾಗಿದಂತೂ ಸತ್ಯ.

click me!