Latest Videos

ಸರ್ಕಾರಿ ನೌಕರಿ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ; ಡಾ ಅಜಯ್ ಸಿಂಗ್ ಮಾಜಿ ಆಪ್ತ ಸಹಾಯಕ ಬಂಧನ

By Ravi JanekalFirst Published May 23, 2024, 7:47 AM IST
Highlights

ಕೆಕೆಆರ್‌ಡಿಬಿಯಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಸಾರ್ವಜನಿಕರಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ಡಾ.ಅಜಯ್‌ ಸಿಂಗ್ ಮಾಜಿ ಆಪ್ತ ಸಹಾಯಕನ್ನ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ (ಮೇ.23): ಕೆಕೆಆರ್‌ಡಿಬಿಯಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಸಾರ್ವಜನಿಕರಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ಡಾ.ಅಜಯ್‌ ಸಿಂಗ್ ಮಾಜಿ ಆಪ್ತ ಸಹಾಯಕನ್ನ ಬಂಧಿಸಲಾಗಿದೆ.

ಪರಶುರಾಮ್, ಬಂಧಿತ ಆರೋಪಿ. ಜೇವರ್ಗಿ ಕ್ಷೇತ್ರದ ಶಾಸಕ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವ ಡಾ. ಅಜಯಸಿಂಗ್ ಅವರ ಮಾಜಿ ಆಪ್ತ ಸಹಾಯಕನಾಗಿದ್ದ ಆರೋಪಿ. ಸಾರ್ವಜನಿಕರಿಗೆ, ಗುತ್ತಿಗೆದಾರರಿಗೆ ಕಾಮಗಾರಿ ಕೆಲಸ, ಸರ್ಕಾರಿ ನೌಕರಿ ಕೊಡಿಸುವುದಾಗಿ 14.90 ಲಕ್ಷ ರೂಪಾಯಿ ವಂಚಿಸಿದ್ದ ಭೂಪ. ಕಳೆದ 2020ರಿಂದ 2024ರ 40ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪಿ.

 

ಕಲಬುರಗಿ ಮಾಜಿ ಸಂಸದ, ಮಲ್ಲಿಕಾರ್ಜುನ ಖರ್ಗೆ ಪರಮಾಪ್ತ ಇಕ್ಬಾಲ್ ಅಹ್ಮದ್ ಸರಡಗಿ ವಿಧಿವಶ

ಖದೀಮನ ವಂಚನೆ ಜಾಲಕ್ಕೆ ಸಾರ್ವಜನಿಕರಷ್ಟೇ ಅಲ್ಲ, ಎಎಸ್‌ಐ ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಸಿಲುಕಿಕೊಂಡಿದ್ದಾರೆ. ಬೀದರ್ ಮೂಲದ ಕಿರಣಕುಮಾರ್ ಎಂಬುವವರಿಗೆ ಸರ್ಕಾರಿ ನೌಕರಿ ಕೊಡಿಸುವುದು ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವ ಆರೋಪಿ.  ವಂಚಿಸಿರುವ ಆರೋಪಿ. ಬೀದರ್ ಸಂಸದ ಭಗವಂತ್ ಖೂಬಾ ಅವರ ಅಳಿಯ ಬಾಉರಾವ್ ತಂದೆ ಮಾಣಿಕ್ ಅವರಿಗೂ ಪಂಗನಾಮ ಹಾಕಿರುವ ಭೂಪ. ವಿವಿಧ ಕಾಮಗಾರಿಗಳ ಹೆಸರಲ್ಲಿ ಸುಮಾರು 15 ಲಕ್ಷ ರೂಪಾಯಿ ವಸೂಲಿ ಮಾಡಿರುವ ಪರಶುರಾಮ್ ಈ ಬಗ್ಗೆ ಬಾಪುರಾವ್ ದಾಖಲೆ ಸಮೇತ ಪೊಲೀಸರಿಗೆ ದೂರು ನೀಡಿದಾಗಲೇ ಖದೀಮನ ಕೈಚಳಕ ಬಯಲಿಗೆ ಬಂದಿದೆ. 

ಪಾನ್‌ಕಾರ್ಡ್‌ ಕುರಿತು ಹುಷಾರಾಗಿರಿ..ಗುಜರಾತ್‌ನ ಚಾಯ್‌ವಾಲಾಗೆ ಬಂತು 49 ಕೋಟಿಯ ಐಟಿ ನೋಟಿಸ್‌!

ಯಾವಾಗ ದೂರು ದಾಖಲಾಯಿತೋ ಇನ್ನು ಪೊಲೀಸರು ಬೆನ್ನು ಹತ್ತುತ್ತಾರೆಂದು ಮುಂಚಿತವಾಗಿ ಊರು ತೊರೆದಿರುವ ಖದೀಮ. ಪೊಲೀಸರ ಕಣ್ತಪ್ಪಿಸಲು, ಪೊಲೀಸರ ಕೈಗೆ ಸಿಕ್ಕಿಬಿಳದಿರಲು ತಲೆಬೋಳಿಸಿಕೊಂಡು ಬೆಂಗಳೂರಿನ ಲಾಡ್ಜ್‌ವೊಂದರಲ್ಲಿ ತಂಗಿದ್ದ ಆಸಾಮಿ, ಮೇಲಿಂದ ಮೇಲೆ ವಂಚನೆಗೊಳಗಾದವರ ದೂರುಗಳು ಬಂದ ಹಿನ್ನೆಲೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಖದೀಮನ ಬೆನ್ನು ಬಿದ್ದಿದ್ದರು. ಕೊನೆಗೂ ಆರೋಪಿಯನ್ನ ಹೆಡೆಮುರಿಕಟ್ಟಿ ಎಳೆದು ತಂದು ವಿಚಾರಣೆಗೊಳಪಡಿಸಿದ್ದಾರೆ.

click me!