ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಮೇಲೆ ವಾಗ್ದಾಳಿ ಮಾಡಿದ್ದಾರೆ. ಪ್ರಶ್ನೆಗಳ ಬಾಣ ಎಸೆದಿರುವ ಸಿದ್ದರಾಮಯ್ಯ ಅಮಿತ್ ಶಾ ಮತ್ತು ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಯಚೂರು[ಫೆ.17] ಬಿಜೆಪಿಯವರ ಮನೆ ದೇವರೇ ಸುಳ್ಳು ಹೇಳುವುದು. ಅಮಿತ್ ಶಾ ಮಾತಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಿಜೆಪಿಯವರು ಸೋತ ಮೇಲೆ ನಾವೂ ಘಟಬಂಧನದ ಪ್ರಧಾನಿ ಯಾರು ಅಂತ ತೀರ್ಮಾನ ಮಾಡ್ತೇವೆ. ಬಿಜೆಪಿಯವರು ನಿರಾಪರಾಧಿನಾ ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯವರು ನಿರಾಪರಾಧಿನಾ ? ನಿರಾಪರಾಧಿಗಳಾದ್ರೆ ಎಸ್ ಐಟಿ ಬಗ್ಗೆ ಭಯ ಯಾಕೆ, ಯಾಕೆ ವಿರೋಧ ಮಾಡ್ತಿದ್ದಾರೆ. ಎಸ್ ಐಟಿ ಬೇಡ ಅಂದ್ರೆ ಅಮಿತ್ ಶಾ, ಯಡಿಯೂರಪ್ಪ ಅವರ ಕೈಯಿಂದ ತನಿಖೆ ಮಾಡಿಸಬೇಕಾ? ವ್ಯವಸ್ಥೆ ಮೇಲೆ ನಂಬಿಕೆ ಇರದೇ ಇರುವವರು ಅಧಿಕಾರಕ್ಕೆ ಬರಲು ಲಾಯಕ್ಕಾ ?ನನ್ನ ಕಂಡ್ರೆ ಬಿಜೆಪಿ ಅವರಿಗೆ ಭಯ ಎಂದರು.
undefined
ಉಮೇಶ್ ಜಾಧವ್ ಎರಡು ಪತ್ರ ಕೊಟ್ಟಿದ್ದಾರೆ. ನಾನು ಕಾಂಗ್ರೆಸ್ ನಲ್ಲಿ ಇರುತ್ತೇನೆ ಅಂತ ಹೇಳಿದ್ದಾರೆ. ಪಕ್ಷದಲ್ಲಿ ಗೆದ್ದರೆ ಪಕ್ಷಕ್ಕೆ ನಿಷ್ಠಾವಂತರಾಗಿರಬೇಕು. ಬಿಜೆಪಿಯವರು ಸರ್ಕಾರ ಕೆಡವಲು ಪ್ರಯತ್ನ ಮಾಡಿ ಫೇಲ್ ಆಗಿದ್ದಾರೆ ಎಂದು ಲೇವಡಿ ಮಾಡಿದರು.