ಕಿಮ್‌ ಜೊತೆ ‘ಲವ್‌’ ಆಗಿದೆ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್‌

By Web DeskFirst Published Oct 1, 2018, 12:26 PM IST
Highlights

ಕಿಮ್‌ ಜೊಂಗ್‌ ಮತ್ತು ತಮ್ಮ ನಡುವೆ ‘ಪ್ರೀತಿಯಾಗಿದೆ’, ತಮ್ಮಿಬ್ಬರ ಪ್ರಣಯ ‘ಸುಂದರವಾದ ಪತ್ರ’ದ ಮೂಲಕ ನಡೆದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. 

ವಾಷಿಂಗ್ಟನ್‌: ಉತ್ತರ ಕೊರಿಯಾದ ನಾಯಕ ಕಿಮ್‌ ಜೊಂಗ್‌ ಮತ್ತು ತಮ್ಮ ನಡುವೆ ‘ಪ್ರೀತಿಯಾಗಿದೆ’, ತಮ್ಮಿಬ್ಬರ ಪ್ರಣಯ ‘ಸುಂದರವಾದ ಪತ್ರ’ದ ಮೂಲಕ ನಡೆದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಪಶ್ಚಿಮ ವರ್ಜಿನಿಯಾದಲ್ಲಿ ತಮ್ಮ ರಿಪಬ್ಲಿಕನ್‌ ಪಕ್ಷದ ಸ್ಥಳೀಯ ಅಭ್ಯರ್ಥಿಯ ಪರವಾಗಿ ನಡೆದ ರಾರ‍ಯಲಿಯಲ್ಲಿ ಟ್ರಂಪ್‌, ಕಿಮ್‌ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

 ‘ಕಿಮ್‌ ನನಗೆ ಸುಂದರವಾದ ಪತ್ರಗಳನ್ನು ಬರೆದಿದ್ದಾರೆ. ಅವು ಶ್ರೇಷ್ಠ ಪತ್ರಗಳು. ನಮ್ಮ ನಡುವೆ ಪ್ರೀತಿ ಅರಳಿದೆ’ ಎಂದು ಟ್ರಂಪ್‌ ಭಾರೀ ಜನಸ್ತೋಮವನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದರು. ಇತ್ತಿಚೆಗೆ ವಿಶ್ವಸಂಸ್ಥೆಯಲ್ಲೂ ಕಿಮ್‌ ಬಗ್ಗೆ ಟ್ರಂಪ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು. 

ಈ ಹಿಂದೆ ಅಮೆರಿಕ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿ ಹೇಳುತ್ತಿದ್ದ ಕಿಮ್‌, ಇದ್ದಕ್ಕಿದ್ದಂತೆ ಅಮೆರಿಕದೊಂದಿಗೆ ಸ್ನೇಹ ಬಯಸಿ, ಮಾತುಕತೆಯನ್ನೂ ನಡೆಸಿದ್ದಾರೆ. ಅದರಿಂದಾಚೆಗೆ ಎರಡೂ ರಾಷ್ಟ್ರಗಳ ನಡುವೆ ನಂಬಿಕೆ ವೃದ್ಧಿಸುವ ಕಾರ್ಯ ನಡೆಯುತ್ತಿದೆ.

click me!