ಶೀಘ್ರದಲ್ಲೇ ಫೇರ್ ನೆಸ್ ಕ್ರೀಮ್ ಗಳು ಬ್ಯಾನ್?

By Web DeskFirst Published Oct 10, 2018, 1:37 PM IST
Highlights

ಶೀಘ್ರದಲ್ಲೇ ದೇಶದಲ್ಲಿ ಫೇರ್ ನೆಸ್ ಕ್ರೀಮ್ ಗಳ ಮಾರಾಟಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಅವುಗಳಲ್ಲಿ ಅತ್ಯಂತ ಮಾರಕ ಕೆಮಿಕಲ್ ಗಳು ಇರುವುದರಿಂದ ಕ್ರೀಮ್ ಗಳನ್ನು ಬ್ಯಾನ್ ಮಾಡುವ ಬಗ್ಗೆ ಚಿಂತನೆ ನಡೆದಿದೆ. 

ನವದೆಹಲಿ :  ಒಂದು ವಾರದಲ್ಲಿ ಬೆಳ್ಳಗಾಗಿ. ದಿನಪೂರ್ತಿ ಮುಖದ ಕಾಂತಿಯಿಂದ ಹೊಳೆಯಿರಿ ಎನ್ನುವ ಮೋಹಕ ಜಾಹಿರಾತುಗಳ ಮೂಲಕ ಮಾರುಕಟ್ಟೆ ವೃದ್ಧಿಸಿಕೊಳ್ಳುತ್ತಿರುವ ಅನೇಕ ಫೇರ್ ನೆಸ್ ಕ್ರೀಮ್ ಗಳಿಗೆ ಸದ್ಯವೇ ಬ್ರೇಕ್ ಬೀಳುವ ಸಾಧ್ಯತೆ ಇದೆ. 

ಇಂತಹ ಫೇರ್ ನೆಸ್ ಕ್ರೀಮ್ ಗಳಲ್ಲಿ ಅತ್ಯಂತ ಹಾನಿಕಾರಕ ಕೆಮಿಕಲ್ ಗಳಿದ್ದು ಚರ್ಮವನ್ನು ಬೆಳ್ಳಗೆ ಮಾಡಲು ಸ್ಟಿರಾಯ್ಡ್ ನಂತ  ಅಂಶಗಳನ್ನು  ಸೇರಿಸಲಾಗಿರುತ್ತದೆ. 

ಇದರಿಂದ ಚರ್ಮಕ್ಕೆ ಅತ್ಯಂತ ಹಾನಿ ಎದುರಾಗುತ್ತದೆ. ಅಲರ್ಜಿ ತುರಿಕೆಯಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಡರ್ಮಾಟಲಜಿಸ್ಟ್ ಹೇಳುತ್ತಾರೆ.  

ಈ ನಿಟ್ಟಿನಲ್ಲಿ ಡ್ರಗ್ ಅಂಡ್ ಕಾಸ್ಮೆಟಿಕ್ ಕಾಯ್ದೆ 1945 ರ ಪ್ರಕಾರ ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದ್ದು  ಈ ನಿಟ್ಟಿನಲ್ಲಿ ದೇಶದಲ್ಲಿ ಶೀಘ್ರವೇ ಇಂತಹ ಕ್ರೀಮ್ ಗಳು ಬ್ಯಾನ್ ಆಗುವ ಸಾಧ್ಯತೆ ಇದೆ.

click me!