171 ಗ್ರಾಮಸ್ಥರನ್ನು ಕೊಲೆಗೈದ ಯೋಧಗೆ 5160 ವರ್ಷ ಜೈಲು!

By Web DeskFirst Published Nov 23, 2018, 8:24 AM IST
Highlights

ಗ್ವಾಟೆಮಾಲಾದ ನ್ಯಾಯಾಲಯವೊಂದು ಸಾಮೂಹಿಕ ಹತ್ಯೆ ಪ್ರಕರಣದ ದೋಷಿಗೆ 5160 ವರ್ಷ ಜೈಲು ಶಿಕ್ಷೆ ವಿಧಿಸಿದೆ. 

ಘೋರ ಅಪರಾಧ ಪ್ರಕರಣದ ದೋಷಿಗಳಿಗೆ 10, 20 ವರ್ಷ ಜೈಲು ಶಿಕ್ಷೆ ಅಥವಾ ಜೀವಾವಧಿ, ಗಲ್ಲು ಶಿಕ್ಷೆ ವಿಧಿಸುವುದು ಗೊತ್ತು. ಆದರೆ ಗ್ವಾಟೆಮಾಲಾದ ನ್ಯಾಯಾಲಯವೊಂದು ಸಾಮೂಹಿಕ ಹತ್ಯೆ ಪ್ರಕರಣದ ದೋಷಿಗೆ 5160 ವರ್ಷ ಜೈಲು ಶಿಕ್ಷೆ ವಿಧಿಸಿದೆ.

1982ರಲ್ಲಿ ದೇಶದಲ್ಲಿ ನಡೆದ ಆಂತರಿಕ ಕಲಹದ ವೇಳೆ ಡೋಸ್‌ ಎರ್ರೆಸ್‌ ಎಂಬಲ್ಲಿ 201 ಗ್ರಾಮಸ್ಥರನ್ನು ಯೋಧ ಸ್ಯಾಂಟೋಸ್‌ ಲೋಪೇಜ್‌ ಎಂಬಾತ ಹತ್ಯೆ ಮಾಡಿದ್ದ ಎಂಬ ಆರೋಪ ಇತ್ತು. ಈತನನ್ನು 2016ರಲ್ಲಿ ಅಮೆರಿಕದಲ್ಲಿ ಬಂಧಿಸಿ, ಗ್ವಾಟೆಮಾಲಾಕ್ಕೆ ಗಡಿಪಾರು ಮಾಡಲಾಗಿತ್ತು. ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು, 171 ಜನರ ಹತ್ಯೆ ಕೇಸಲ್ಲಿ ಈತನನ್ನು ದೋಷಿ ಎಂದು ಹೇಳಲಾಗಿದೆ.

ಪ್ರತಿ ಹತ್ಯೆಗೆ 30 ವರ್ಷದಂತೆ ಸ್ಯಾಂಟೋಸ್‌ಗೆ 5130 ವರ್ಷ ಶಿಕ್ಷೆ ವಿಧಿಸಲಾಗಿದೆ.

click me!