ಮಹಿಳೆಯರಿಗೆ ಸಮಾನತೆ ಬೇಡ: ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ

By Web DeskFirst Published Feb 12, 2019, 4:06 PM IST
Highlights

ಸ್ತ್ರೀ -ಪುರುಷ ಸಮಾನತೆ ಬಗ್ಗೆ ಆಗಾಗ ಧ್ವನಿ ಏಳುತ್ತಿರುತ್ತದೆ. ಪುರುಷರಷ್ಟೇ ಮಹಿಳೆಯರಿಗೂ ಸಮಾನತೆ ಕೊಡಬೇಕೆಂದು ವಾದ ಕೇಳಿ ಬರುತ್ತದೆ. ಹೀಗಿರುವಾಗ ಮಹಿಳೆಯರಿಗೆ ಸಮಾನತೆ ಬೇಡ ಎಂದು  ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಬೆಂಗಳೂರು (ಫೆ. 12): ಸ್ತ್ರೀ -ಪುರುಷ ಸಮಾನತೆ ಬಗ್ಗೆ ಆಗಾಗ ಧ್ವನಿ ಏಳುತ್ತಿರುತ್ತದೆ. ಪುರುಷರಷ್ಟೇ ಮಹಿಳೆಯರಿಗೂ ಸಮಾನತೆ ಕೊಡಬೇಕೆಂದು ವಾದ ಕೇಳಿ ಬರುತ್ತದೆ. ಹೀಗಿರುವಾಗ ಮಹಿಳೆಯರಿಗೆ ಸಮಾನತೆ ಬೇಡ ಎಂದು  ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಮಹಿಳೆಯರು ಪುರುಷರಿಗೆ ಸಮಾನರಲ್ಲ. ಪುರುಷರಿಗೆ ಇರುವ ಎಲ್ಲ ಸ್ವಾತಂತ್ರ್ಯವೂ ಮಹಿಳೆಯರಿಗೆ ಬೇಡ. ಮಹಿಳೆಯರ ವೈಯುಕ್ತಿಕ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಬೇರೆ ಬೇರೆ. ಪುರುಷರು ರಾತ್ರಿ ಪಬ್‌, ರೆಸ್ಟೋರೆಂಟ್‌ನಲ್ಲಿ ಕುಡಿಯುತ್ತಾರೆ. ಮಹಿಳೆಯರಿಗೂ ಅಂತಹ ಸ್ವಾತಂತ್ರ್ಯ ಬೇಕು ಅಂಥ ನಾನು ಬಯಸುವುದಿಲ್ಲ ಎಂದು ಭಾರತೀ ಶೆಟ್ಟಿ ಹೇಳಿದ್ದಾರೆ. 

ಮಹಿಳೆಯರಿಗೆ ಸಾಂಪ್ರದಾಯಿಕ ಇತಮಿತಿಗಳಿವೆ. ಪ್ರತಿ ಧರ್ಮದಲ್ಲೂ ಮಹಿಳೆಯರಿಗೆ ಧಾರ್ಮಿಕ ಚೌಕಟ್ಟಿದೆ. ಆ ಚೌಕಟ್ಟನ್ನು ಮೀರಲು ನಾನು ಬಯಸುವುದಿಲ್ಲ. ಶಬರಿಮಲೆ ದೇವಾಲಯ ಪ್ರವೇಶಕ್ಕೂ ನಮ್ಮ ವಿರೋಧವಿದೆ ಎಂದು ಭಾರತೀ ಶೆಟ್ಟಿ ಹೇಳಿದ್ದಾರೆ.  

click me!