ವಿದ್ಯುತ್ ಚಿತಾಗಾರ ಬಂದ್| ಸೊಲ್ಲಾಪುರದಲ್ಲಿ ಮಿತಿಮೀರಿದ ಕೊರೋನಾ ಆರ್ಭಟ| ಸೊಲ್ಲಾಪುರ ನಗರದಲ್ಲಿ ಕೊರೋನಾದಿಂದ ಪ್ರತಿನಿತ್ಯ 30ಕ್ಕೂ ಅಧಿಕ ಜನರ ಸಾವು| ಶವಗಳನ್ನ ಸುಡೋದಕ್ಕೆ ಸೊಲ್ಲಾಪುರ ಮಹಾನಗರ ಪಾಲಿಕೆ ಅಧಿಕಾರಿಗಳ ಪರದಾಟ|
ಸೊಲ್ಲಾಪುರ(ಏ.18): ಮಹಾಮಾರಿ ಕೊರೋನಾದಿಂದ ಸತ್ತವರ ಶವ ಸುಡಲು ಇದ್ದ ವಿದ್ಯುತ್ ಚಿತಾಗಾರದ ಮಷಿನ್ ಸುಟ್ಟುಹೋದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ಹೀಗಾಗಿ ಶವಗಳನ್ನ ಸುಡೋದಕ್ಕೂ ಸೊಲ್ಲಾಪುರ ಮಹಾನಗರ ಪಾಲಿಕೆ ಅಧಿಕಾರಿಗಳು ಪರದಾಟ ನಡೆಸುತ್ತಿದ್ದಾರೆ.
ಸೊಲ್ಲಾಪುರ ನಗರದಲ್ಲಿ ಡೆಡ್ಲಿ ಕೊರೋನಾದಿಂದ ಪ್ರತಿನಿತ್ಯ 30ಕ್ಕೂ ಅಧಿಕ ಜನರ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಗರದಲ್ಲಿದ್ದ ವಿದ್ಯುತ್ ಚಿತಾಗಾರದ ಮಷಿನ್ ಸುಟ್ಟುಹೋದ ಪರಿಣಾಮ ಗ್ಯಾಸ್ ಘಟಕದ ಮೂಲಕ ಶವಗಳನ್ನ ಸುಡಲಾಗುತ್ತಿದೆ ಎಂದು ವಿದ್ಯುತ್ ಚಿತಾಗಾರ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
undefined
ಒಂದೇ ಚಿತೆಯಲ್ಲಿ 5 ಸೋಂಕಿತರ ಶವ ಇಟ್ಟು ಅಂತ್ಯಕ್ರಿಯೆ!
ವಿದ್ಯುತ್ ಚಿತಾಗಾರದ ಮಷಿನ್ ಸುಟ್ಟುಹೋಗಿ 18-20 ಗಂಟೆ ಅಗಿದೆ. ಹೀಗಾಗಿ ಹಳೆ ಪದ್ದತಿಯಂತೆ ಗ್ಯಾಸ್ ಘಟಕದ ಮೂಲಕ ಶವಸಂಸ್ಕಾರ ನೆರವೇರಿಸಲಾಗುತ್ತಿದೆ. ಕೊರೋನಾ ಎರಡನೇ ಅಲೆ ಹಾವಳಿಗೆ ಸೊಲ್ಲಾಪುರದಲ್ಲಿ ಯುವಕ ಯುವತಿಯರೇ ಹೆಚ್ಚಾಗಿ ಸಾವನ್ನಪ್ಪುದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಬಲು ಜೋರಾಗಿದೆ. ವೈರಸ್ ದಾಳಿಯಿಂದ ರಕ್ಷಿಸಿಕೊಳ್ಳಲು ರಾಜ್ಯ ಸರ್ಕಾರ 15 ದಿನ ಮಹಾರಾಷ್ಟ್ರದಲ್ಲಿ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಅದ್ರೂ ಕೂಡ ಡೆಡ್ಲಿ ವೈರಸ್ ಮಾತ್ರ ತನ್ನ ಅಟ್ಟಹಾಸವನ್ನ ನಿಲ್ಲಿಸುತ್ತಿಲ್ಲ.