2020 ಕ್ಕೆ ಚಿನ್ನ ಪಡೆಯುವುದೇ ನನ್ನ ಗುರಿ: ದೀಪಾ ಮಲ್ಲಿಕ್

By Suvarna web DeskFirst Published Nov 16, 2016, 3:30 PM IST
Highlights

ನಾನು ಮೂಲತಃ ಬೈಕರ್ 15  ವರ್ಷಗಳ ಹಿಂದೆ ಪಾರ್ಶ್ವ ವಾಯುವಿನಿಂದಾಗಿ ಕಾಲು ಕಳೆದುಕೊಂಡ ನಾನು ಅಸಹಾಯಕಳಾಗದೆ ಧೈರ್ಯದಿಂದ ಕ್ರೀಡೆಯಲ್ಲಿ ಆಸಕ್ತಳಾಗಿ ಮುಂದುವರೆಸಿದೆ ಆಗ ಬೈಕ್ ರೈಡರ್‌ಗಳು ಧೈರ್ಯ ತುಂಬಿದರು ಹೀಗೆಯೇ ಸಾಧನೆಗೆ ಇವೆಲ್ಲವೂ ಸಾಥ್ ನೀಡಿದವು ಹಾಗೆಯೇ ಪರಿಶ್ರಮದ ಜೊತೆೆಗೆ ದೇವರ ಆಶೀರ್ವಾದವೂ ಬೇಕು. ದೇಶಕ್ಕಾಗಿ ಶ್ರಮಿಸುವದು ನಮ್ಮೆಲ್ಲರ ಕರ್ತವ್ಯ, ಅದಕ್ಕಾಗಿ ಬೇಟಿ ಬಚಾವೋ ಬೇಟಿ ಪಡಾವೋ ಜೊತೆ ಬೇಟಿಕೋ ಖಿಲಾವೋ ಎಂಬ ಸಂದೇಶವನ್ನು ದೇಶಾದ್ಯಂತ ಸಾರುತ್ತಿದ್ದೇವೆ ಎಂದರು. 

ಬೀದರ್ ( ನ.16):  ಈಗ ಬೆಳ್ಳಿ, ಮುಂದೆ ಚಿನ್ನ. ಇದುವೇ ನನ್ನ ಗುರಿ. 2020 ರಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಮುಡಿಗೇರಿಸಿಕೊಳ್ಳುವುದಕ್ಕೆ ತಯಾರಿ ಆರಂಭವಾಗಿದೆ. ಆರೋಗ್ಯ ಸರಿಯಿದ್ದರೆ ಬಂಗಾರ ಗ್ಯಾರಂಟಿ.

ಇಷ್ಟೆಲ್ಲ ಹೇಳಿದ್ದು ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಶಾಟ್‌ಫುಟ್ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿರುವ ದೇಶದ ಮೊದಲ ಮಹಿಳಾ ಕ್ರೀಡಾಪಟು ದೀಪಾ ಮಲ್ಲಿಕ್. ಪ್ಯಾರಾಲಿಂಪಿಕ್ಸ್‌ಗಾಗಿ ಎರಡು ವರ್ಷ ಎಲ್ಲದರಿಂದಲೂ ದೂರವುಳಿದು ಕ್ರೀಡೆಯತ್ತ ಕಠಿಣ ಶ್ರಮ ಹಾಕಿದ್ದೆ ಇದು ಇಷ್ಟಕ್ಕೆ ನಿಂತಿಲ್ಲ ಮುಂದುವರೆದಿದೆ ಎಂದರು.
ಚಿನ್ನದತ್ತ ಗುರಿ:
ಬುಧವಾರ ನಗರದ ಪುಣ್ಯ ಕ್ಷೇತ್ರ ಗುರುದ್ವಾರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಏಷಿಯನ್ ಗೇಮ್ಸ್, ಕಾಮೆನ್‌ವೆಲ್ತ್‌ನಲ್ಲಿ ಸಾಧನೆ ಮಾಡಿದ್ದು ಇದೀಗ ಬೆಳ್ಳಿ ಪದಕ ಗಿಟ್ಟಿಸಿರುವ ನಾನು 2020ರಲ್ಲಿ ಚಿನ್ನದ ಪದಕದತ್ತ ಗುರಿ ನೆಟ್ಟಿದ್ದೇನೆ. ಗೆಳೆಯರು ಪ್ಯಾರಾಲಿಂಪಿಕ್ಸ್‌ನಲ್ಲಿ ನನ್ನ ಗೆಲುವಿವಾಗಿ ಗುರುದ್ವಾರದಲ್ಲಿ ಇಲ್ಲಿನ ಮೌಂಟಿ ಸಿಂಗ್ ಹಾಗೂ ಸ್ನೇಹಿತರು ಪ್ರಾರ್ಥನೆ ಸಲ್ಲಿಸಿದ್ದರು ಅದಕ್ಕಾಗಿ ಗುರುದ್ವಾರ ದರ್ಶನ ಪಡೆಯಲು ಬಂದಿದ್ದೇನೆ. ಗುರುವಿನ ಮುಂದೆ ಪದಕ ಇಟ್ಟು ದರ್ಶನ ಪಡೆದು ಪಾವನಳಾಗಿದ್ದೇನೆ ಎಂದರು. 

ನಾನು ಮೂಲತಃ ಬೈಕರ್ 15  ವರ್ಷಗಳ ಹಿಂದೆ ಪಾರ್ಶ್ವ ವಾಯುವಿನಿಂದಾಗಿ ಕಾಲು ಕಳೆದುಕೊಂಡ ನಾನು ಅಸಹಾಯಕಳಾಗದೆ ಧೈರ್ಯದಿಂದ ಕ್ರೀಡೆಯಲ್ಲಿ ಆಸಕ್ತಳಾಗಿ ಮುಂದುವರೆಸಿದೆ ಆಗ ಬೈಕ್ ರೈಡರ್‌ಗಳು ಧೈರ್ಯ ತುಂಬಿದರು ಹೀಗೆಯೇ ಸಾಧನೆಗೆ ಇವೆಲ್ಲವೂ ಸಾಥ್ ನೀಡಿದವು ಹಾಗೆಯೇ ಪರಿಶ್ರಮದ ಜೊತೆೆಗೆ ದೇವರ ಆಶೀರ್ವಾದವೂ ಬೇಕು. ದೇಶಕ್ಕಾಗಿ ಶ್ರಮಿಸುವದು ನಮ್ಮೆಲ್ಲರ ಕರ್ತವ್ಯ, ಅದಕ್ಕಾಗಿ ಬೇಟಿ ಬಚಾವೋ ಬೇಟಿ ಪಡಾವೋ ಜೊತೆ ಬೇಟಿಕೋ ಖಿಲಾವೋ ಎಂಬ ಸಂದೇಶವನ್ನು ದೇಶಾದ್ಯಂತ ಸಾರುತ್ತಿದ್ದೇವೆ ಎಂದರು. 

ಪ್ಯಾರಾ ಅಥ್ಲೇಟ್‌ಗಳ ಚಿಂತನೆ:
ಒಲಂಪಿಕ್ಸ್‌ಗಿಂತ ಪ್ಯಾರಾಲಿಂಪಿಕ್ಸ್‌ನಲ್ಲಿಯೇ ಭಾರತಕ್ಕೆ ಹೆಚ್ಚು ಪದಕಗಳು ಲಭಿಸುತ್ತಿವೆ. ಅಂಗವಿಕಲತೆ ಎಂಬ ಕೊರಗನ್ನು ದರಮಾಡಿ ನಾನೂ ಸಮರ್ಥಳು ಎಂಬ ಭಾವನೆ ವಿಕಲಚೇತನರಲ್ಲಿ ಬರಬೇಕಿದೆ. ಮಕ್ಕಳನ್ನು ಸಣ್ಣ ವಯಸ್ಸಿನಲ್ಲಿ ಕ್ರೀಡೆಯೊಂದಿಗೆ ಜೋಡಿಸಬೇಕು. ಈ ನಿಟ್ಟಿನಲ್ಲಿ ಯುವ ಪೀಳಿಗೆಯನ್ನು ಕ್ರೀಡೆಯತ್ತ ಸೆಳೆದು ಸಜ್ಜುಗೊಳಿಸಲು ಎಲ್ಲ ಪ್ಯಾರಾ ಅಥ್ಲೇಟ್‌ಗಳು ಶ್ರಮಿಸಲು ನಿರ್ಧರಿಸಿದ್ದೇವೆ. ದೇಶದಲ್ಲಿ ಅನೇಕ ವಿಕಲಚೇತನ ಕ್ರೀಡಾಪಟುಗಳಿದ್ದು ಅವರಿಗೆ ಸರ್ಕಾರ ವಿದೇಶಿ ಮಾದರಿಯಲ್ಲಿ ತರಬೇತಿ ಕಲ್ಪಿಸಿಕೊಡಬೇಕು. ಅಲ್ಲದೆ, ಕ್ರೀಡಾಂಗಣ ಮತ್ತು ಕ್ಲಬ್‌ಗಳಲ್ಲಿ ವಿಕಲಚೇತನ ಸ್ನೇಹಿ ಸೌಕರ್ಯಗಳನ್ನು ಒದಗಿಸಲಿ ಎಂದು ದೀಪಾ ಮಲ್ಲಿಕ್ ಕರೆ ನೀಡಿದರು.

click me!