ಕರಾವಳಿ ಜಿಲ್ಲೆಯ ಹುಡುಗಿಯರಿಗೆ ಎಡಿಟೆಡ್ ಬೆತ್ತಲೆ ಫೋಟೋಗಳನ್ನು ತೋರಿಸಿ ಬೆದರಿಕೆ ಹಾಕಿ ಅತ್ಯಾಚಾರ ಎಸಗುತ್ತಿದ್ದ ರೇಪಿಸ್ಟ್ ಗ್ಯಾಂಗ್ ಅನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ (ಮೇ 26): ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಂದರ ಯುವತಿಯರ ಸ್ನೇಹ ಗಿಟ್ಟಿಸಿಕೊಂಡು ಅವರೊಂದಿಗೆ ಪ್ರೀತಿಯ ನಾಟಕವಾಡಿ ಫೋಟೋ ತೆಗೆಸಿಕೊಂಡು ಅವುಗಳನ್ನು ಅಶ್ಲೀಲವೆಂಬಂತೆ ಎಡಿಟ್ ಮಾಡಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದ ಕಾಮುಕರ ಗುಂಪಿನ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಮೂವರು ಪೊಲೀಸರಿಗೆ ಗಾಯಗಳನ್ನು ಮಾಡಿ, ರೇಪಿಸ್ಟ್ ಗ್ಯಾಂಗ್‌ನಲ್ಲಿದ್ದ ಒಬ್ಬ ಮಹಿಳೆ ಪರಾರಿ ಆಗಿದ್ದಾಳೆ.
ಹೌದು, ರಾಜ್ಯದ ಕರಾವಳಿ ಜಿಲ್ಲೆಗಲ್ಲಿ ಹಲವು ಅತ್ಯಾಚಾರ, ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾರಣಕ್ಕೆ ವಾರೆಂಟ್ ಹಿಡಿದು ಪೊಲೀಸರು ಬಂಧಿಸಲು ಹೋದರೆ, ಮೂವರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ಗಾಯಗೊಳಿಸಿ ವಾಪಸ್ ಕಳುಹಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ. ಇನ್ನು ಅತ್ಯಾಚಾರಿ ಆರೋಪಿಯ ತಾಯಿಯೇ ಸ್ವತಃ ಈ ಕೇಸ್‌ನಲ್ಲಿ ಭಾಗಿಯಾಗಿದ್ದು, ಮಗನ ಕುಕೃತ್ಯಕ್ಕೆ ಸಾಥ್ ನೀಡುತ್ತಿದ್ದಳು ಎಂಬ ಅಂಶ ಬಹಿರಂಗವಾಗಿದೆ.
undefined
ಅರ್ಜುನ್ ಅಲಿಯಾಸ್ ಅರುಣ ಲಕ್ಷ್ಮಣ ಗೌಡ (27) ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಆಗಿದ್ದಾನೆ. ಈತನ ವಿರುದ್ಧ ಅತ್ಯಾಚಾರ ಪ್ರಕರಣ ಬನವಾಸಿ ಠಾಣೆಯಲ್ಲಿ ದಾಖಲಾಗಿತ್ತು. ಅಲ್ಲದೇ, ಐಟಿ ಆ್ಯಕ್ಟ್‌ನಡಿ ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೊಂದೆಡೆ ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಠಾಣೆಯಲ್ಲೂ ಈತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಈತ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿರುವ ಕರಾವಳಿ ಮೂಲದ ಸುಂದರ ಯುವತಿಯರ ಜೊತೆಗೆ ಚಾಟ್ ಮಾಡುತ್ತಾ ಅವರನ್ನು ಪಟಾಯಿಸುತ್ತಿದ್ದನು.
ಹೈಟೆಕ್ ತಂತ್ರ ಬಳಸಿ 7 ವಿದ್ಯಾರ್ಥಿಯರನ್ನು ರೇಪ್ ಮಾಡಿದ 'ಮಹಿಳಾ ಲೆಕ್ಚರ್'! ವಿಚಾರಣೆ ಬಳಿಕ ಪೊಲೀಸರೇ ದಂಗು!
ಕೆಲವು ದಿನ ಯುವತಿಯರೊಂದಿಗೆ ಚಾಟ್ ಮಾಡುತ್ತಾ ಅವರ ಮೊಬೈಲ್ ನಂಬರ್ ಪಡೆದು ವಿಡಿಯೋ ಕಾಲ್ ಮಾಡುತ್ತಾ ಆತ್ಮೀಯತೆ ಬೆಳೆಸಿಕೊಂಡು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಾನೆ. ನಂತರ ಪ್ರೀತಿಯ ನೆಪವೊಡ್ಡಿ ಯುವತಿಯರನ್ನು ಸುತ್ತಾಡಲು ಕರೆದುಕೊಂಡು ಹೋಗಿ ಫೋಟೋಗಳನ್ನು ತೆಗೆದುಕೊಳ್ಳುತ್ತಾನೆ. ಕೆಲವು ಯುವತಿಯರು ಆತನೊಂದಿಗೆ ಖಾಸಗಿಯಾಗಿ ಇದ್ದಾಗಲೇ ಫೋಟೋ ತೆಗೆದುಕೊಂಡರೆ, ಇನ್ನು ಕೆಲವರ ಸಾಮಾನ್ಯ ಫೋಟೋ ತೆಗೆದುಕೊಂಡು ಬರುತ್ತಿದ್ದನು. ಇದಾದ ನಂತರ ರೇಪಿಸ್ಟ್ ಗ್ಯಾಂಗ್‌ನ ಕೃತ್ಯ ಆರಂಭವಾಗುತ್ತದೆ.
ಕೆಲವು ಯುವತಿಯರು ಪ್ರೀತಿಯ ಹೆಸರಲ್ಲಿ ಈತನೊಂದಿಗೆ ಕಳೆದ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಪುನಃ ಪುನಃ ಅವರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದನು. ಇದಾದ ನಂತರ, ಖಾಸಗಿಯಾಗಿ ಈತನೊಂದಿಗೆ ಇರದೇ ಸಲುಗೆಯಿಂದ ಇರುವ ಫೋಟೋಗಳನ್ನು ಕೂಡ ಅಶ್ಲೀಲವಾಗಿ ಎಡಿಟ್ ಮಾಡಿ ಅವುಗಳನ್ನು ಯುವತಿಯರಿಗೆ ತೋರಿಸಿ ಬೆದರಿಸಿ ಅವರನ್ನು ಕೂಡ ತನ್ನ ಕಾಮಚೇಷ್ಟೆಗೆ ಬಳಸಿಕೊಳ್ಳುತ್ತಿದ್ದನು. ಹೀಗೆ ಅರ್ಜುನ್‌ಗೌಡ ಮಾಡುತ್ತಿದ್ದ ಕೃತ್ಯಕ್ಕೆ ಸ್ವತಃ ಆತನ ಸಂಬಂಧಿಕ ಬಾಲಚಂದ್ರಗೌಡ ಎನ್ನುವವನೂ ಸಾಥ್ ಕೊಡುತ್ತಿದ್ದನು. ಕೆಲವರಿಂದ ಹಣ ವಸೂಲಿ ಮಾಡುತ್ತಿದ್ದರಿಂದ ಮಗ ಅರ್ಜ್‌ನ್‌ಗೌಡನ ಕುಕೃತ್ಯಕ್ಕೆ ಸ್ವತಃ ಆತನ ತಾಯಿಯೇ ಸಾಥ್ ಕೊಡುತ್ತಿದ್ದಳು.
ಕರಾವಳಿ ಜಿಲ್ಲೆಗಳಲ್ಲಿ ಅರ್ಜುನ್‌ಗೌಡ ವಿರುದ್ಧ ಮೂರ್ನಾಲ್ಕು ಪ್ರಕರಣಗಳು ಸಾಖಲಾಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡು ಆತನನ್ನು ಬಂಧಿಸಲು ಹೋದರೆ, ಪೊಲೀಸರ ಮೇಲೆಯೇ ತಮ್ಮ ಸಂಬಂಧಿಕರ ಸಮೇತವಾಗಿ ಕಲ್ಲು ತೂರಾಟ ನಡೆಸಿದ್ದಾನೆ. ಆರೋಪಿಯ ತಾಯಿ ನಾಗವೇಣಿ ಲಕ್ಷ್ಮಣಗೌಡ (50) ಹಾಗೂ ಸಂಬಂಧಿ ಬಾಲಚಂದ್ರ ಗೌಡ (42) ಕೂಡ ಪೊಲೀಸರ ಮೇಲೆ ಕಲ್ಲು ತೂರಿ ಗಾಯಗೊಳಿಸಿದ್ದಾರೆ. ಇವರು ಕಲ್ಲು ಹಾಗೂ ಮನೆಯ ಹೆಂಚುಗಳ ತುಂಡನ್ನು ಬಳಿಸಿ ದಾಳಿ ಮಾಡಿದ್ದಾರೆ. ಈ ವೇಳೆ ಬನವಾಸಿ ಪೊಲೀಸ್ ಠಾಣೆಯ ಕೆ.ಜಗದೀಶ, ಪಿ.ಮಂಜಪ್ಪ ಹಾಗೂ ಡಿ. ಮಂಜುನಾಥ ನಡುವಿನಮನೆ ಎಂಬ ಪೊಲೀಸರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಲ್ಲಿ ಮೋಜಿಗಾಗಿ ವಾರಕ್ಕೆರಡು ಕೊಲೆ ಮಾಡುತ್ತಿದ್ದ ನಟೋರಿಯಸ್ ಹಂತಕ ಅರೆಸ್ಟ್!
ಇದಾದ ನಂತರ ಪೊಲೀಸರು ಆರೋಪಿ ಅರ್ಜುನ್‌ಗೌಡನನ್ನು ಬಂಧಿಸಿದ್ದಾರೆ. ಆದರೆ, ಈತನಿಗೆ ಸಹಾಯ ಮಾಡುತ್ತಿದ್ದ ಸಂಬಂಧಿ ಬಾಲಚಂದ್ರಗೌಡ ತಪ್ಪಿಸಿಕೊಂಡು ಓಡಿಹೋಗಿ ಇಲಿ ಪಾಷಾಣ ಸೇವಿಸಿದ್ದಾನೆ. ನಂತರ, ಈತನನ್ನು ಪೊಲೀಸರು ಹಿಡಿದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆರೋಪಿಯ ತಾಯಿ ನಾಗವೇಣಿ ಲಕ್ಷ್ಮಣಗೌಡ ಪರಾರಿ ಆಗಿದ್ದಾಳೆ. ಈ ಘಟನೆ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ಪಿಎಸ್‌ಐ ಪ್ರತಾಪ ಪಚ್ಚಪ್ಪಗೋಳ ಅವರಿಂದ ತನಿಖೆ ಮುಂದುವರಿದಿದೆ.