Latest Videos

ರೈತರಿಗೆ ಅನ್ಯಾಯವಾಗದಂತೆ ಬೆಳೆಹಾನಿ ಸರ್ವೆ ಮಾಡಿ: ಸಚಿವ ತಿಮ್ಮಾಪುರ

By Kannadaprabha NewsFirst Published May 26, 2024, 5:24 PM IST
Highlights

ಸರ್ವೆ ಮಾಡುವ ವೇಳೆ ಯಾವುದೇ ರೈತರಿಗೆ ಅನ್ಯಾಯವಾಗದಂತೆ ಯಾರ ಹೆಸರು ಬಿಟ್ಟುಹೋಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ವರದಿ ಸಲ್ಲಿಸಲು ಸಚಿವ ಆರ್.ಬಿ. ತಿಮ್ಮಾಪುರ ಸೂಚನೆ ನೀಡಿದರು.

ಕಲಾದಗಿ (ಮೇ.26): ಗುರುವಾರ ಉಂಟಾದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಹಾನಿಗೊಳಗಾದ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಶನಿವಾರ ಭೇಟಿ ನೀಡಿ ವೀಕ್ಷಣೆ ಮಾಡಿ, ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ಸರ್ವೆ ಮಾಡುವ ವೇಳೆ ಯಾವುದೇ ರೈತರಿಗೆ ಅನ್ಯಾಯವಾಗದಂತೆ ಯಾರ ಹೆಸರು ಬಿಟ್ಟುಹೋಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ವರದಿ ಸಲ್ಲಿಸಲು ಸೂಚನೆ ನೀಡಿದರು.

ಮಾರುತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು, ತುಳಸಿಗೇರಿ ಗ್ರಾಮದಲ್ಲಿನ ಎಸ್ಸಿ ಕಾಲೋನಿಯಲ್ಲಿನ ಮನೆ ಬಿದ್ದು ಗಾಯಗೊಂಡ ರತ್ನವ್ವ ಮಾದರ ಮನೆಗೆ ಭೇಟಿ ನೀಡಿ ಹಾನಿಗೊಳಗಾದ ಮನೆ ವೀಕ್ಷಣೆ ಮಾಡಿದ ಸಚಿವರು, ಸೂಕ್ತ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಭೀಮಣ್ಣ ದಾಸರ ತೋಟದಲ್ಲಿ ವಿದ್ಯುತ್ ಪರಿವರ್ತಕಗಳು ಧರೆಗುರುಳಿದ್ದನ್ನು ವೀಕ್ಷಣೆ ಮಾಡಿ ಕೂಡಲೇ ವಿದ್ಯುತ್ ಪರಿವರ್ತಕ, ವಿದ್ಯುತ್ ಮಾರ್ಗ ಸರಿಪಡಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲ: ಆರಗ ಜ್ಞಾನೇಂದ್ರ

ದೇವನಾಳ ಆರ್.ಸಿ.ಯಲ್ಲಿ ಮನೆಯ ತಗಡಿನ ಮೇಲ್ಛಾವಣಿ ಹಾರಿ ಹೋಗಿ ಹಾನಿಯಾಗಿರುವ ಬಗ್ಗೆ ವೀಕ್ಷಣೆ ಮಾಡಿ ಯವತಿಯ ಕೈಬೆರಳು ಗಾಯಗೊಂಡಿದ್ದನ್ನು ನೋಡಿದ ಸಿಇಒ ವಿಚಾರಣೆ ಮಾಡಿ ಸಚಿವ ಶಾಸಕರ ಗಮನಕ್ಕೆ ತಂದು ಯುವತಿಗೆ ಚಿಕಿತ್ಸೆ ಕೊಡಿಸಲು ಗ್ರಾಪಂ ಪಿಡಿಒ ಸ್ವಪ್ನಾ ನಾಯಕ್ ಅವರಿಗೆ ಸೂಚಿಸಿದರು. ಇದಕ್ಕೂ ಮೊದಲು ಶಾಸಕ ಜೆ.ಟಿ. ಪಾಟೀಲ ಸೋಕನಾದಗಿ ಗ್ರಾಮದಲ್ಲಿ ಹಾನಿಗೊಳಗಾದ ಪ್ರದೇಶ ತೋಟಗಳಿಗೆ ತೆರಳಿ ಪಪ್ಪಾಯ ಬೆಳೆದ ರೈತ ಗೌಡಪ್ಪ ಹೊಸಮನಿ ತೋಟದಲ್ಲಿ ಪಪ್ಪಾಯ ಬೆಳೆಹಾನಿ ವೀಕ್ಷಣೆ ಮಾಡಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಯಾವುದೇ ರೈತರಿಗೆ ಅನ್ಯಾಯವಾಗದಂತೆ ಸರ್ವೆ ಮಾಡಿ.

ಯಾರಾದರೂ ಹೆಸರು ಬಿಟ್ಟು ಹೋಗಿದ್ದಲ್ಲಿ ನಿಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು. ಯಾವೊಬ್ಬ ರೈತನ ಹೆಸರು ಬಿಟ್ಟು ಹೋಗಬಾರದು. ಪರಿಹಾರ ಹಣ ನೀವು ಕೊಡುವುದಿಲ್ಲ, ಸರ್ಕಾರ ಕೊಡುತ್ತದೆ ಎಂದು ಖಡಕ್ ಸೂಚನೆ ನೀಡಿದರು.  ಚಿನ್ನವ್ವ ಪಾಂಡಪ್ಪ ನಾವಲಗಿಯವರ ತೋಟಕ್ಕೂ ಭೇಟಿ ನೀಡಿ ಮೆಕ್ಕೆಜೋಳ ವೀಕ್ಷಣೆ ಮಾಡಿ ಮಾವು, ತೆಂಗು, ಬೇವಿನ ಮರದ ಮಾಹಿತಿ ಪಡೆದು ಪ್ರತಿಯೊಂದು ಮರವನ್ನೂ ಸರ್ವೆ ಮಾಡಿ ವರದಿ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ, ಮಂಜುನಾಥ ಹಲಕಿಯವರ 8 ಎಕರೆ ಪ್ರದೇಶದಲ್ಲಿ ಹಾನಿಯಾದ ಮಾವು, ಲಿಂಬೆ, ದಾಳಿಂಬೆ ಬೆಳೆ ವೀಕ್ಷಣೆ ಮಾಡಿದರು. ಹಿರೇಶೆಲ್ಲಿಕೇರಿ ಗ್ರಾಮಕ್ಕೂ ಭೇಟಿ ನೀಡಿ ರೈತರೊಂದಿಗೆ ಮಾತನಾಡಿ ಸರ್ವೆ ಕಾರ್ಯ ಮಾಡಿಸಲಾಗುತ್ತಿದೆ. ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಕ್ರಿಮಿನಲ್‌ಗಳಿಗೆ ಆಳುವ ಸರ್ಕಾರದ ಭಯವಿಲ್ಲದಂತಾಗಿದೆ: ಸುನಿಲ್‌ ಕುಮಾರ್‌

ಬಾಗಲಕೋಟೆ ತಹಸೀಲ್ದಾರ್‌ ಅಮರೇಶ ಪಮ್ಮಾರ, ತೋಟಗಾರಿಕ ಇಲಾಖೆ, ಕೃಷಿ ಇಲಾಖೆ, ಹೆಸ್ಕಾಂ ಇಲಾಖೆ ಅಧಿಕಾರಿಗಳು, ಬ್ಲಾಕ್ ಅಧ್ಯಕ್ಷ ಬಸುರಾಜ ಸಂಶಿ, ಫಕೀರಪ್ಪ ಮಾದರ, ಓಬಳ್ಯಪ್ಪ ದೊಡ್ಡಮನಿ, ನಾಗಪ್ಪ ಸೊನ್ನದ, ನಾರಾಯಣ ಹಾದಿಮನಿ, ಪಾಂಡು ಪೊಲೀಸ್, ಬಿ.ಎಲ್. ನಾವಲಗಿ ಇನ್ನಿತರರು ಇದ್ದರು.

click me!