ಹೆಣ್ಣೈಕ್ಳು, ಗಂಡೈಕ್ಳು ಸೇರಿ ಉಣ್ಬಾರದಂತೆ: ದಾರೂಲ್ ಊಲುಮ್ ಫತ್ವಾ!

By Web DeskFirst Published Dec 20, 2018, 1:27 PM IST
Highlights

ಸಾರ್ವಜನಿಕ ಸಮಾರಂಭದಲ್ಲಿ ಗಂಡು, ಹೆಣ್ಣು ಒಟ್ಟಿಗೆ ಊಟ ಮಾಡಬಾರದು| ಗಂಡು, ಹೆಣ್ಣು ಒಟ್ಟಿಗೆ ಊಟ ಮಾಡುವುದು ಇಸ್ಲಾಂ ವಿರೋಧಿಯಂತೆ| ವಿವಾದದ ಕಿಡಿ ಹೊತ್ತಿಸಿದೆ ದಾರೂಲ್ ಊಲುಮ್ ಸಂಸ್ಥೆಯ ಫತ್ವಾ| ಎದ್ದು ನಿಂತು ಊಟ ಮಾಡುವುದು ಕೂಡ ಇಸ್ಲಾಂ ವಿರೋಧಿ ಎಂದ ದಾರೂಲ್ ಊಲುಮ್

ಮುಜಫರನಗರ್(ಡಿ.20): 21ನೇ ಶತಮಾನದ ಭಾರತವನ್ನು ಗ್ರಹಿಸುವಲ್ಲಿ ಹಲವರು ವಿಫಲವಾಗುತ್ತಿದ್ದಾರೆ. ಗಂಡು, ಹೆಣ್ಣು ಒಂದಾಗಿ ಈ ದೇಶದ ಭವಿಷ್ಯದ ನೊಗ ಹೊತ್ತು ಮುನ್ನಡೆಯುತ್ತಿದ್ದಾರೆ. ಆದರೆ ಈಗಲೂ ಗಂಡು ಮತ್ತು ಹೆಣ್ಣಿನ ನಡುವೆ ಬೇಧ ಮಾಡುವ ಮನಸ್ಸುಗಳಿಗೆ ಇದು ಅರ್ಥವಾಗೋದಿಲ್ಲ.

ಅದರಂತೆ ಸಾರ್ವಜನಿಕ ಸಮಾರಂಭಗಳಲ್ಲಿ ಗಂಡು ಮತ್ತು ಹೆಣ್ಣು ಒಟ್ಟಾಗಿ ಊಟ ಮಾಡುವುದು ಇಸ್ಲಾಂ ವಿರೋಧಿ ಎಂದು ದಾರೂಲ್ ಊಲುಮ್ ಸಂಸ್ಥೆ ಘೋಷಿಸಿದೆ.

ಈ ಕುರಿತು ಫತ್ವಾ ಹೊರಡಿಸಿರುವ ದಾರೂಲ್ ಊಲುಮ್, ಸಾರ್ವಜನಿಕ ಸಮಾರಂಭಗಳಲ್ಲಿ ಗಂಡು ಮತ್ತು ಹೆಣ್ಣು ಒಟ್ಟಿಗೆ ಊಟ ಮಾಡುವುದು ಇಸ್ಲಾಂ ಪ್ರಕಾರ ಅಪರಾಧ ಎಂದು ಘೋಷಿಸಿದೆ.

ಇಷ್ಟೇ ಅಲ್ಲದೇ ಎದ್ದು ನಿಂತು ಊಟ ಮಾಡುವುದು ಕೂಡ ಇಸ್ಲಾಂ ವಿರೋಧಿ ಎಂದು ಹೇಳಿರುವ ದಾರೂಲ್ ಊಲುಮ್, ಈ ಅನಿಷ್ಟ ಪದ್ದತಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಶರಿಯತ್ ನಲ್ಲಿ ಗಂಡು ಮತ್ತು ಹೆಣ್ಣು ಒಟ್ಟಿಗೆ ಸಾರ್ವಜನಿಕವಾಗಿ ಊಟ ಮಾಡುವುದಕ್ಕೆ ನಿಷೇಧ ಇದೆ ಎಂದು ದಾರೂಲ್ ಊಲುಮ್ ನ ಅಂಗ ಸಂಸ್ಥೆ ದಾರೂಲ್ ಇಫ್ತಾ ಹೇಳಿದೆ.

click me!