ಭಾರತಕ್ಕೆ ಕೊರೋನಾ ಗುದ್ದು, ಕರ್ನಾಟಕ ಬಂದ್, ಐಪಿಎಲ್ ರದ್ದು; ಮಾ.13ರ ಟಾಪ್ 10 ಸುದ್ದಿ!

Suvarna News   | Asianet News
Published : Mar 13, 2020, 07:01 PM IST
ಭಾರತಕ್ಕೆ ಕೊರೋನಾ ಗುದ್ದು, ಕರ್ನಾಟಕ ಬಂದ್, ಐಪಿಎಲ್ ರದ್ದು; ಮಾ.13ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದಲ್ಲಿ ಹಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಐಪಿಎಲ್ ಟೂರ್ನಿ ರದ್ದಾಗಿದೆ. ಉದ್ಯಮಿ ಅಂಬಾನಿಗೆ ಬರೋಬ್ಬರಿ 24,000 ಕೋಟಿ ರೂಪಾಯಿ ನಷ್ಟವಾಗಿದೆ. ಇತ್ತ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾದರೆ, ಚಿನ್ನದ ಬೆಲೆಯೂ ಇಳಿಕೆಯಾಗಿದೆ. ಈ ಬಾರಿಯ ಬೇಸಿಗೆ ಬಿಸಿಲು ಸೇರಿದಂತೆ ಮಾರ್ಚ್ 13ರ ಟಾಪ್ 10 ನ್ಯೂಸ್ ಇಲ್ಲಿವೆ. 

ಕೊರೋನಾಗೆ 1 ವಾರ ಅಘೋಷಿತ ಕರ್ನಾಟಕ ಬಂದ್ : ಏನೇನು ಇರಲ್ಲ..?

ವಿಶ್ವದಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದಿರುವ ಮಾರಕ ಕೊರೋನಾ ವೈರಸ್ ತಡೆಗಟ್ಟಲು ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಒಂದು ವಾರಗಳ ಕಾಲ ಕರ್ನಾಟಕದಲ್ಲಿ ಹಲವು ಸೇವೆಗಳ ಬಂದ್ ಗೆ ಸೂಚಿಸಿದೆ. 

ಅಂಬಾನಿಗೆ ಕೊರೋನಾ ಶಾಕ್; ಒಂದೇ ದಿನಕ್ಕೆ 24000 ಕೋಟಿ ರೂ ನಷ್ಟ!

ದೇಶದ ಅತೀ ಶ್ರೀಮಂತ ಅಂಬಾನಿಗೆ ಕೊರೋನಾ ವೈರಸ್ ಶಾಕ್ ನೀಡಿದೆ. ಮುಕೇಶ್ ಅಂಬಾನಿಗೆ ನಿನ್ನೆ ಒಂದೇ ದಿನಕ್ಕೆ 24000 ಕೋಟಿ ರೂ ನಷ್ಟವಾಗಿದೆ. ಒಂದು ತಿಂಗಳಿಗೆ 1.1 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ.

ಈ ಸಲ ಬೇಸಿಗೆ ಕಳೆದ ವರ್ಷಕ್ಕಿಂತಲೂ ಸುಡಲಿದೆ ! ಬೆಂಗಳೂರು ಗತಿ ಏನು?

 ಈ ಸಲದ ಬೇಸಿಗೆಯೂ ಅತ್ಯಂತ ಬಿಸಿಯಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ಕಳೆದ ಬಾರಿಗಿಂತಲೂ ಬೆಂಗಳೂರು ಸುಡಲಿದೆ ಎಂದು ಹೇಳಿದೆ.


ಕೊರೋನಾ ವೈರಸ್; IPL 2020 ಟೂರ್ನಿ ರದ್ದು ಮಾಡಿದ ಬಿಸಿಸಿಐ...

ಕೊರೋನಾ ವೈರಸ್ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿದ್ದಂತೆ ಹಲವು ಕ್ರೀಡಾಕೂಟಗಳು ರದ್ದಾಗಿತ್ತು. ಆದರೆ ಐಪಿಎಲ್ ಟೂರ್ನಿ ವೇಳಾಪಟ್ಟಿ ಪ್ರಕಾರ ನಡೆಸಲು ಬಿಸಿಸಿಐ ನಿರ್ಧರಿಸಿತ್ತು. ವೈರಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 13ನೇ ಆವೃತ್ತಿ ಐಪಿಎಲ್ ಟೂರ್ನಿಯನ್ನು ಎಪ್ರಿಲ್ 15ರ ವರೆಗೆ ಬಿಸಿಸಿಐ ರದ್ದು ಮಾಡಿದೆ. 

ಇಟಲಿಗೆ ಫ್ರೀ ಪೋರ್ನ್, ಆದಾಯ ಪೂರ್ತಿ ಕೊರೋನಾ ಕಂಟ್ರೋಲ್‌ಗೆ..!...

ಚೀನಾದಲ್ಲಿ ಇತ್ತೀಚೆಗಷ್ಟೇ ಜನರನ್ನು ಮನೆಯೊಳಗೇ ಕೂಡುವಂತೆ ಮಾಡಲು ಫ್ರೀ ಪೋರ್ನ್ ಬಿಡಲಾಗಿತ್ತು. ಜನರು ಮನೆಯೊಳಗೇ ಕೂರುವಂತಾಗಲು ಫ್ರೀಯಾಗಿ ನೀಲಿಚಿತ್ರಗಳನ್ನು ನೋಡುವ ಅವಕಾಶ ನೀಡಲಾಗಿತ್ತು. ಇದೀಗ ಇನ್ನೊಂದು ರಾಷ್ಟ್ರವೂ ಇದೇ ಮಾರ್ಗವನ್ನು ಅಳವಡಿಸಿಕೊಂಡಿದೆ.

ಇದ್ದಕ್ಕಿದ್ದಂತೆ ಸತ್ತು ಬೀಳುತ್ತಿವೆ ಸಾವಿರಾರು ಸಂಖ್ಯೆಯಲ್ಲಿ ಜೇನು ನೊಣಗಳು

ಕಳೆದ ಕೆಲವು ದಿನಗಳಿಂದ ಇದ್ದಕ್ಕಿದ್ದಂತೆ ಸಾವಿರಾರು ಜೇನ್ನೊಣಗಳು ಸಾಯುತ್ತಿದ್ದು, ಜೇನು ನೊಣಗಳ ಸಾವು ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. 

ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಮಿಸುಕಾಡಲ್ಲ ಎಂದ ರಜತ!

ಚಿನ್ನದ ದರದ ನಾಗಾಲೋಟಕ್ಕೆ ಬ್ರೇಕ್; ಸತತ ಮೂರನೇ ದಿನ ಇಳಿದ ಚಿನ್ನ; ಒಂದೇ ದಿನದಲ್ಲಿ ಭಾರೀ ಇಳಿಕೆ; ಆದರೆ ಬೆಳ್ಳಿ ದರದಲ್ಲಿ 10 ಪೈಸೆ ಮಾತ್ರ ಇಳಿತ

ಪೆಟ್ರೋಲ್‌ ಡೀಸೆಲ್‌ ಬೆಲೆ ಶೀಘ್ರದಲ್ಲೇ 6 ರೂ ಇಳಿಕೆ?

ಜಾಗತಿಕ ತೈಲ ಮಾರುಕಟ್ಟೆಯಲ್ಲಾದ ವಿವಿಧ ಬೆಳವಣಿಗೆಗಳು ಹಾಗೂ ಇತ್ತೀಚೆಗಷ್ಟೇ ವಿಶ್ವಾದ್ಯಂತ ಭಾರೀ ಭೀತಿ ಸೃಜಿಸಿರುವ ಕೊರೋನಾ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿತದ ಹಾದಿ ಹಿಡಿದಿದೆ.

ಹುಡುಗರ ಕ್ರಶ್‌ 'ನಿಧಿಮಾ'; ರಿಯಲ್‌ ಲೈಫಲ್ಲೂ ಮಿಲನಾ ಹೀಗೆನಾ?

'ನಮ್ ದುನಿಯಾ ನಮ್ ಲೈಫ್‌'  ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಮಿಲನಾ ನಾಗರಾಜ್‌ ಹುಡುಗರ ಹೃದಯ ಬಡಿತ ಹೆಚ್ಚಿಸಿದ 'ನಿಧಿ'ಯಾಗಿ 'ಲವ್ ಮಾಕ್‌ಟೈಲ್' ನಂತರ ಗುರುತಿಸಿಕೊಂಡಿದ್ದಾರೆ. ಅಷ್ಟಕ್ಕೂ ನಿಧಿ ಅಲಿಯಾಸ್‌ ಮಿಲನಾ ಬಗ್ಗೆ ನಿಮಗೆ ತಿಳಿದಿರದ ವಿಚಾರಗಳು ಇಲ್ಲಿದೆ....

ವಿಜಯ್‌ ದೇವರಕೊಂಡ ಕಿಸ್ಸಿಂಗ್ ಸೀನ್‌ಗೆ ಶ್ರೀ ರೆಡ್ಡಿ ಕೊಟ್ಟ ಟಾಂಗ್‌!

ಟಾಲಿವುಡ್‌‌ನ ಒನ್ ಆ್ಯಂಡ್ ಒನ್ಲಿ ಕಾಂಟ್ರವರ್ಷಿಯಲ್ ಕ್ಷೀನ್‌ ಎಂದು ತಮಗೆ ತಾವೇ ಪಟ್ಟಕಟ್ಟಿಕೊಂಡು ಹುಡುಕಿ ಹುಡುಕಿ ವಿವಾದ ಸೃಷ್ಟಿಸಿಕೊಳ್ಳುವ ನಟಿ ಶ್ರೀ ರೆಡ್ಡಿ ಈದೀಗ ವಿಜಯ್ ದೇವರಕೊಂಡ ಅವರನ್ನೂ ಟಾರ್ಗೆಟ್ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!
ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಬೇಕಾ? ಇಲ್ಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17 5ಜಿ!