ಶವದೊಂದಿಗೆ ಲೈಂಗಿಕ ಕ್ರಿಕೆ ನಡೆಸಿದ ವಿಕೃತ ಕಾಮಿಗಳು/ ಪಾಟ್ನಾ ಮೂಲದ ಇಬ್ಬರ ಬಂಧನ/ ಸ್ನೇಹಿತನ ಕೊಂದು ಆತನ ಶವದೊಂದಿಗೆ ಅನೈಸರ್ಗಿಕ ಸಂಭೋಗ/ ಪಾಟ್ನಾದಲ್ಲಿ ಸಿಕ್ಕಿಬಿದ್ದ ಆರೋಪಿಗಳು
ನವದೆಹಲಿ(ಮಾ. 13) ಮನುಷ್ಯನೊಬ್ಬನನ್ನು ಕೊಂದು ಆತನ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಪಾಟ್ನಾ ಮೂಲದ ಇಬ್ಬರನ್ನು ಬಂಧಿಸಲಾಗಿದೆ.
ದಕ್ಷಿಣ ದೆಹಲಿಯ ಸರೈ ಏರಿಯಾದಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳಲ್ಲಿ ಒಬ್ಬ ಜಾರ್ಖಂಡ್ ಮೂಲದವನಾಗಿದ್ದರೆ ಇನ್ನೊಬ್ಬ ಬಿಹಾರ ಮೂಲದವನು. ಪೊಲೀಸರಿಂದ ತಪ್ಪಿಸಿಕೊಳ್ಳಲು ಪಾಟ್ನಾಕ್ಕೆ ಪರಾರಿಯಾಗಿದ್ದರು.
ಕಾಗೆಗಳ ಶವ ಸಂಭೋಗ: ಇದೆಂತಾ ವಿಚಿತ್ರ ನಡುವಳಿಕೆಯ ಪ್ರಯೋಗ!
ಹೆಣವಾದ ಮನುಷ್ಯನ ಮನೆಯಲ್ಲಿ ಈ ಇಬ್ಬರು ವಿಕೃತ ಕಾಮಿಗಳು ಮದ್ಯಸೇವನೆ ಮಾಡಿದ್ದರು. ಈ ನಡುವೆ ಸ್ನೇಹಿತರ ನಡುವೆ ಯಾವುದೋ ವಿಷಯಕ್ಕೆ ಜೋರಾಗಿ ಮಾತುಕತೆ ನಡೆದಿದೆ. ಇದ್ದಕ್ಕಿದ್ದಂತೆ ಸಾವಿಗೀಡಾದ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ಇದಾದ ಮೇಲೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಈ ವೇಳೆಗಾಗಲೇ ಆತ ಸತ್ತುಹೋಗಿದ್ದ. ಶವವನ್ನು ಅಲ್ಲಿಂದ ಸಾಗಾಟ ಮಾಡಲು ಮತ್ತೆ ಮರುದಿನ ಆರೋಪಿತರು ಜಾಗಕ್ಕೆ ಬಂದಾಗ ಸತ್ತ ವ್ಯಕ್ತಿಯ ಸಹೋದರಿ ಕೈಗೆ ಸಿಕ್ಕಿಬಿದ್ದಾರೆ.
ಪೋರ್ನ್ ಸೈಟ್‌ಗಳನ್ನೂ ಬಿಡದ ಕರೋನಾ..ಮಾಸ್ಕ್ ಧರಿಸಿಯೇ!
ಶವವನ್ನು ಸಾಗಿಸುವ ವೇಳೆ ಹತ್ಯೆಗೊಳೊಳಗಾದ ವ್ಯಕ್ತಿಯ ತಂಗಿ ಕಂಡಿದ್ದಾಳೆ. ಅವಳನ್ನು ನೋಡಿದ ಆರೋಪಿತರು ಅಲ್ಲಿಂದ ಜಾಗ ಖಾಲಿ ಮಾಡುವ ಪ್ರಯತ್ನ ಮಾಡಿದ್ದಾರೆ. ಇದಾದ ಮೇಲೆ ಸಹೋದರಿ ಪ್ರಕರಣದ ವಿವರವನ್ನು ಪೊಲೀಸರಿಗೆ ತಿಳಿಸಿದ್ದಾಳೆ.
ಶವದ ಜತೆ ಸೆಕ್ಸ್ ಗೆ ಇಳಿಯುವಷ್ಟು ಸ್ಯಾಡಿಸ್ಟ್ ಆಗುವುದಾದರೂ ಯಾಕೆ?
ಮಾಹಿತಿ ಕಲೆಹಾಕಿದ ಪೊಲೀಸರು ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ದೆಹಲಿಯಿಂದ ಪರಾರಿಯಾದ ಆರೋಪಿತರು ಪಾಟ್ನಾದಲ್ಲಿ ಇರುವ ಮಾಹಿತಿ ತಿಳಿದು ಬಂತು. ತಕ್ಷಣ ಅವರನ್ನು ಬಂಧಿಸಿ ಕರೆತಂದಿದ್ದೇವೆ ಎಂದು ದೆಹಲಿ ದಕ್ಷಿಣ ವಲಯದ ಡಿಸಿಪಿ ಅತುಲ್ ಕುಮಾರ್ ಮಾಹಿತಿ ನೀಡಿದ್ದಾರೆ.