ವಿಶ್ವವನ್ನೇ ವ್ಯಾಪಿಸುತ್ತಿದೆ ಕರೋನಾ/ ಚೀನಾದಲ್ಲಿ ಹುಟ್ಟಿಕೊಂಡ ಮಹಾಮಾರಿ/ ಸದ್ಯ ಇದೊಂದು ಎಪಿಡಮಿಕ್/ ವಿಶ್ವ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ
ಬೆಂಗಳೂರು(ಮಾ. 13) ಕರೋನಾವನ್ನು ವಿಶ್ವ ಸಾಂಕ್ರಾಮಿಕ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಣೆ ಮಾಡಿದೆ. ಇದೆಲ್ಲದರ ನಡುವೆ ಔಟ್ ಬ್ರೇಕ್, ಎಪಿಡೆಮಿಕ್, ಮತ್ತು ಪೆಂಡಾಮಿಕ್ ಎನ್ನುವ ಶಬ್ದಗಳ ನಡುವಿನ ವ್ಯತ್ಯಾಸ ತಿಳಿಯುವುದು ಕರೋನಾ ಬಗ್ಗೆ ತಿಳಿದುಕೊಳ್ಳುವಷ್ಟೇ ಮುಖ್ಯ.
ಮೂರು ಶಬ್ದಗಳು ಬೇರೆ ಅರ್ಥವನ್ನೇ ಕೊಡುತ್ತವೆ. ಒಂದೊಂದಾಗಿ ಈ ಮಹಾಮಾರಿಗೆ ಸಂಬಂಧಿಸಿದ ಶಬ್ದಾರ್ಥಗಳನ್ನು ತಿಳಿದುಕೊಳ್ಳೋಣ.
undefined
ಔಟ್ ಬ್ರೇಕ್: ಚಿಕ್ಕದು ಆದರೆ ಅಸಾಮಾನ್ಯ:
ದು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಆಧಾರದ ಮೇಲೆ ಇದನ್ನು ಔಟ್ ಬ್ರೀಕ್ ಎಂದು ಕರೆಯಲಾಗುತ್ತದೆ. ರೋಗದ ಪ್ರಮಾಣ ಏರಿಕೆ ಸಹ ಗಮನಾರ್ಹ ಅಂಶ. ಆರಂಭದಲ್ಲಿ ಕಾಣಿಸಿಕೊಂಡ ಕರೋನಾ ಕಾಣಿಸಿಕೊಂಡ ಎರಡು ವಾರದ ಅವಧಿಯಲ್ಲಿ ಕರೋನಾ ಒಂದು ಔಟ್ ಬ್ರೇಕ್ ಆಗಿತ್ತು.
ಕರೋನಾ ಎಫೆಕ್ಟ್: ಐಪಿಎಲ್ ರದ್ದು..ಮುಂದೆ?
ಸಮಯ, ಭೂಪ್ರದೇಶ, ರೋಗ ಲಕ್ಷಣ ಎಲ್ಲವನ್ನು ಆಧರಿಸಿ ಔಟ್ ಬ್ರೇಕ್ ಎಂದು ಘೋಷಣೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಚಿಕ್ಕ ಪ್ರಮಾಣದಲ್ಲಿ ಆದರೆ ಆದರೆ ವೇಗವಾಗಿ ಹರಡುವುದನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಬೇಬಿ ಕೇರ್ ನಲ್ಲಿ ಇರುವ ಮಕ್ಕಳಲ್ಲಿ ಈ ವಾರ ಮೂವರು ಮಕ್ಕಳಲ್ಲಿ ಅನಾರೋಗ್ಯ ಕಾಣಿಸಿಕೊಂಡು ಮರು ವಾರ ಏಕಾಏಕಿ 15 ಮಕ್ಕಳಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುವಂತಹ ಪರಿಸ್ಥಿತಿಯನ್ನು ಔಟ್ ಬ್ರೇಕ್ ಎಂದು ಕರೆಯಬಹುದು.
ವಿಶ್ವವನ್ನೇ ಕಾಡುತ್ತಿರುವ ಕರೋನಾ ಕಾಟಕ್ಕೆ ಕರ್ನಾಟಕ ಬಂದ್
ಎಪಿಡಮಿಕ್: ದೊಡ್ಡದು ಮತ್ತು ಸಾಂಕ್ರಾಮಿಕ
ಇದು ಔಟ್ ಬ್ರೇಕ್ ಗಿಂತಲೂ ದೊಡ್ಡ ಪ್ರಮಾಣದ್ದು. ಅಂದರೆ ಔಟ್ ಬ್ರೆಕ್ ನಂತರ ದ ಸ್ಟೆಪ್ . ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿದ್ದ ಕರೋನಾ ತೀವ್ರ ತೆರನಾಗಿ ಹರಡಲು ಆರಭಿಸಿದಾಗ ಕೋವಿಡ್ 19 ನ್ನು ಎಪಿಡಮಿಕ್ ಎಂದು ಹೆಸರಿಸಲಾಯಿತು.
ಇಡೀ ದೇಶ ಅಥವಾ ಭೂಭಾಗದ ಎಲ್ಲರಿಗೆ ವ್ಯಾಪಿಸುವ ಪರಿಸ್ಥಿತಿ, ಕಂಡು ಬಂದ ರೋಗಕ್ಕೆ ಸದ್ಯದ ಮಟ್ಟಿಗೆ ಯಾವ ಚಿಕಿತ್ಸೆ ಅಥವಾ ಲಸಿಕೆ ಇಲ್ಲದ ಸ್ಥಿತಿ ಎಲ್ಲವನ್ನು ಒಳಗೊಂಡೆ ಅದನ್ನು ಎಪಿಡಮಿಕ್ ಎಂದು ಕರೆಯಲಾಗುತ್ತದೆ.
ಪೆಂಡಮಿಕ್: ಇಡೀ ವಿಶ್ವಕ್ಕೆ ವ್ಯಾಪಿಸಿದ್ದು ಜತೆಗೆ ನಿಯಂತ್ರಣ ಅಸಾಧ್ಯ
ಎಪಿಡಮಿಕ್ ನ ನಂತರದ ಹೆಜ್ಜೆ ಇಡೀ ಪ್ರಪಂಚಕ್ಕೆ ರೋಗ ವ್ಯಾಪಿಸುವ ಸ್ಥಿತಿ. ನಿಯಂತ್ರಣಲಕ್ಕೆ ಮೀರಿದ ಸ್ಥಿತಿ.. ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ. ದಿನವೊಂದಕ್ಕೆ ಹೊಸ ಹೊಸ ಭೂಭಾಗವನ್ನು ರೋಗ ಆವರಿಸುವ ಸ್ಥಿತಿ. ಇಲ್ಲಿಯವರೆಗೆ ಇಂಥದ್ದು ಕಂಡು ಬಂದಿಲ್ಲ. ಮಾನವ ಕುಲಕ್ಕೆ ಅಂತ್ಯ ಹಾಡುವ ಕಾಲ ಎಂದರೂ ಅತಿಶಯೋಕ್ತಿ ಅಲ್ಲ.