ಡಿಕೆಶಿ ನಿವಾಸದಲ್ಲಿ ಗುಪ್ತ್ ಗುಪ್ತ್ ಮೀಟಿಂಗ್, ಅಂತದ್ದೇನು?

By Web DeskFirst Published Sep 14, 2018, 11:41 AM IST
Highlights

ಬೆಳಗಾವಿಯಲ್ಲಿ ಡಿಕೆಶಿ ಹಸ್ತಕ್ಷೇಪಕ್ಕೆ ಗರಂ ಆಗಿರುವ ಜಾರಕಿಹೊಳಿ ಬ್ರದರ್ಸ್, ಕೆಲ ಶಾಸಕರನ್ನು ಕಟ್ಟಿಕೊಂಡು ಸರ್ಕಾರವನ್ನ ಬುಡಮೇಲು ಮಾಡಲು ಹೊರಟ್ಟಿದ್ದಾರೆ. ಇದ್ರಿಂದ ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ಶಾಂತಿ ಪಾಠ ಮಾಡಲು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿಕೆಶಿ ನಿವಾಸದಲ್ಲಿ ಕಾಂಗ್ರೆಸ್ ನ ಪ್ರಮುಖ ನಾಯಕರು ಗುಪ್ತ್ ಗುಪ್ತ್ ಮೀಟಿಂಗ್ ನಡೆಸಿದ್ದಾರೆ.

ಬೆಂಗಳೂರು, (ಸೆ.14): ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ಮುಗಿದ ಬಳಿಕ ರಾಜ್ಯ ರಾಜಕೀಯದ ಚಿತ್ರಣ ಅಲ್ಲಾಡುತ್ತಿದೆ. ಮೊದಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವೆ ಶೀತಲ ಸಮರ ನಡೆದಿತ್ತು. ಅದು ಈಗ ತಣ್ಣಗಾದ ಬಳಿಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಮೇಲೆ ಜಾರಕಿಹೊಳಿ ಸಹೋದರರು ಸಮರ ಸಾರುತ್ತಿದ್ದು, ಇದು ಇದೀಗ ಸಮ್ಮಿಶ್ರ ಸರ್ಕಾರದ ಬುಡಕ್ಕೆ ಬಂದಿದೆ. 

ಬೆಳಗಾವಿಯಲ್ಲಿ ಡಿಕೆಶಿ ಹಸ್ತಕ್ಷೇಪಕ್ಕೆ ಗರಂ ಆಗಿರುವ ಜಾರಕಿಹೊಳಿ ಬ್ರದರ್ಸ್, ಕೆಲ ಶಾಸಕರನ್ನು ಕಟ್ಟಿಕೊಂಡು ಸರ್ಕಾರವನ್ನ ಬುಡಮೇಲು ಮಾಡಲು ಹೊರಟ್ಟಿದ್ದಾರೆ. ಇದ್ರಿಂದ ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದು, ಭಿನ್ನಮತ ಶಮನಕ್ಕೆ ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿಕೆಶಿ ನಿವಾಸದಲ್ಲಿ ಕಾಂಗ್ರೆಸ್ ನ ಪ್ರಮುಖ ನಾಯಕರು ಗುಪ್ತ್ ಗುಪ್ತ್ ಮೀಟಿಂಗ್ ನಡೆಸಿದ್ದಾರೆ.

ಭಿನ್ನಮತ ಶಮನಕ್ಕೆ ಮಹತ್ವದ ಮಾತುಕತೆ
ಹೈಕಮಾಂಡ್ ಸೂಚನೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ನೇತೃತ್ವದಲ್ಲಿ ಡಿ.ಕೆ.ಶಿವಕುಮಾರ ಸೇರಿದಂತೆ ಪ್ರಮುಖ ನಾಯಕರು ಸಭೆ ಸೇರಿದ್ದು, ಜಾರಕಿಹೊಳಿ ಸಹೋದರರ ಸಿಟ್ಟನ್ನು ತಣ್ಣಗಾಗಿಸುವುದು, ಪಕ್ಷಕ್ಕೆ ಆಗುವ ಡ್ಯಾಮೇಜ್ ಕಂಟ್ರೋಲ್ ಸೇರಿದಂತೆ ಮತ್ತಿತ್ತರ ವಿಷಯಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಒಟ್ಟಿನಲ್ಲಿ ಮೊದಲಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಹೊಗೆ ಈಗ ಡಿಕೆಶಿ ಮೇಲೆ ಕಿಡಿಕೊತ್ತಿಕೊಂಡಿದಂತೂ ಸತ್ಯ.

click me!