ಕಾಶೆಪ್ಪನವರ್ ಉಚ್ಛಾಟಿಸಲು ಕೆಪಿಸಿಸಿ ಅಧ್ಯಕ್ಷರಿಗೆ ಒತ್ತಾಯ!

First Published Jul 14, 2018, 7:33 PM IST
Highlights

ಕಾಶೆಪ್ಪನವರ್ ಉಚ್ಛಾಟನೆಗೆ ಕೆಪಿಸಿಸಿ ಪದಾಧಿಕಾರಿಗಳ ಪಟ್ಟು

ಕಾಶೆಪ್ಪನವರ್ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ

ಎಸ್.ಆರ್. ಪಾಟೀಲ್ ವಿರುದ್ದ ಸಂಚು ನಡೆಸುತ್ತಿರುವ ಆರೋಪ

ಕಾಶೆಪ್ಪನವರ್‌ರಿಂದ ಲೋಕಸಭೆ ಚುನಾವಣೆಯಲ್ಲಿ ಪೆಟ್ಟು 

ಬೆಂಗಳೂರು(ಜು.14): ಮಾಜಿ ಶಾಸಕ ವಿಜಯಾನಂದ ಕಾಶೆಪ್ಪನವರನ್ನ ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಲಾಗಿದೆ. ಬಾಗಲಕೋಟೆ , ಬಿಜಾಪುರ, ರಾಯಚೂರು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಿಂದ  ಕೆಪಿಸಿಸಿ  ಅಧ್ಯಕ್ಷರಿಗೆ ದೂರು ನೀಡಲಾಗಿದ್ದು, ಕಾಶೆಪ್ಪನವರನ್ನ  ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಮನವಿ ಮಾಡಲಾಗಿದೆ.

ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿನ್ನು ಭೇಟಿಯಾದ ಜಿಲ್ಲಾ ಪದಾಧಿಕಾರಿಗಳು, ಮಾಜಿ ಕೆಪಿಸಿಸಿ ಕಾರ್ಯಧ್ಯಕ್ಷ  ಎಸ್ ಆರ್ ಪಾಟೀಲ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕಾಶೆಪ್ಪನವರ್ ಪಕ್ಷದಲ್ಲಿ ಅರ್ಹರಲ್ಲ ಎಂದು ಆರೋಪ ಮಾಡಿದ್ದಾರೆ. 

ಕಾಶೆಪ್ಪನವರ್ ಹೇಳಿಕೆಯಿಂದ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಮಾರಕವಾಗಲಿದ್ದು, ಕೂಡಲೇ ಅವರನ್ನು ಉಚ್ಚಾಟನೆ ಮಾಡಿ ಅಂತ ದೂರು ನೀಡಲಾಗಿದೆ.

ಹುನುಗುಂದ ಕ್ಷೇತ್ರದಲ್ಲಿ ನನ್ನ ಸೋಲಿಗೆ ಎಸ್ ಆರ್ ಪಾಟೀಲ್ ಕಾರಣ ಅಂತ ಕಾಶೆಪ್ಪನವರ್ ಆರೋಪ ಮಾಡಿದ್ದರು. ಆದರೆ ಅವರ ಸೋಲಿಗೆ ಅವರ ನಡವಳಿಕೆಯೇ ಕಾರಣ ಎಸ್ ಆರ್ ಪಾಟೀಲ್ ಅಲ್ಲ ಎಂದು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!