Latest Videos

ಆಂಬಿಡೆಂಟ್ ಹಗರಣ: ಕೊನೆಗೂ ಜನಾರ್ದನ ರೆಡ್ಡಿ ಅರೆಸ್ಟ್..!

By Web DeskFirst Published Nov 10, 2018, 4:49 PM IST
Highlights

ಮಾಜಿ ಸಚಿವ ಜನಾರ್ದನ ರೆಡ್ಡಿ ವಿಚಾರಣೆಗೆಂದು ಇಂದು ಸಿಸಿಬಿ ಕಚೇರಿಗೆ ಆಗಮಿಸಿದ್ದು, ಈ ವೇಳೆ ಹಲವು ಪ್ರಶ್ನೆಗಳನ್ನ ಕೇಳಿ ರೆಡ್ಡಿಯನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು, (ನ.10): ಆಂಬಿಡೆಂಟ್ ಬಹುಕೋಟಿ ಚಿಟ್ ಫಂಡ್ ಹಗರಣವನ್ನ ಮುಚ್ಚಿಹಾಕಲು ಲಂಚ ಸ್ವೀಕರಿಸಿದ್ದಾರೆ  ಎಂಬ ಆರೋಪ ಹೊತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಆಂಬಿಡೆಂಟ್ ಚಿಟ್ ಫಂಡ್ ಹಗರಣದಲ್ಲಿ ನಾಲ್ಕು ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ವಿಚಾರಣೆಗೆಂದು ಇಂದು ಸಿಸಿಬಿ ಕಚೇರಿಗೆ ಆಗಮಿಸಿದ್ದು, ಈ ವೇಳೆ ಹಲವು ಪ್ರಶ್ನೆಗಳನ್ನ ಕೇಳಿ ರೆಡ್ಡಿಯನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

"

ಆಂಬಿಡೆಂಟ್ & ರೆಡ್ಡಿ: ಸುವರ್ಣನ್ಯೂಸ್‌ನಿಂದ Super Exclusive ವರದಿಗಳ ಸರಮಾಲೆ

ಆಂಬಿಡೆಂಟ್ ಕಂಪನಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜಾನಾರ್ದನ ರೆಡ್ಡಿ ಅವರನ್ನು ವಿಚಾರಣೆಗೆ ಆಗಮಿಸುವಂತೆ ನೋಟಿಸ್​ ನೀಡಲಾಗಿತ್ತು. ನೋಟಿಸ್​ ಹಿನ್ನೆಲೆಯಲ್ಲಿ ರೆಡ್ಡಿ ತಮ್ಮ ಲಾಯರ್​ ಜೊತೆಗೆ ಇಂದು ಸಿಸಿಬಿಗೆ ಆಗಮಿಸಿದರು. ಈ ವೇಳೆ ರೆಡ್ಡಿಗೆ ಪ್ರಶ್ನೆಗಳ ಸುರಿ ಮಳೆಯನ್ನೇ ಹರಿಸಿದರು. 

​ಈ ವೇಳೆ ರೆಡ್ಡಿ ನೀಡಿದ ಉತ್ತರ ಅಧಿಕಾರಿಗಳಿಗೆ ಸಮಂಜಸ ಅನ್ನಿಸದ ಕಾರಣ ಹೆಚ್ಚುವರಿ ಪೊಲೀಸರ ಸೂಚನೆ ಮೇರೆಗೆ ರೆಡ್ಡಿಯನ್ನು ಬಂಧಿಸಲಾಗಿದೆ.

ಜನಾರ್ಧನ ರೆಡ್ಡಿ ಇಂದೇ ಸಿಸಿಬಿ ಪೊಲೀಸರ ಮುಂದೆ ಹಾಜರಾಗಲು ಕಾರಣವೇನು? ಈ ವಿಡಿಯೋ ನೋಡಿ:

"

click me!