‘ಸಿದ್ದು ಪತ್ರೆ ಬರೆಯವುದು ರಾಜಕೀಯ ಚಟ ತೀರಿಸಿಕೊಳ್ಳಲು’!

First Published Jul 14, 2018, 7:51 PM IST
Highlights

ತುಂಗಾ ನದಿಗೆ ಬಾಗಿನ ಅರ್ಪಿಸಿದ ಈಶ್ವರಪ್ಪ

ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಟೀಕಾಪ್ರಹಾರ

ರಾಜಕೀಯ ಚಟ ತೀರಿಸಿಕೊಳ್ಳಲು ಪತ್ರ ಬರೆಯುತ್ತಾರೆ

ಸರ್ಕಾರದ ಸಾಲಮನ್ನಾ ಬೃಹತ್ ನಾಟಕ ಎಂದ ಈಶ್ವರಪ್ಪ 

ಶಿವಮೊಗ್ಗ(ಜು.14): ಮಾಜಿ ಡಿಸಿಎಂ ಹಾಗೂ ಶಾಸಕ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ತುಂಗಾನದಿಗೆ ಬಾಗಿನ ಸಮರ್ಪಿಸಿದರು. ಈ ವೇಳೆ ಮಾತನಾಡಿದ ಅವರು, ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ  ಸಿದ್ದರಾಮಯ್ಯ ಪತ್ರ ಬರೆದು ರಾಜಕೀಯ ಚಟ ತೀರಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ಹರಿಹಾಯ್ದರು.

ಅಕ್ಕಿ ಕಡಿತ, ಪೆಟ್ರೋಲ್ ತೆರಿಗೆ ಹೆಚ್ಚಳ ಸಂಬಂಧ ಪತ್ರ ಬರೆದು ರಾಜಕೀಯ ನಾಟಕವಾಗುವುದು ಬೇಡ. ಸಿದ್ದರಾಮಯ್ಯ ಪತ್ರ ಬರೆಯವುದನ್ನು ಬಿಟ್ಟು ಕ್ರಮಕ್ಕೆ  ಮುಂದಾಗಲಿ. ಆಗ ಸಮನ್ವಯ ಸಮಿತಿ ಅಧ್ಯಕ್ಷರಿಗೆ ಶಕ್ತಿಯಿದೆ ಎಂದು ಭಾವಿಸುತ್ತೆವೆ. ಇಲ್ಲವಾದರೆ, ಮೈತ್ರಿ ಸರ್ಕಾರದಲ್ಲಿ ಅವರೊಬ್ಬ ಉತ್ತರ ಕುಮಾರ ಆಗುತ್ತಾರೆ ಎಂದು ಈಶ್ವರಪ್ಪ ಲೇವಡಿ ಮಾಡಿದರು.  

ರಾಜ್ಯ ಸರ್ಕಾರ ಎರಡು ರೀತಿಯಲ್ಲಿ ಜನರಿಗೆ ಮೋಸ ಮಾಡಿದೆ. ಬಜೆಟ್ ನಲ್ಲಿ 7 ಕೆ.ಜಿ.ಅಕ್ಕಿಯಲ್ಲಿ 2 ಕೆ.ಜಿ ಕಡಿತ ಮಾಡಿ 5 ಕೆ.ಜಿ ಅಕ್ಕಿ ನೀಡುವ ಮೂಲಕ ರೈತರಿಗೆ ಬರೆ ಹಾಕಿದೆ. ಕೇಂದ್ರ ಸರ್ಕಾರ ನೀಡುವ ಅಕ್ಕಿಯ ಜೊತೆ ರಾಜ್ಯ ಸರ್ಕಾರ 2 ಕೆ.ಜಿ ಅಕ್ಕಿ ಸೇರಿಸಿ 7 ಕೆ.ಜಿ ಅಕ್ಕಿ ನೀಡಲಿ. ಅಕ್ಕಿ ನೀಡದೆ ಹೋದರೆ ಬಿಎಸ್ ವೈ ಜೊತೆ ಸೇರಿ ಸಭೆ ನಡೆಸಿ ರಾಜ್ಯದ್ಯಾಂತ ಹೋರಾಟ ನಡೆಸಲಾಗುತ್ತದೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು 

ಹಾಗೆಯೇ ವಿದ್ಯಾರ್ಥಿಗಳಿಗೆ ಉಚಿತವಾಗಿ  ಬಸ್ ಪಾಸ್ ವಿಚಾರದಲ್ಲಿ ಸರ್ಕಾರ ದಲ್ಲಾಳಿಗಳ ರೀತಿ ವಿಧಾನಸಭೆಯಲ್ಲಿ ವರ್ತನೆ ಮಾಡಿದೆ. ಇದು ಸರ್ಕಾರ ವ್ಯವಸ‌್ಥೆಗೆ ಮಾಡಿದ ಅಪಚಾರ. ವಿದ್ಯಾರ್ಥಿಗಳು ಹೋರಾಟಕ್ಕೆ ಹೋಗುವ ಮುನ್ನ ಸರ್ಕಾರ ಬಸ್ ಪಾಸ್ ನೀಡಬೇಕು. ವಿದ್ಯಾರ್ಥಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡುತ್ತದೆ ಎಂದು ಈಶ್ವರಪ್ಪ ಭರವಸೆ ನೀಡಿದರು.

ರೈತರ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಇನ್ನೋಂದೆಡೆ ಅವರ ಬಳಿ ಹಣ ಇಲ್ಲ. ಒಂದು ರೀತಿ ಪಾಪರ್  ಆಗಿರುವ ಸರ್ಕಾರ ಇದು ಎಂದು ಈಶ್ವರಪ್ಪ ಹರಿಹಾಯ್ದರು. ಮಳೆಯಿಂದ ಸಾವು ನೋವು ಆಗದಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಗಮನ ಹರಿಸಬೇಕು. ಈಗ ಆಗಿರುವ ಸಾವು ನೋವುಗಳಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

click me!