ತನ್ನನ್ನು ವಜಾಗೊಳಿಸುವಂತೆ ಕೋರಿದ್ದ ಬಿಷಪ್: ಹಂಗೇ ಮಾಡಿದ ವ್ಯಾಟಿಕನ್!

By Web DeskFirst Published Sep 20, 2018, 7:19 PM IST
Highlights

ಕೇರಳದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ! ಬಿಷಪ್ ಫ್ರಾಂಕೊ ಮುಲಕ್ಕಲ್ ವಜಾಗೊಳಿಸಿದ ವ್ಯಾಟಿಕನ್! ವಿಚಾರಣೆ ಮುಗಿಯುವವರೆಗೂ ತಾತ್ಕಾಲಿಕ ವಜಾ! ವಜಾಗೊಳಿಸುವಂತೆ ಖುದ್ದು ಪತ್ರ ಬರೆದಿದ್ದ ಬಿಷಪ್

ಕೊಚ್ಚಿ(ಸೆ.20): ಕೇರಳದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್ ನ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ವ್ಯಾಟಿಕನ್ ತಾತ್ಕಾಲಿಕವಾಗಿ ಹುದ್ದೆಯಿಂದ ತೆರವುಗೊಳಿಸಿದೆ.

ಮುಲಕ್ಕಲ್ ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿಯುವವರೆಗೆ ತಮ್ಮನ್ನು ಹುದ್ದೆಯಿಂದ ತೆರವುಗೊಳಿಸುವಂತೆ ಸ್ವತಃ ವ್ಯಾಟಿಕನ್ ಪೋಪ್ ಫ್ರಾನ್ಸಿಸ್ ಅವರಿಗೆ ಪತ್ರ ಬರೆದಿದ್ದರು. 

ಮುಲಕ್ಕಲ್ ಮನವಿಯನ್ನು ಪುರಸ್ಕರಿಸಿದ ಪೋಪ್, ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ, ಅವರ ಸ್ಥಾನಕ್ಕೆ ಬಾಂಬೆಯ ಪ್ರಧಾನ ಬಿಷಪ್ ಅಗ್ನೆಲೊ ರಫಿನೊ ಗ್ರೇಸಿಯಸ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲಕ್ಕಲ್ ಅವರು ಸೆಪ್ಟೆಂಬರ್ 11ರಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
 

click me!