BIG3: ‘ಮಂಗ್ಯಾನ ಆಟ’ಕ್ಕೆ ಶಾಲಾ ವಿದ್ಯಾರ್ಥಿಗಳು ಬೇಸ್ತು..!

Jun 21, 2018, 1:06 PM IST

ಹರಪನಹಳ್ಳಿ(ಜೂ.21): ತಾಲೂಕಿನ ಉಚ್ಚಂಗಿದುರ್ಗದ ಶತಮಾನದ ಸರ್ಕಾರಿ ಶಾಲೆಗೆ ಇದೀಗ ಮಂಗಗಳ ಕಾಟ ಶುರುವಾಗಿದೆ. ಶಾಲಾ ಸಮಯದಲ್ಲಿ ಕೋಣೆಯ ಹೆಂಚು ತೆಗೆದು ಮಕ್ಕಳಿಗೆ ಕೋತಿಗಳ ಹಿಂಡು ಕಾಟ ಕೊಡುತ್ತಿದೆ. ನಿತ್ಯವೂ ಶಾಲಾ ಸಮಯದಲ್ಲೇ ಲಗ್ಗೆ ಇಡುವ ಕೋತಿಗಳ ಹಿಂಡು, ಪಾಠದಲ್ಲಿ ನಿರತವಾಗಿರುವ ಮಕ್ಕಳಿಗೆ ಕಾಟ ಕೊಡುತ್ತಿವೆ. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇದುವರೆಗೂ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸವೇ ಸರಿ.

ಕೋತಿಗಳ ಹಿಂಡು ಸರ್ಕಾರಿ ಶಾಲೆಯ ಮಕ್ಕಳಿಗೆ ಹೇಗೆ ಕಾಟ ಕೊಡುತ್ತವೆ ಎಂಬುದನ್ನು ಈ ವಿಡಿಯೋದಲ್ಲಿ ನೀವೇ ನೋಡಿ..