ಬೆಂಗಳೂರು ಪೂರ್ವ ಧಗಧಗ, ಪ್ರಣಬ್‌ ಸ್ಥಿತಿ ಚಿಂತಾಜನಕ: ಆಗಸ್ಟ್ 12ರ ಟಾಪ್ 10 ಸುದ್ದಿ!

By Suvarna NewsFirst Published Aug 12, 2020, 5:23 PM IST
Highlights

ಕೊರೋನಾತಂಕ, ಪ್ರವಾಹ, ಭೂಕುಸಿತ ರಾಜ್ಯದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ. ಇವುಗಳನ್ನು ಎದುರಿಸುತ್ತಿದ್ದಾಗಲೇ ಅತ್ತ ರಾಜ್ಯ ರಾಜಧಾನಿಯಲ್ಲಿ ಉದ್ರಿಕ್ತರ ಗುಂಪೊಂದು ರಾತ್ರೋ ರಾತ್ರಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದು, ಸಿಕ್ಕ ಸಿಕ್ಕ ವಹನಗಳಿಗೆ ಬೆಂಕಿ ಹಚ್ಚಿದೆ. ಇವರನ್ನು ನಿಯಂತ್ರಿಸಲು ಪೊಲೀಸರು ಗೋಲೀಬಾರ್ ನಡೆಸಿದ್ದು ಮೂವರು ಬಲಿಯಾಗಿದ್ದಾರೆ. ಮತ್ತೊಂದೆಡೆ ಕೊರೋನಾ ಮಣಿಸಿದ್ದ ನ್ಯೂಜಿಲೆಂಡ್‌ನಲ್ಲಿ 102 ದಿನಗಳ ಬಳಿಕ ಹೊಸ ನಾಲ್ಕು ಕೊರೋನಾ ಪ್ರಕರಣಗಳು ದಾಖಲಾಗಿವೆ. ಇಷ್ಟೇ ಅಲ್ಲದೇ ಆಗಸ್ಟ್ 12ರ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ ನೋಡಿ.

ಪೈಗಂಬರ್ ಅವಹೇಳನ ಆರೋಪ, ಬೆಂಗಳೂರು ಪೂರ್ವ ಧಗಧಗ: ಗೋಲಿಬಾರ್‌ಗೆ 3 ಬಲಿ!

 ಇಸ್ಲಾಂ ಧರ್ಮಗುರು ಮಹಮದ್‌ ಪೈಗಂಬರ್‌ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಲಾಗಿದೆ ಎಂದು ರಾಜಧಾನಿಯ ಕಾವಲ್‌ ಬೈರಸಂದ್ರದಲ್ಲಿ ಮಂಗಳವಾರ ರಾತ್ರಿ ವ್ಯಾಪಕ ಹಿಂಸಾಚಾರ ನಡೆಸಲಾಗಿದೆ.
    
ಬೆಂಗಳೂರು ಗಲಭೆ: ಉದ್ರಿಕ್ತ ಗುಂಪಿನಿಂದ ಸುವರ್ಣ ನ್ಯೂಸ್ ವರದಿಗಾರರ ಮೇಲೆ ಹಲ್ಲೆ

ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ಉದ್ರಿಕ್ತ ಗುಂಪೊಂದು ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿದೆ. 

ಬೆಂಗಳೂರು ಗಲಭೆ: ಉತ್ತರ ಪ್ರದೇಶ ಮಾದರಿಯ ಕಾನೂನು ಜಾರಿ ತರುವಂತೆ ಸಿಎಂಗೊಂದು ಪತ್ರ

 ಫೇಸ್‌ಬುಕ್‌ನಲ್ಲಿ ಹಾಕಲಾದ ವಿವಾದಿತ ಪೋಸ್ಟ್‌ಗೆ ಸಂಬಂಧಪಟ್ಟಂತೆ ಪುಲಿಕೇಶಿ ನಗರ ರಣರಂಗವಾಗಿದೆ. ಡಿ.ಜಿ.ಹಳ್ಳಿ ಪೊಲೀಸ್‌ ಠಾಣೆ ಸುತ್ತಮುತ್ತ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದು, ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಬಿಜೆಪಿ ನಾಯಕರ ವ್ಯಂಗ್ಯ: ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ತಿವಿದ ಸಿದ್ದರಾಮಯ್ಯ..!

ನಗರದ ಡಿಜೆ ಹಳ್ಳಿಯಲ್ಲಿ ನಡೆದ ದಾಂಧಲೆಯನ್ನ ವಿಪಕ್ಷಗಳು ಸೇರಿ ಇಡೀ ರಾಜ್ಯವೇ ಖಂಡಿಸುತ್ತಿದೆ. ಅದರಂತೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ದುರ್ಘಟನೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿದ್ದರು. ಆದ್ರೆ, ಅವರ ಹೇಳಿಕೆ ಭಾರೀ ಸದ್ದು ಮಾಡಿದ್ದು, ಕೊನೆಗೆ ಸಿದ್ದರಾಮಯ್ಯ ಅವರೇ ಸಮಜಾಯಿಷಿ ನೀಡಿದ್ದಾರೆ.

ಮೆದುಳು ಸರ್ಜರಿ ಬಳಿಕ ಮಾಜಿ ರಾಷ್ಟ್ರಪತಿ ಪ್ರಣಬ್‌ ಸ್ಥಿತಿ ಚಿಂತಾಜನಕ!

ಕೊರೋನಾ ಸೋಂಕಿನ ನಡುವೆಯೇ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್‌ ಆಸ್ಪತ್ರೆ ತಿಳಿಸಿದೆ.

ಬೆಂಗಳೂರಿನಲ್ಲಿ ಹಿಂಸಾಚಾರದ ನಡುವೆ ಹಿಂದೂ ದೇಗುಲವನ್ನು ರಕ್ಷಿಸಿದ ಮುಸ್ಲಿಂ ಯುವಕರು!

ಹಿಂಸಾಚಾರ ಯಾವತ್ತೂ ಕೆಟ್ಟ ನೆನಪಾಗಿ ಉಳಿಯುತ್ತದೆ. ಆದರೀಗ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಹಿಂಸಾಚಾರದ ನಡುವೆಯೂ ಅದ್ಭುತ ದೃಶ್ಯವೊಂದು ಕಂಡು ಬಂದಿದ್ದು, ಇದನ್ನು ಅನೇಕ ಮಂದಿ ನೆನಪಿಟ್ಟುಕೊಳ್ಳಲು ಬಯಸುತ್ತಾರೆ. ಶಾಸಕರ ಮನೆ, ರಸ್ತೆಯಲ್ಲಿದ್ದ ವಾಹನಗಳಿಗೆ ತಗುಲಿದ ಬೆಂಕಿ ಹೀಗೆ ಗಲಭೆಯ ನಡುವೆಯೂ ಕಂಡು ಬಂದ ಸಾಮರಸ್ಯ ಸದ್ಯ ಸದ್ದು ಮಾಡುತ್ತಿದೆ.

102 ದಿನ ನಾಪತ್ತೆಯಾಗಿದ್ದ ಕೊರೋನಾ ಮತ್ತೆ ಪ್ರತ್ಯಕ್ಷ: ನ್ಯೂಜಿಲೆಂಡ್‌ನಲ್ಲಿ ಕಂಪ್ಲೀಟ್‌ ಲಾಕ್‌ಡೌನ್!

ಕೊರೋನಾ ವೈರಸ್‌ನಿಂದ 102 ದಿನ ಮುಕ್ತವಾಗಿದ್ದ ನ್ಯೂಜಿಲೆಂಡ್‌ನಲ್ಲಿ ಮತ್ತೆ ಈ ಮಹಾಮಾರಿ ಕಾಣಿಸಿಕೊಂಡಿದೆ. ಒಂದೇ ಕುಟುಂಬದ ನಾಲ್ವರು ಸದಸ್ಯರು ಕೊರೋನಾ ಸೋಂಕಿತರಾಗಿದ್ದಾರೆಂದು ತಿಳಿದು ಬಂದಿದೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ದೇಶಾದ್ಯಂತ ಮತ್ತೊಂದು ಬಾರಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಅಲ್ಲದೇ ಈ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.

ಈ 10 ರಾಜ್ಯಗಳು ಕೊರೋನಾ ಗೆದ್ದರೆ ದೇಶ ಗೆದ್ದಂತೆ: ಪಿಎಂ ಮೋದಿ!

ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಕೊರೋನಾ ಹಾವಳಿ ತೀವ್ರವಾಗಿದೆ. ಈ 10 ರಾಜ್ಯಗಳು ಕೊರೋನಾವನ್ನು ಮಣಿಸಿದರೆ ಈ ಹೋರಾಟದಲ್ಲಿ ಇಡೀ ಭಾರತ ಗೆದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಾಸ್ಕ್‌ ಧರಿಸಿಲ್ಲವೇಕೆಂದ ಪೊಲೀಸ್‌ ಜತೆ ರವೀಂದ್ರ ಜಡೇಜಾ ಪತ್ನಿ ವಾಗ್ವಾದ

ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಮಾಸ್ಕ್‌ ಧರಿಸದೇ ಕಾರಿನಲ್ಲಿ ಸಂಚರಿಸಿ, ಪ್ರಶ್ನಿಸಿದ ಪೊಲೀಸರ ಜತೆಗೆ ವಾಗ್ವಾದ ನಡೆಸಿದ್ದಾರೆ. 

ನಟ ಸಂಜಯ್‌ ದತ್‌ಗೆ ಶ್ವಾಸಕೋಶ ಕ್ಯಾನ್ಸರ್‌!

ಉಸಿರಾಟ ಸಮಸ್ಯೆ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿರುವ ಬಾಲಿವುಡ್‌ ನಟ ಸಂಜಯ್‌ ದತ್‌ ಅವರಲ್ಲಿ ಶ್ವಾಸಕೋಶ ಕ್ಯಾನ್ಸರ್‌ ಪತ್ತೆಯಾಗಿದೆ ಎಂದು ಹೇಳಲಾಗಿದೆ.

click me!