ಅನಾಹುತವಾದರೆ ಶಾಲಾ ಆಡಳಿತ ಮಂಡಳಿ ಹೊಣೆ : ಸುನೀಲ್ ಕುಮಾರ್

By Web DeskFirst Published Oct 30, 2018, 8:17 AM IST
Highlights

ಮಕ್ಕಳ ಸುರಕ್ಷತಾ ನಿಯಮಗಳ ಬಗ್ಗೆ ಕ್ರಮವಹಿಸಿದಿದ್ದರೆ, ಯಾವುದೇ ಅನಾಹುತ ನಡೆದಾಗ ಆಯಾ ಖಾಸಗಿ ಶಾಲಾ ಆಡಳಿತ ಮಂಡಳಿಯನ್ನು ನೇರವಾಗಿ ಹೊಣೆ ಮಾಡಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಅ. 30): ಮಕ್ಕಳ ಸುರಕ್ಷತಾ ನಿಯಮಗಳ ಬಗ್ಗೆ ಕ್ರಮವಹಿಸಿದಿದ್ದರೆ, ಯಾವುದೇ ಅನಾಹುತ ನಡೆದಾಗ ಆಯಾ ಖಾಸಗಿ ಶಾಲಾ ಆಡಳಿತ ಮಂಡಳಿಯನ್ನು ನೇರವಾಗಿ ಹೊಣೆ ಮಾಡಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಸುರಕ್ಷತಾ ನಿಯಮಗಳ ಬಗ್ಗೆ ಸರ್ಕಾರ ಸೂಚಿಸಿರುವ ನಿಯಮಗಳನ್ನು ಶಾಲಾ ಆಡಳಿತ ಮಂಡಳಿ ಪಾಲಿಸಬೇಕು. ಈ ಹಿಂದೆ ವರ್ತೂರಿನ ವಿಬ್‌ಗಯಾರ್‌ ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಬಳಿಕ ಸರ್ಕಾರ ಖಾಸಗಿ ಶಾಲೆಗಳು ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿತ್ತು.

ಈ ಪೈಕಿ ಪ್ರಮುಖವಾಗಿ ಭದ್ರತಾ ಸೇರಿ ಇಡೀ ಶಾಲಾ ಸಿಬ್ಬಂದಿ ಮಾಹಿತಿಯನ್ನು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ‘ಏಕಗವಾಕ್ಷಿ’ ಕೇಂದ್ರದಲ್ಲಿ ನವೀಕರಣ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಶಾಲೆಯಲ್ಲಿ ಕೆಲಸ ಮಾಡುವ ಚಾಲಕ, ಹೌಸ್‌ಕೀಪಿಂಗ್‌ ಕೆಲಸ ಮಾಡುವ ಸಿಬ್ಬಂದಿ ಬಗ್ಗೆ ಪೂರ್ವಪರದ ಬಗ್ಗೆ ಪರಿಶೀಲನೆ ಮಾಡಿಸಿಕೊಳ್ಳುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಅನಾಹುತ ನಡೆದಾಗ ಆಯಾ ಶಾಲಾ ಆಡಳಿ ಮಂಡಳಿಯನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ನಗರದ ಸಾರ್ವಜನಿಕರು, ಉದ್ಯಮಿಗಳು ಹಾಗೂ ಇತರೆ ಯಾವುದೇ ಕಂಪನಿ ಮಾಲಿಕರು ತಮ್ಮ ಮನೆ ಅಥವಾ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿ, ಮನೆಗೆಲಸಗಾರರ ಬಗ್ಗೆ ಪೊಲೀಸ್‌ ಪರಿಶೀಲನೆ ಮಾಡಿಸಿಕೊಳ್ಳಬೇಕು. ಕೆಲಸಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಕೆಲಸಗಾರ, ಮಧ್ಯವರ್ತಿ ಅಥವಾ ಏಜೆನ್ಸಿಯ ಸಿಬ್ಬಂದಿಯ ಫೋಟೋ ಹಾಗೂ ಇತರೆ ಮಾಹಿತಿಯನ್ನು ಸಂಗ್ರಹಿಸಬೇಕು. ಬಳಿಕ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಅದನ್ನು ಪರಿಶೀಲಿಸಿಕೊಂಡು, ಬಳಿಕ ಕೆಲಸಕ್ಕೆ ನಿಯೋಜಿಸಿಕೊಳ್ಳಬೇಕು ಎಂದರು.

ಓಲಾ ಮತ್ತು ಊಬರ್‌ ಕ್ಯಾಬ್‌ ಚಾಲಕರಿಂದ ಮಹಿಳಾ ಪ್ರಯಾಣಿಕರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹಿನ್ನೆಲೆಯಲ್ಲಿ ಪ್ರತಿ ಪಾಳಿಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುವ ಕ್ಯಾಬ್‌ ಚಾಲಕನ ಬಗ್ಗೆ ಮಾಹಿತಿ ನೀಡುವಂತೆ ಓಲಾ ಮತ್ತು ಊಬರ್‌ ಕಂಪನಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಇದೇ ವಳೇ ಆಯುಕ್ತರು ಮಾಹಿತಿ ನೀಡಿದರು.

click me!