ಎನ್ ಡಿಟಿವಿಗೆ ಬರ್ಖಾ ದತ್ ವಿದಾಯ

By Suvarna Web DeskFirst Published Jan 16, 2017, 10:57 AM IST
Highlights

ಖ್ಯಾತ ಪತ್ರಕರ್ತೆ ಬರ್ಖಾ ದತ್ ಎನ್ ಡಿಟಿವಿಗೆ ರಾಜಿನಾಮೆ ನೀಡಿದ್ದಾರೆ. ಎನ್ ಡಿಟಿವಿ ಜೊತೆ ದತ್ 21 ವರ್ಷಗಳ ಸುದೀರ್ಘ ಸಂಬಂಧ ಹೊಂದಿದ್ದು, ಅವರಿಗೆ ಚಾನಲ್ ಬೆಸ್ಟ್ ಆಫ್ ಲಕ್ ಹೇಳಿದೆ.

ನವದೆಹಲಿ (ಜ.16): ಖ್ಯಾತ ಪತ್ರಕರ್ತೆ ಬರ್ಖಾ ದತ್ ಎನ್ ಡಿಟಿವಿಗೆ ರಾಜಿನಾಮೆ ನೀಡಿದ್ದಾರೆ. ಎನ್ ಡಿಟಿವಿ ಜೊತೆ ದತ್ 21 ವರ್ಷಗಳ ಸುದೀರ್ಘ ಸಂಬಂಧ ಹೊಂದಿದ್ದು, ಅವರಿಗೆ ಚಾನಲ್ ಬೆಸ್ಟ್ ಆಫ್ ಲಕ್ ಹೇಳಿದೆ.

ಎನ್ ಡಿಟಿವಿಯಿಂದ ಹೊರಬಂದಿರುವ ಬರ್ಖಾ ದತ್ ಸ್ವಂತ ಉದ್ದಿಮೆಯನ್ನು ಆರಂಭಿಸುತ್ತಾರೆ ಎನ್ನಲಾಗಿದೆ.  1999 ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಿರ್ಭೀತ  ವರದಿ ಮಾಡಿ ದಿಟ್ಟ ಪತ್ರಕರ್ತೆ ಎನಿಸಿಕೊಂಡಿದ್ದರು. ಇವರ ದಿಟ್ಟ ವರದಿಗಾರಿಕೆಗೆ, ಪತ್ರಿಕೋದ್ಯಮದ ಸಾಧನೆಗೆ ಪದ್ಮಶ್ರೀ ಸೇರಿದಂತೆ ಸಾಕಷ್ಟು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

26/11 ರಲ್ಲಿ ತಾಜ್ ಮಹಲ್ ಹಾಗೂ ಓಬೆರಾಯ್ ಹೋಟೆಲ್ ಮೇಲೆ ಭಯೋತ್ಪಾದಕ ದಾಳಿ ನಡೆದಾದ ಜೀವವವನ್ನು ಪಣಕ್ಕಿಟ್ಟು ಸ್ಥಳದಿಂದಲೇ ನೇರ ವರದಿ ಮಾಡಿದ್ದರು. ಇದು ಅವರ ಮೇಲಿನ ವಿಮರ್ಶೆಗೂ ಕಾರಣವಾಗಿತ್ತು.

1995 ರಲ್ಲಿ ಬರ್ಖಾ ದತ್ ಎನ್ ಡಿಟಿವಿ ಸೇರಿದ್ದರು. 21 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದರು. ಹೊಸದನ್ನೇದರೂ ಮಾಡಬೇಕು ಎಂದು ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ.  

click me!