ನಾರಾಯಣಗಂಜ್ ಕೇಸ್: 26 ಮಂದಿಗೆ ಗಲ್ಲು

By Suvarna Web DeskFirst Published Jan 16, 2017, 3:02 PM IST
Highlights

ನಾರಾಯಣಗಂಜ್ ಕೇಸ್ ವಿಚಾರಣೆ ನಡೆಸಿದ ಸೆಷನ್ ನ್ಯಾ. ಸಯ್ಯದ್ ಇನಾಯತ್ ಹುಸ್ಸೇನ್ ಅವರು ಸೋಮವಾರ ತೀರ್ಪು ಪ್ರಕಟಿಸಿದ್ದಾರೆ.

ಢಾಕಾ(ಜ.16): ನಾರಾಯಣ ಗಂಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿ 26 ಮಂದಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಅವಾಮಿ ಲೀಗ್ ನಾಯಕ ನೂರ್ ಹುಸ್ಸೇನ್, ಆರ್‌'ಎಬಿ ಅಧಿಕಾರಿ ಲೆ. ಕ. ತರೇಕ್ಯು ಸಯೀದ್ ಮೊಹಮ್ಮದ್, ಮೇಜರ್ ಆರಿಫ್ ಹುಸ್ಸೇನ್ ಮತ್ತು ಲೆ. ಕ. ಎಂ.ಎಂ. ರಾಣ ಶಿಕ್ಷೆಗೊಳಗಾದ ಅಪರಾಧಿಗಳು.

ನಾರಾಯಣಗಂಜ್ ಕೇಸ್ ವಿಚಾರಣೆ ನಡೆಸಿದ ಸೆಷನ್ ನ್ಯಾ. ಸಯ್ಯದ್ ಇನಾಯತ್ ಹುಸ್ಸೇನ್ ಅವರು ಸೋಮವಾರ ತೀರ್ಪು ಪ್ರಕಟಿಸಿದ್ದಾರೆ.

ಏಳು ಗಣ್ಯ ವ್ಯಕ್ತಿಗಳನ್ನು ಹತ್ಯೆಗೈದ ಘಟನೆಯು ಬಾಂಗ್ಲಾದಲ್ಲಿ ಸಾಕಷ್ಟು ಗಲಭೆ ಸೃಷ್ಟಿಸಿತ್ತು. ನಾರಾಯಣಗಂಜ್'ನ ಮೇಯರ್ ನಜ್ರುಲ್ ಇಸ್ಲಾಂ, ಹಿರಿಯ ವಕೀಲ ಚಂದನ್ ಸರ್ಕಾರನ್ನು 2014ರ ಏ.27ರಂದು ಅಪಹರಿಸಲಾಗಿತ್ತು, 3 ದಿನಗಳ ನಂತರ ಅವರ ಮೃತದೇಹ ಶಿತಲಖ್ಯಾ ನದಿಯಲ್ಲಿ ಪತ್ತೆಯಾಗಿತ್ತು.

click me!