ಸಿಕ್ಕವು 40 ಮಮ್ಮಿಗಳು: ವೃದ್ಧರು, ಪ್ರಾಣಿಗಳು ಮತ್ತು ಮಕ್ಕಳು!

By Web DeskFirst Published Feb 3, 2019, 1:39 PM IST
Highlights

ಒಂದಲ್ಲ, ಎರಡಲ್ಲ ಸಿಕ್ಕಿದ್ದು ಬರೋಬ್ಬರಿ 40 ಮಮ್ಮಿಗಳು| ಈಜಿಪ್ಟ್ ನ  ತುನಾ-ಅಲ್-ಗಬಲ್ ಪ್ರದೇಶದಲ್ಲಿ ಶೋಧ| ಟಾಲೆಮಿಕ್ ಯುಗದ 40 ಮಮ್ಮಿಗಳ ಪತ್ತೆ| ವೃದ್ಧರು, ಪ್ರಾಣಿಗಳು ಮತ್ತು ಮಕ್ಕಳ ಮಮ್ಮಿಗಳು

ಮಿನ್ಯಾ(ಫೆ.03): ಮಮ್ಮಿಗಳ ನಾಡು ಈಜಿಪ್ಟ್‌ನಲ್ಲಿ ಬಗೆದಷ್ಟೂ ಪುರಾತನ ಮಮ್ಮಿಗಳು ಸಿಗುತ್ತಿವೆ. ಮಮ್ಮಿಗಳ ಜಾಡು ಹಿಡಿದು ಹೊರಟಿರುವ ಪುರಾತತ್ವ ಶಾಸ್ತ್ರಜ್ಞರಿಗೆ ವಿಸ್ಮಯ ಮಮ್ಮಿಗಳು ದೊರೆಯುತ್ತಿವೆ.

ಅದರಂತೆ ಇಲ್ಲಿನ ಮಿನ್ಯಾ ರಾಜ್ಯದ ತುನಾ-ಅಲ್-ಗಬಲ್ ಪ್ರದೇಶದಲ್ಲಿ ಟಾಲೆಮಿಕ್ ಯುಗ(ಟಾಲೆಮಿ ರಾಜ)ದ ಸುಮಾರು 40 ಮಮ್ಮಿಗಳು ಪತ್ತೆಯಾಗಿದ್ದು, ವೃದ್ಧರ, ಮಕ್ಕಳ ಮತ್ತು ವಿವಿಧ ಪ್ರಾಣಿಗಳನ್ನು ಒಂದೇ ಜಾಗದಲ್ಲಿ ಮಮ್ಮಿ ರೂಪದಲ್ಲಿ ಶೇಖರಿಸಿರಲಾಗಿದೆ.

The mummies, dating to the Ptolemaic era, were found laid on the floor or in open clay coffins in a crumbling communal tomb in Minya governorate "probably belonging to a petty bourgeois family", Egypt's antiquities ministry says https://t.co/6ilvzIIBUm pic.twitter.com/flEAssRan4

— AFP news agency (@AFP)

ಪತ್ತೆಯಾದ ಮಮ್ಮಿಗಳಲ್ಲಿ 12 ಮಕ್ಕಳ ಮತ್ತು 6 ಪ್ರಾಣಿಗಳ ಮಮ್ಮಿಗಳಿದ್ದು, ಇವರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರಾಗಿರಬಹುದು ಎಂದು ಅಂದಾಜಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪುರಾತತ್ವ ಶಾಸ್ತ್ರಜ್ಞ ಮೊಹ್ಮದ್ ರಗಾಬ್, ಈ ಮಮ್ಮಿಗಳು ಟಾಲೆಮಿ ರಾಜನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿವೆ ಎಂದು ತಿಳಿಸಿದ್ದಾರೆ. ಅಲ್ಲದೇ ಕೆಲವು ಮಮ್ಮಿಗಳಲ್ಲಿ 6 ಕೋಣೆಗಳ ಗುಪ್ತ ಹಾದಿ ಕೂಡ ಪತ್ತೆಯಾಗಿವೆ ಎಂದು ಹೆಳಿದ್ದಾರೆ.

ಸಿಕ್ತು ಪೂಜಾರಿಯ ಮಮ್ಮಿ: ಇಂರ್ಟೆಸ್ಟಿಂಗ್ ಕತೆ ಕೇಳಮ್ಮಿ!

click me!