ಹಾಡಹಗಲೇ ನಡೆಯಿತು ಭಯಾನಕ ಕೃತ್ಯ : ಸುಮ್ ಸುಮ್ನೆ ಪೊಲೀಸರಿಂದಲೇ ಶೂಟೌಟ್

By Web DeskFirst Published Sep 29, 2018, 12:32 PM IST
Highlights

ಹಾಡಹಗಲೇ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.  ವಾಹನ ನಿಲ್ಲಿಸದ ಹಿನ್ನೆಲೆಯಲ್ಲಿ  ಎನ್ ಕೌಂಟರ್ ಮಾಡಲಾಗಿದೆ. 

ಲಕ್ನೋ :  ಉತ್ತರ ಪ್ರದೇಶದಲ್ಲಿ ಪೇದೆಯೋರ್ವ ಮೊಬೈಲ್ ಕಂಪನಿಯ ಮ್ಯಾನೇಜರ್ ಓರ್ವರನ್ನು ಹತ್ಯೆ ಮಾಡಿರುವ ಪ್ರಕರಣ ನಡೆದಿದೆ. ಇಲ್ಲಿನ ಮ್ಯಾಕ್ ಡಂಪರ್ ಪ್ರದೇಶದಲ್ಲಿ ಶನಿವಾರ ಈ ದರ್ಘಟನೆ ನಡೆದಿದೆ. 

ಅನಾರೋಗ್ಯಕ್ಕೆ ಒಳಗಾಗಿದ್ದ  ವಿವೇಕ್ ತಿವಾರಿ ಹಾಗೂ ಅವರ ಸ್ನೇಹಿತೆ ಸನಾ ಖಾನ್ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ  ಪೊಲೀಸ್ ಪೇದೆ ಅವರನ್ನು ಪರಿಶೀಲನೆ ನಡೆಸಿ, ವಾಹನವನ್ನು ನಿಲ್ಲಿಸುವಂತೆ ತಿಳಿಸಿದ್ದಾರೆ.  ಈ ವೇಳೆ ವಾಹನ ನಿಲ್ಲಿಸದ ಹಿನ್ನೆಲೆಯಲ್ಲಿ ಅವರ  ಮೇಲೆ ಪೊಲೀಸ್ ಪೇದೆ ಗುಂಡು ಹಾರಿಸಿದ್ದಾರೆ. 

ಈ ಗಾಜನ್ನು ಸೀಳಿ ಒಳನುಗ್ಗಿದ ಗುಂಡು ತಿವಾರಿ ತಲೆಗೆ ಬಡಿದಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. 

ಅವರ ಗೆಳತಿ ಸನಾ ಖಾನ್ ದೂರು ನೀಡಿದ್ದು ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪೇದೆ ಪ್ರಶಾಂತ್  ಕುಮಾರ್ ಮೇಲೆ ಕೊಲೆ ಕೇಸ್ ದಾಖಲು ಮಾಡಲಾಗಿದೆ. 

 

Kalpana Tiwari,wife of deceased Vivek Tiwari says,"Police had no right to shoot at my husband,demand UP CM to come here&talk to me." He was injured&later succumbed to injuries after a police personnel shot at his car late last night,on noticing suspicious activity pic.twitter.com/buJyDWts5n

— ANI UP (@ANINewsUP)
click me!