ವೈಯಕ್ತಿಕ ಕಾರಣದಿಂದ ಆಪ್ ಮುಖಂಡ ದಿಢೀರ್ ರಾಜೀನಾಮೆ

By Web DeskFirst Published Aug 15, 2018, 1:42 PM IST
Highlights

ತಮ್ಮ ವೈಯಕ್ತಿಕ ಕಾರಣಗಳಿಂದ ಪಕ್ಷದ ಸ್ಥಾನಕ್ಕೆ ಮುಖಂಡ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪ್ರತಿಯೊಂದಕ್ಕೂ ಕೂಡ ಕೊನೆ ಎನ್ನುವುದು ಇದೆ. ಇದೀಗ ತಾವು ಕೂಡ ಪಕ್ಷದೊಂದಿಗಿನ ಪ್ರಯಾಣ  ಮುಗಿಸುತ್ತಿರುವುದಾಗಿ ಹೇಳಿದ್ದಾರೆ. 

ನವದೆಹಲಿ : ರಾಜಕಾರಣಿಯಾಗಿದ್ದ ಪತ್ರಕರ್ತ ಆಪ್ ಮುಖಂಡ ಆಶುತೋಷ್ ಅವರು ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಆಮ್ ಆದ್ಮಿ ಪಕ್ಷವನ್ನು ತೊರೆದ ಅವರು ಟ್ವೀಟ್ ಮಾಡಿದ್ದು ಈ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಪ್ರತಿಯೊಂದು ಜರ್ನಿಗೂ ಕೂಡ ಒಂದು ಕೊನೆ ಇರುತ್ತದೆ. ಅದರಂತೆ ಅದರಂತೆ ತಮ್ಮ ಹಾಗೂ ಆಪ್ ಜೊತೆಗಿನ ನಂಟೂ ಕೂಡ ಕೊನೆಗೊಂಡಿದೆ. 

ತಾವು ಪಕ್ಷಕ್ಕೆ ರಾಜೀನಾಮೆ ನೀಡಿದ್ದು,  ಇದು ಕೇವಲ ವೈಯಕ್ತಿಕ ಕಾರಣಕ್ಕಾಗಿ ಅಷ್ಟೇ. ತಮಗೆ ಬೆಂಬಲ ನೀಡಿದ ಎಲ್ಲರಿಗೂ ಕೂಡ ತುಂಬು ಹೃದಯದ ಧನ್ಯವಾದ ಎಂದು ಹೇಳಿದ್ದಾರೆ.

 

Every journey has an end. My association with AAP which was beautiful/revolutionary has also an end.I have resigned from the PARTY/requested PAC to accept the same. It is purely from a very very personal reason.Thanks to party/all of them who supported me Throughout.Thanks.

— ashutosh (@ashutosh83B)
click me!