
ನವದೆಹಲಿ(ನ.02): ಅಮೆರಿಕದಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ಇದೀಗ ಥೈಲಾಂಡ್‌ನಲ್ಲಿ ಸವಸ್ದಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಮೆರಿಕಾದಲ್ಲಿ ಹೌಡಿ ಮೋದಿ: ಭಾರತದಲ್ಲಿ ‘ಎಲ್ಲಾ ಚೆನ್ನಾಗಿದೆ’ ನೋಡಿ!
ಇಂದಿನಿಂದ ಮೂರು ದಿನಗಳ ಅಧಿಕೃತ ಥೈಲ್ಯಾಂಡ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಸಂಜೆ ಬ್ಯಾಂಕಾಕ್‌ನಲ್ಲಿ 'ಸವಸ್ದಿ ಪಿಎಂ ಮೋದಿ' ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಕುರಿತು ಖುದ್ದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಥೈಲ್ಯಾಂಡ್ ಪ್ರಗತಿಯಲ್ಲಿ ಅನಿವಾಸಿ ಭಾರತೀಯರ ಪಾತ್ರ ಅತ್ಯಂತ ದೊಡ್ಡದು ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಅಸಿಯಾನ್-ಇಂಡಿಯಾ, ಈಸ್ಟ್ ಏಷ್ಯಾ, ಆರ್ಸಿಇಪಿ ಶೃಂಗಸಭೆಗಳಲ್ಲಿ ಭಾಗವಹಿಸಲಿರುವ ಪ್ರಧಾನಿ, ಥಾಯ್ಲೆಂಡ್ ಪ್ರಧಾನಿ ಪ್ರಯೂತ್ ಛಾನ್-ಒ-ಚಾ ಅವರನ್ನು ಭೇಟಿ ಮಾಡಿ ಮಾತುಕತಡೆ ನಡೆಸಲಿದ್ದಾರೆ.
ಮೋದಿ-ಟ್ರಂಪ್ ಸ್ನೇಹವೆಷ್ಟು ಆಳವಿದೆ? ಎಲ್ಲಾ ಈ ಫೋಟೋಗಳೇ ವಿವರಿಸುತ್ತೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.