ಗಂಡು ಮಗುವಿಗಾಗಿ ಮೊದಲ ಹೆಣ್ಣು ಮಗುವನ್ನು ಎಸೆದ ತಂದೆ

By Web DeskFirst Published Sep 14, 2018, 12:54 PM IST
Highlights

ಗಂಡು ಮಗುವಿಗಾಗಿ ಬಯಸಿದ್ದ ತಂದೆಯೋರ್ವ ಎರಡನೆ ಮಗುವೂ ಕೂಡ ಹೆಣ್ಣಾಗಿದ್ದರಿಂದ ಮೊದಲ ಮಗುವನ್ನು ಮೇಲಿನಿಂದ ಕೆಳಕ್ಕೆ ಎಸೆದ ಘಟನೆ ಬರೇಲಿಯಲ್ಲಿ ನಡೆದಿದೆ. 

ಬೆಂಗಳೂರು :  ಎರಡನೇ ಬಾರಿ ಗಂಡು ಮಗು ಜನಿಸದ್ದಕ್ಕೆ ವ್ಯಕ್ತಿಯೋರ್ವ 2 ವರ್ಷದ ಮಗಳನ್ನು ಬಿಸಾಕಿದ ಅಮಾನವೀಯ ಘಟನೆ ಬರೇಲಿಯಲ್ಲಿ ನಡೆದಿದೆ. 

ಮನೆಯ ಬಾಲ್ಕನಿಯಿಂದ ಮಗುವನ್ನು ಕೆಳಕ್ಕೆ ಎಸೆಯಲಾಗಿದೆ.  ಎರಡನೇ ಬಾರಿಯೂ ಹೆಣ್ಣು ಮಗು ಹುಟ್ಟಿದ್ದಕ್ಕೆ ಈ ಕೃತ್ಯ ಎಸಗಿದ್ದಾರೆ. 

ಎತ್ತರದಿಂದ ಕೆಳಕ್ಕೆ ಬಿದ್ದ ಮಗುವು ಗಂಭೀರವಾಗಿ ಗಾಯಗೊಂಡಿದ್ದು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈತನನ್ನು ಅರವಿಂದ್ ಗಂಗ್ವಾರ್ ಎಂದು ಗುರುತಿಸಲಾಗಿದ್ದು ಸದ್ಯ ಈತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. 

ಕಾರ್ಮಿಕ ವೃತ್ತಿ ಮಾಡುತ್ತಿರುವ ಗಂಗ್ವಾರ್ 2ನೆಯದು ಗಂಡು ಮಗುವಾಗಲಿ ಎಂದು ಬಯಸಿದ್ದ. ಆದರೆ ಮತ್ತೆ ಹಣ್ಣು ಮಗು ಜನಿಸಿದ್ದರಿಂದ ಕುಡಿದು ಬಂದು ಮೊದಲ ಮಗುವನ್ನು ಹತ್ಯೆ ಮಾಡಲು ಯತ್ನಿಸಿದ್ದಾನೆ. ಹೆಂಡತಿ ವಿರುದ್ಧ ಆತ ಆಕ್ರೋಶಗೊಂಡು ಹೀಗೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

click me!