95 ವರ್ಷದ ಅಜ್ಜನ ವಿರುದ್ಧ 36000 ಜನರ ಹತ್ಯೆ ಕೇಸ್‌!

By Web DeskFirst Published Nov 24, 2018, 12:19 PM IST
Highlights

ಹನ್ಸ್‌ ಎಚ್‌ ಎಂಬ 95 ವರ್ಷದ ವೃದ್ಧನ ವಿರುದ್ಧ 36000 ಜನರ ಹತ್ಯೆಯ ದೋಷಾರೋಪ ಹೊರಿಸಲಾಗಿದೆ.

ಹನ್ಸ್‌ ಎಚ್‌ ಎಂಬ 95 ವರ್ಷದ ವೃದ್ಧ ಈಗಲೋ ಆಗಲೋ ಸಾಯುತ್ತಾನೆ ಅನ್ನುತ್ತಾನೆ ಅನ್ನೋ ಸ್ಥಿತಿಯಲ್ಲಿದ್ದಾರೆ. ಇಂಥ ವ್ಯಕ್ತಿ ವಿರುದ್ಧ ಇದೀಗ 36000 ಜನರ ಹತ್ಯೆಯ ದೋಷಾರೋಪ ಹೊರಿಸಲಾಗಿದೆ.

ಹೌದು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ ತನ್ನ ವಿರೋಧಿಗಳನ್ನು ಮಟ್ಟಹಾಕಲು ಆಸ್ಟ್ರಿಯಾದಲ್ಲಿ ಸ್ಥಾಪಿಸಿದ್ದ ನಾಜಿ ಕಾನ್ಸಂಟ್ರೇಷನ್‌ ಕ್ಯಾಂಪ್‌ನಲ್ಲಿ 1944-45ರ ಅವಧಿಯಲ್ಲಿ 36000ಕ್ಕೂ ಹೆಚ್ಚು ಜನರನ್ನು ಹತ್ಯೆಗೈಯಲಾಗಿತ್ತು. ಆಗ ಈ ಕ್ಯಾಂಪ್‌ನ ಮುಖ್ಯಸ್ಥನಾಗಿದ್ದ ಹನ್ಸ್‌ ಎಂಬಾತನ ವಿರುದ್ಧ ಇದೀಗ ಜರ್ಮನಿಯ ತನಿಖಾಧಿಕಾರಿಗಳು ಕೋರ್ಟ್‌ಗೆ ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ.

ಈ ಕ್ಯಾಂಪ್‌ನಲ್ಲಿ ವಿಷಾನಿಲ ಬಿಟ್ಟು, ವಿಷದ ಇಂಜೆಕ್ಷನ್‌ ನೀಡಿ, ಗುಂಡಿನ ದಾಳಿ ಹಾಗೂ ಇತರೆ ಮಾರ್ಗಗಳ ಮೂಲಕ ಸಾವಿರಾರು ಜನರನ್ನು ಹತ್ಯೆಗೈಯಲಾಗಿತ್ತು.

click me!