ಆರೋಗ್ಯ ಸಮಸ್ಯೆ ಇಲ್ಲದಿದ್ರೂ ಬರೋಬ್ಬರಿ 50 ವರ್ಷ ಆಸ್ಪತ್ರೆಯಲ್ಲಿ ಕಳೆದ ವ್ಯಕ್ತಿ, ಕಾರಣ ಏನು?

By Vinutha PerlaFirst Published May 5, 2024, 3:15 PM IST
Highlights

ಆರೋಗ್ಯ ಸಮಸ್ಯೆಯಾದಾಗ ಆಸ್ಪತ್ರೆಗೆ ಹೋಗೋದು ಸರಿ. ವೈದ್ಯರ ಕಾಳಜಿಯ ಹೆಚ್ಚಿನ ಅಗತ್ಯ ಬಿದ್ದಾಗ ಒಂದಷ್ಟು ದಿನ ಉಳಿದುಕೊಳ್ಳಬೇಕಾಗಿ ಸಹ ಬರಬಹುದು. ಆದ್ರೆ ವ್ಯಕ್ತಿಯೊಬ್ಬರು ಆರೋಗ್ಯ ಸಮಸ್ಯೆ ಇಲ್ಲದಿದ್ರೂ ಬರೋಬ್ಬರಿ 50 ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಕಳೆದ್ರು. ಅದಕ್ಕೇನು ಕಾರಣ?

ಅನಾರೋಗ್ಯ ಸಮಸ್ಯೆ ಇಲ್ಲದಿದ್ದರೂ ವ್ಯಕ್ತಿಯೊಬ್ಬ ಇಂಗ್ಲೆಂಡ್‌ನ ಆಸ್ಪತ್ರೆಯೊಂದರಲ್ಲಿ ಬರೋಬ್ಬರಿ 50 ವರ್ಷಗಳಿಗೂ ಹೆಚ್ಚು ಕಾಲ ಬೀಗ ಹಾಕಿದ ಗೋಡೆಗಳ ಹಿಂದೆಯಿದ್ದ ಘಟನೆ ನಡೆದಿದೆ. ಹತ್ತು ವರ್ಷ ವಯಸ್ಸಿನವನಾಗಿದ್ದ ಚಾರ್ಲ್ಸ್ ಅಪಸ್ಮಾರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕೆಲವು ವರ್ಷಗಳ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದರೂ ನಂತರದ ವರ್ಷಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲ್ಲಿಲ್ಲ. ಬದಲಿಗೆ ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಯಿತು. ಚಾರ್ಲ್ಸ್‌ಗೆ ಹೋಗಲು ಬೇರೆ ಸ್ಥಳವಿಲ್ಲವಾದ ಕಾರಣ ಆಸ್ಪತ್ರೆ ಈ ನಿರ್ಧಾರವನ್ನು ತೆಗೆದುಕೊಂಡಿತು.

ಚಾರ್ಲ್ಸ್‌ ಸಹೋದರಿ ಮಾರ್ಗೋ ಇತ್ತೀಚಿಗೆ ಅವರನ್ನು ಆಸ್ಪತ್ರೆಯಿಂದ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಶ್ರಮಿಸಿದರು ಎಂದು ಬಹಿರಂಗಪಡಿಸಿದರು. ಕಳೆದ ವರ್ಷ, 62ನೇ ವಯಸ್ಸಿನಲ್ಲಿ, ಚಾರ್ಲ್ಸ್‌ ಮೊದಲ ಬಾರಿಗೆ ಫ್ಲಾಟ್‌ನ ಕೀಗಳನ್ನು ಪಡೆದರು. ರಿಚ್ಮಂಡ್ ಫೆಲೋಶಿಪ್ ಸ್ಕಾಟ್ಲೆಂಡ್‌ನ ಡೇವಿಡ್ ಫ್ಲೆಮಿಂಗ್, 'ಅವರ ಕುಟುಂಬವು ಅವರಿಗೆ ಸೂಕ್ತವಾದ ಸ್ಥಳವನ್ನು ಹುಡುಕಲು ವರ್ಷಗಳ ಕಾಲ ಹೋರಾಡಿತು. ಅದು ಸಾಧ್ಯವಾಗದ ಕಾರಣ ಚಾರ್ಲ್ಸ್‌ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು' ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ; ಮೊಬೈಲ್‌ ಟಾರ್ಚ್‌ನಲ್ಲಿ ಸಿಸೇರಿಯನ್ ಮಾಡಿದ ಡಾಕ್ಟರ್‌, ತಾಯಿ-ಮಗು ಸಾವು!

ಸ್ಕಾಟ್ಲೆಂಡ್ ತನಿಖೆಯ ಪ್ರಕಾರ, ದುರ್ಬಲತೆ ಹೊಂದಿರುವ ನೂರಾರು ಜನರು ಇನ್ನೂ ಆಸ್ಪತ್ರೆಗಳಿಗೆ ಸೀಮಿತರಾಗಿದ್ದಾರೆ. ಕುಟುಂಬದಿಂದ ನೂರಾರು ಮೈಲುಗಳಷ್ಟು ದೂರದಲ್ಲಿ ವಾಸಿಸುತ್ತಿದ್ದಾರೆ. ದೀರ್ಘಾವಧಿಯ ಆರೈಕೆ ಸೌಲಭ್ಯಗಳಿಗಿಂತ ಪ್ರತಿಯೊಬ್ಬರನ್ನು ಅವರ ಸ್ವಂತ ಮನೆಗಳಲ್ಲಿ ಇರಿಸಬೇಕು ಎಂದು ಅಧಿಕೃತ ನೀತಿ ದಶಕಗಳಿಂದ ಇದ್ದರೂ ಜನರು ಇನ್ನೂ ಆಸ್ಪತ್ರೆಯಲ್ಲೇ ಉಳಿದುಕೊಳ್ಳುತ್ತಿದ್ದಾರೆ.

ತನ್ನ ಸಹೋದರನಿಗೆ ತನ್ನ ಸ್ವಂತ ಮನೆಯನ್ನು ಪಡೆಯಲು ತಾನು ವರ್ಷಗಳ ಕಾಲ ಹೋರಾಡಿದೆ ಎಂದು ಅವನ ಸಹೋದರಿ ಹೇಳಿಕೊಂಡಿದ್ದಾಳೆ. 'ಇದೊಂದು ಕಾಲ್ಪನಿಕ ಕಥೆ ಎಂದು ಭಾವಿಸಬೇಡಿ. ಇದು ರಾತ್ರೋರಾತ್ರಿ ನಡೆದ ಪ್ರಕ್ರಿಯೆಯಲ್ಲ. ಹಲವಾರು ಜನರು ಇಂಥಾ ಕಷ್ಟದ ಸಮಯದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಸರಿಯಾದ ಸ್ಥಳವನ್ನು ಹುಡುಕಲು ಸುಮಾರು 14 ವರ್ಷಗಳನ್ನು ತೆಗೆದುಕೊಂಡಿದ್ದಾರೆ' ಎಂದರು.

ಒಂದೇ ದಿನ ಬಾಯ್‌ಫ್ರೆಂಡ್‌ಗೆ 100ಕ್ಕೂ ಅಧಿಕ ಬಾರಿ ಕರೆ, ಚೀನಾದ ಹುಡುಗಿಗೆ 'ಲವ್‌ ಬ್ರೇನ್‌' ಕಾಯಿಲೆ!

ಸ್ಕಾಟಿಷ್ ಸರ್ಕಾರವು ಒಟ್ಟು 20 ಮಿಲಿಯನ್ ಪೌಂಡ್‌ಗಳೊಂದಿಗೆ ಇಂಥಾ ರೋಗಿಗಳನ್ನು ಅವರ ಸ್ವಂತ ಮನೆಗಳಿಗೆ ಪರಿವರ್ತಿಸಲು ಹಣವನ್ನು ನೀಡಿದೆ.  ಆಸ್ಪತ್ರೆಗೆ ದಾಖಲಾದ ಅಥವಾ ಅವರ ಮನೆಗಳಿಂದ ನೂರಾರು ಮೈಲುಗಳಷ್ಟು ದೂರದಲ್ಲಿರುವ ವ್ಯಕ್ತಿಗಳ ರಾಷ್ಟ್ರೀಯ ನೋಂದಣಿಯನ್ನು ಸ್ಥಾಪಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಹಕರಿಸಿದೆ ಎಂದು ಹೇಳಿದೆ. .

ಸಾಮಾಜಿಕ ಕಾಳಜಿ ಸಚಿವ ಮೇರಿ ಟಾಡ್ ಮಾತನಾಡಿ, 'ಈ ವಿಷಯದ ಬಗ್ಗೆ ಪ್ರಗತಿ ಸಾಧಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ. ಆದರೆ ಈ ಮಾಹಿತಿಯು ಅದನ್ನು ಪರಿಹರಿಸುವುದು ಕಷ್ಟಕರವಾಗಿದೆ. ಶಾಸನಬದ್ಧ ಜವಾಬ್ದಾರಿಯು ಸ್ಥಳೀಯ ಅಧಿಕಾರಿಗಳ ಮೇಲಿದೆ ಮತ್ತು ನಾನು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ. ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತೇನೆ' ಎಂದು ತಿಳಿಸಿದ್ದಾರೆ.

click me!