ಬಸ್ಸಲ್ಲಿಯೇ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ

By Web DeskFirst Published Oct 27, 2018, 4:41 PM IST
Highlights

ಬಸ್ಸಲ್ಲಿಯೇ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಎಲ್ಲಿ? ಯಾರು? ಇಲ್ಲಿದೆ ವಿವರ

ಲಕ್ನೋ, (ಅ.27): ಮೂರು ವರ್ಷದ ನರ್ಸರಿ ಮಗುವಿನ ಮೇಲೆ ಖಾಸಗಿ ಶಾಲೆಯ ಬಸ್​ ಚಾಲಕ ಅತ್ಯಾಚಾರ ಎಸಗಿರುವ ಘಟನೆ ಗ್ರೇಟರ್ ನೋಯ್ಡಾದ ಗುರುಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತ ಬಾಲಕಿ ಶಿಶುವಿಹಾರಕ್ಕೆ ಬಸ್‌ನಲ್ಲಿ ಹೋತ್ತಿದ್ದಳು. ಎಂದಿನಂತೆ ಅಕ್ಟೋಬರ್ 9ರಂದು ಬಾಲಕಿ ಬಸ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಚಾಲಕ ಅತ್ಯಾಚಾರ ಎಸಗಿದ್ದಾನೆ.

ಬಳಿಕ ಅಪ್ಪನನ್ನು ನೋಡಿದ ಕೂಡಲೇ ಬಾಲಕಿ ಜೋರಾಗಿ ಅಳಲಾರಂಭಿಸಿದ್ದಾಳೆ. ವಿಚಾರಣೆ ನಡೆಸಿದಾಗ, ಬಸ್​ ಚಾಲಕನ ಹೀನಾ ಕೃತ್ಯವನ್ನು ಅಪ್ಪನ ಬಳಿ ಹೇಳಿಕೊಂಡಿದ್ದಾಳೆ.

ನಂತರ ಪಾಲಕರು ಶಾಲೆಗೆ ತೆರಳಿ ಚಾಲಕನ ಬಗ್ಗೆ ವಿಚಾರಿಸಿ, ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಪೊಕ್ಸೊ ಮತ್ತು ಐಪಿಸಿ ಸೆಕ್ಷನ್​ 376ಎ, 376ಬಿ ಅಡಿ ಪ್ರಕರಣ ದಾಖಲಿಸಿಕೊಂಡು, ಶೋಧ ಆರಂಭಿಸಿದ್ದಾರೆ.

ದೂರು ದಾಖಲಿಸಿ 15 ದಿನಗಳಾಗಿದ್ದರೂ ಇನ್ನೂ ಚಾಲಕನನ್ನು ಬಂಧಿಸಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!