12 ಪಾಕಿಸ್ತಾನಿ ಹಿಂದೂಗಳ ಬಂಧನ

By Web DeskFirst Published Aug 13, 2018, 8:52 PM IST
Highlights

ರಾಜತಾಂತ್ರಿಕ ವರದಿಯ ಪ್ರಕಾರ ಕಿರುಕುಳ ತಾಳಲಾರದೆ ಪ್ರತಿ ವರ್ಷ 5000 ಹಿಂದೂಗಳು ಪಾಕಿಸ್ತಾನವನ್ನು ತೊರೆಯುತ್ತಿದ್ದಾರೆ. 

ನವದೆಹಲಿ[ಆ.13]: ವಿಸಾ ನಿಯಮ ಉಲ್ಲಂಘಿಸಿ ಭಾರತದಲ್ಲೇ ಉಳಿದುಕೊಂಡಿದ್ದ 12 ಪಾಕಿಸ್ತಾನಿ ಹಿಂದುಗಳನ್ನು ರಾಜಸ್ಥಾನದಲ್ಲಿ  ಬಂಧಿಸಲಾಗಿದೆ.

ಪೊಲೀಸರ ವರದಿಯ ಪ್ರಕಾರ ವ್ಯಕ್ತಿಯೊಬ್ಬರ ಅಂತಿಮ ವಿಧಿವಿಧಾನವನ್ನು ಪೂರ್ಣಗೊಳಿಸುವ ಸಲುವಾಗಿ ಕುಟುಂಬವೊಂದು ಆಗಮಿಸಿತ್ತು. ಊರ್ಜಿತ ವಿಸಾ ಅಡಿಯಲ್ಲಿ ವಾಘಾ ಗಡಿ ಮೂಲಕ ಭಾರತಕ್ಕೆ ಆಗಮಿಸಿ ನಂತರ ರಾಜಸ್ಥಾನದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿತ್ತು.

ಪೊಲೀಸರು ಮಾನವೀಯ ನೆಲೆಯಲ್ಲಿ ವಿಚಾರಣೆ ಕೈಗೊಂಡು ತನಿಖೆ ನಡೆಸುತ್ತಿದ್ದಾರೆ. ಪಾಕಿಸ್ತಾನದಲ್ಲಿರುವ ಹಿಂದೂ ಸಮುದಾಯ ಅಲ್ಲಿನ ಆಡಳಿತವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಿಲ್ಲ.ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ. ಅಲ್ಲಿನ ಶಾಲೆಗಳ ಪುಸ್ತಕಗಳಲ್ಲಿ ಹಿಂದೂಗಳನ್ನು ಉಗ್ರಗಾಮಿಗಳು ಇಸ್ಲಾಂ ವಿರೋಧಿಗಳು ಎಂದು ಚಿತ್ರಿಸಲಾಗುತ್ತಿದೆ.

ಈ ಬಗ್ಗೆ ಅಲ್ಲಿನ ಮಧ್ಯಮಗಳೆ ವರದಿ ಮಾಡದ್ದವು.ರಾಜತಾಂತ್ರಿಕ ವರದಿಯ ಪ್ರಕಾರ ಕಿರುಕುಳ ತಾಳಲಾರದೆ ಪ್ರತಿ ವರ್ಷ 5000 ಹಿಂದೂಗಳು ಪಾಕಿಸ್ತಾನವನ್ನು ತೊರೆಯುತ್ತಿದ್ದಾರೆ. 

click me!