ಜಮ್ಮು ಕಾಶ್ಮೀರದಲ್ಲಿ 101 ಉಗ್ರರ ಹತ್ಯೆ

By Web DeskFirst Published Jun 3, 2019, 9:40 AM IST
Highlights

ಜಮ್ಮು ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚಿನ ಉಗ್ರ ದಾಳಿಗಳು ನಡೆದಿವೆ. ಆದರೆ ಉಗ್ರ ಪಡೆಯನ್ನು ನಮ್ಮ ಭಾರತೀಯ ಸೇನಾ ಪಡೆಯು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. 

ಶ್ರೀನಗರ: ಭಯೋತ್ಪಾದನೆಯ ವಿರುದ್ಧ ಸಮರ ಸಾರಿರುವ ಭಾರತಕ್ಕೆ ಉಗ್ರರ ಕರಿನೆರಳು ಇನ್ನೂ ನಿಂತಿಲ್ಲ. ಜಮ್ಮು- ಕಾಶ್ಮೀರದಲ್ಲಿ ಕಳೆದ ಐದು ತಿಂಗಳಲ್ಲಿ ಒಟ್ಟು 101 ಉಗ್ರರನ್ನು ಹೊಡೆದುರುಳಿಸಲಾಗಿದೆ. 

ಆದರೆ, ಇದೇ ವೇಳೆ 50 ಮಂದಿ ಯುವಕರು ಹೊಸದಾಗಿ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಲ್ ಖೈದಾ ಸಂಘಟನೆಯ ಜತೆ  ಗುರುತಿಸಿಕೊಂಡಿದೆ ಎಂದೇ ಹೇಳಲಾಗುವ ಅನ್ಸರ್ ಘಜ್ವತ್ ಉಲ್-ಹಿಂದ್ ಸಂಘಟನೆ ಮುಖ್ಯಸ್ಥ ಎನ್ನಲ್ಲಾದ ಝಾಕೀರ್ ಮೂಸಾ ಸೇರಿ 101ಉಗ್ರರನ್ನು ಕೊಲ್ಲಲಾಗಿದೆ. ಆ ಪೈಕಿ 23 ಮಂದಿ ವಿದೇಶಿಗರು. ಉಳಿದಂತೆ 78  ಸ್ಥಳೀಯರು.

click me!