ರಾಕಿಂಗ್ ಸ್ಟಾರ್ ಯಶ್ ಒಟ್ಟೂ ಆಸ್ತಿ ಎಷ್ಟು? ಇಷ್ಟು ಬೇಗ ಅಷ್ಟೊಂದು ಕೋಟಿ ಸಂಪಾದಿಸಿದ್ದು ಹೇಗೆ?

Published : Apr 14, 2025, 11:56 AM ISTUpdated : Apr 14, 2025, 02:28 PM IST
ರಾಕಿಂಗ್ ಸ್ಟಾರ್ ಯಶ್ ಒಟ್ಟೂ ಆಸ್ತಿ ಎಷ್ಟು? ಇಷ್ಟು ಬೇಗ ಅಷ್ಟೊಂದು ಕೋಟಿ ಸಂಪಾದಿಸಿದ್ದು ಹೇಗೆ?

ಸಾರಾಂಶ

ನಟ ಯಶ್ ಅವರು ಇಂದು ಜಾಗತಿಕ ಐಕಾನ್. ಆದರೆ, ಅವರ ಜೀವನವನ್ನು ಕೆಜಿಎಫ್‌ ಸಿನಿಮಾಗಿಂತ ಮೊದಲು ಹಾಗೂ ಕೆಜಿಎಫ್ ನಂತರ ವಿಭಾಗಿಸಬಹುದು. ಕೆಜಿಎಫ್ ಸಿನಿಮಾ ಬರುವ ಮೊದಲು ನಟ ಯಶ್..

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಈಗ ಕೇವಲ ಕನ್ನಡದ ನಟರಾಗಿ ಉಳಿದಿಲ್ಲ. ಅವರೀಗ ಪ್ಯಾನ್ ಇಂಡಿಯಾ ಸ್ಟಾರ್. ಜೊತೆಗೆ, ಇಡೀ ಜಗತ್ತೇ ಬೆರಗುಗಣ್ಣಿನಿಂದ ನೋಡುತ್ತಿರುವ ಸಿನಿಮಾ ಐಕಾನ್. ಸಿನಿಮಾರಂಗಕ್ಕೆ ಬಂದು 15 ವರ್ಷಗಳಲ್ಲಿ ನಟ ಯಶ್ ಅವರು ಯಾರೂ ಊಹಿಸದ ರೀತಿಯಲ್ಲಿ ಬೆಳೆದು ನಿಂತಿದ್ದಾರೆ. ಆದರೆ, ನಟ ಯಶ್ ಅವರ ಬೆಳವಣಿಗೆ ರಾತ್ರೋ ರಾತ್ರಿ ಆಗಿದ್ದಲ್ಲ. ಆದರೆ, ಬೇಗ ಬೆಳೆದುನಿಂತು ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದ್ದಾರೆ. ಹಾಗಿದ್ದರೆ ನಟ ಯಶ್ ಅವರ ಬೆಳವಣಿಗೆ ಗುಟ್ಟೇನು? ಅವರು ಇಂದು ಏರಿರುವ ಎತ್ತರಕ್ಕೆ ಸಹಾಯಕವಾದ ಅಂಶಗಳು ಯಾವವು?

ಹೌದು, ನಟ ಯಶ್ ಅವರು ಇಂದು ಜಾಗತಿಕ ಐಕಾನ್. ಆದರೆ, ಅವರ ಜೀವನವನ್ನು ಕೆಜಿಎಫ್‌ ಸಿನಿಮಾಗಿಂತ ಮೊದಲು ಹಾಗೂ ಕೆಜಿಎಫ್ ನಂತರ ವಿಭಾಗಿಸಬಹುದು. ಕೆಜಿಎಫ್ ಸಿನಿಮಾ ಬರುವ ಮೊದಲು ನಟ ಯಶ್ ಅವರು ಕನ್ನಡದ ಸ್ಟಾರ್ ನಟ ಎಂಬಷ್ಟು ಬೆಳೆದಿರಲಿಲ್ಲ. ಆದರೆ, ಡ್ರಾಮಾ, ರಾಜಾಹುಲಿ, ಮಿಸ್ಟರ್ & ಮಿಸೆಸ್ ರಾಮಾಚಾರಿ ಮುಂತಾದ ಸಿನಿಮಾಗಳ ಮೂಲಕ ಕನ್ನಡದ ನುಖ್ಯ ನಟರ ಸಾಲಿನಲ್ಲಿ ಸ್ಥಾನ ಪಡೆದು ಸ್ಟಾರ್ ನಟರಾಗುವ ಹಾದಿಯಲ್ಲಿದ್ದರು. ಆದರೆ, ಯಾವಾಗ ಕೆಜಿಎಫ್‌ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಬಂತೋ, ಯಶ್ ಲೆವಲ್ ಕಂಪ್ಲೀಟ್ ಬದಲಾಗಿಹೋಯ್ತು.

ಮಿಡಲ್ ಕ್ಲಾಸ್ ಫ್ಯಾಮಿಲಿ ಆಗಿದ್ದ ಕಾರಣ ಥಿಯೇಟರ್‌ಗೆ ಮನೆಯಿಂದ ತಿಂಡಿ ತೆಗೆದುಕೊಂಡು ಹೋಗ್ತಿದ್ವಿ: ಯಶ್

ಯಶ್ ಅವರು ಕೆಜಿಎಫ್ ಪಾರ್ಟ್ 1 ಸಿನಿಮಾಗೆ ಅದೆಷ್ಟು ಸಂಭಾವನೆ ಪಡೆದರು ಎಂಬುದು ಮುಖ್ಯವಲ್ಲ. ಆದರೆ, ಆ ಸಿನಿಮಾದ ಸಕ್ಸಸ್ ಅವರಿಗೆ ಕೆಜಿಎಫ್-2 ಸಿನಿಮಾದಲ್ಲಿ ಒಳ್ಳೆಯ ಸಂಭಾವನೆ ದೊರಕಲು ಖಂಡಿತವಾಗಿ ಕಾರಣವಾಯ್ತು. ಆ ಬಳಿಕ ಯಶ್ ಅವರು ಅದೆಷ್ಟೋ ಉತ್ಪನ್ನಗಳ ಬ್ರಾಂಡ್ ಅಂಬಾಸಡರ್ ಆಗಿ, ಜಾಹೀರಾತುಗಳ ಮೂಲಕ ಕೋಟಿ ಕೋಟಿ ಹಣ ಎಣಿಸತೊಡಗಿದರು. ಜೊತೆಗೆ, ತಮ್ಮ ಹಣವನ್ನು ಹಾಸನದಲ್ಲಿ ಜಮೀನು ಕೊಂಡುಕೊಳ್ಳುವ ಮೂಲಕ ಅಲ್ಲಿ ಹಣ ಹೂಡಿಕೆ ಮಾಡಿದರು. ಜೊತೆಗೆ, ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಒಂದನ್ನು ಸಹ ಖರೀದಿ ಮಾಡಿದ್ದಾರೆ ಎಂಬ ಸುದ್ದಿಯಿದೆ.

ಜೊತೆಗೆ, ಈಗ ಸಹಿ ಮಾಡಿರುವ ಸಿನಿಮಾದ ಸಂಭಾವನೆಯನ್ನೂ ಸಹ ಸಿನಿಮಾ ನಿರ್ಮಾಣಕ್ಕೆ ಬಳಸಿ, ಆ ಮೂಲಕ ಸಿನಿಮಾ ಲಾಭದಲ್ಲಿ ನಿರ್ಧಿಷ್ಟ ಪಾಲು ತೆಗೆದುಕೊಳ್ಳಲು ನಿರ್ಧಾರ ಮಾಡುವ ಮೂಲಕ ಯಶ್ ಅಲ್ಲೂ ಕೂಡ ಬುದ್ದಿವಂತಿಕೆ ಮೆರೆದಿದ್ದಾರೆ. ಜೊತೆಗೆ, ಯಶ್ ಅವರ ತಾರಾಮೌಲ್ಯ ಈಗ ಬಹಳಷ್ಟು ಹೆಚ್ಚಾಗಿರುವುದರಿಂದ, ಈಗ ಯಶ್ ಅವರಿಹೆ ಹಣ ಹೊಳೆಯಂತೆ ಹರಿದು ಬರುತ್ತಿದೆ. ಆದರೆ. ಅದರ ಹಿಂದೆ ಯಶ್ ಕಠಿಣ ಪರಿಶ್ರಮ, ಬುದ್ದಿವಂತಿಕೆ ಹಾಗೂ ಅದೃಷ್ಟ ಈ ಎಲ್ಲವೂ ಅಡಗಿದೆ.

ಅಂತೂ ಇಂತೂ ಕೊನೆಗೂ ಆ ಸೀಕ್ರೆಟ್ ಹೊರಹಾಕಿದ 'ಉಪಾಧ್ಯಕ್ಷ' ನಟಿ ಮಲೈಕಾ ವಸುಪಾಲ್!

ಒಟ್ಟಿನಲ್ಲಿ ಹೇಳಬೇಕು ಎಂದರೆ, ನಟ ಯಶ್ ಅವರು ಜಾಗತಿಕ ಐಕಾನ್ ಆಗಿ ಬೆಳೆದಿದ್ದು ಈಗ ಇತಿಹಾಸ. ಆದರೆ, ಪ್ರತಿಭೆ ಜೊತೆಗೆ ಪಕ್ಕಾ ಪ್ಲಾನ್ ಹಾಗೂ ವ್ಯವಹಾರ ಜ್ಞಾನ ಇದ್ದರೆ ಒಬ್ಬ ವ್ಯಕ್ತಿ ಹೇಗೆಲ್ಲಾ ಬೆಳೆಯಬಹುದು ಎಂಬುದಕ್ಕೆ ಯಶ್ ಸೂಕ್ತ ಉದಾಹರಣೆ. ಹಾಗಿದ್ದರೆ ನಟ ಯಶ್ ಅವರ ಇಂದಿನ ಒಟ್ಟೂ ಆಸ್ತಿ ಎಷ್ಟು? ಈ ಪ್ರಶ್ನೆಗೆ ನಿರ್ಧಿಷ್ಟ ಉತ್ತರ ಕೊಡುವುದು ಕಷ್ಟ. ಆದರೆ, ಸರಿಸುಮಾರು 350 ಕೋಟಿಯಿಂದ 400 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಯಶ್ ಬಳಿ ಇಂದು ದುಬಾರಿ ಕಾರುಗಳಿವೆ, ಲೈಫ್ ಸ್ಟೈಲ್ ಕೂಡ ಚೆನ್ನಾಗಿದೆ. ಯಾರದೇ ಸಂಪಾದನೆ ಹಾಗೂ ಆಸ್ತಿಯ ಬಗ್ಗೆ ಗ್ಯಾರಂಟಿ ಎಂಬ ಸಂಖ್ಯೆ ಹೇಳೋದು ಕಷ್ಟವಾದರೂ ಇಂದು ಯಶ್ ಅವರು ಕೋಟಿಗೆ ಬಾಳುತ್ತಾರೆ ಎಂಬುದಂತೂ ಸತ್ಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ