ರಶ್ಮಿಕಾ ಮಂದಣ್ಣ 'ನಿಜ ಹೆಸರು' ಬಯಲು, ಗುಟ್ಟೆಲ್ಲಾ ರಟ್ಟಾಯ್ತು!

ರಶ್ಮಿಕಾ ಮಂದಣ್ಣ ಅವರ ವಿಷಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚಿತ್ರವಿಚಿತ್ರ ಕಾಮೆಂಟ್ ಮಾಡೋದು ಹೊಸ ಸಂಗತಿಯೇನೂ ಅಲ್ಲ. ಅವರ ವೈಯಕ್ತಿಕ ವಿಷಯಗಳಿಗೆ ತಲೆಕೆಡಿಸಿಕೊಂಡಷ್ಟು ಜನರು ತಮ್ಮದೇ ಸಮಸ್ಯೆಗಳ ಬಗ್ಗೆ...

Rashmika Mandanna document name revealed

ನಟಿ ರಶ್ಮಿಕಾ ಮಂದಣ್ಣರ (Rashmika Mandanna) ನಿಜವಾದ ಹೆಸರು ಬಯಲಾಗಿದೆ. ಹಾಗಿದ್ರೆ, ಇಷ್ಟು ದಿನ ನಾವೆಲ್ಲಾ ಅಂದುಕೊಂಡಂತೆ ಅವರ ಹೆಸರು 'ರಶ್ಮಿಕಾ ಮಂದಣ್ಣ' ಅಲ್ವಾ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.. ಹೌದು, ರಶ್ಮಿಕಾ ಮಂದಣ್ಣ ಹೆಸರು ಅದೇ ಆಗಿದೆ. ಆದರೆ, ಆ ಹೆಸರಿನ ಹಿಂದೆ ಏನೋ ಇದೆ. ಅದೇನು, ಅದರ ಅರ್ಥವೇನು ಅನ್ನೋದನ್ನ ನೋಡಿ..

ನಟಿ ರಶ್ಮಿಕಾ ಮುಂದಣ್ಣ ಅವರ ಡಾಕ್ಯುಮೆಂಟ್ಸ್‌ಗಳಲ್ಲಿ ಎಲ್ಲಾ ಕಡೆ 'ಎಂ ರಶ್ಮಿಕಾ' ಎಂದೇ ಬರೆಯಲಾಗುತ್ತದೆ. ಹಲವರಲ್ಲಿ ಈ ಬಗ್ಗೆ ತುಂಬಾ ಕುತೂಹಲ ಇದೆ. M ಅಂದ್ರೇನು ಎಂಬ ಬಗ್ಗೆ ಇರೋ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಆ ಬಗ್ಗೆ ಸ್ವತಃ ನಟಿ ರಶ್ಮಿಕಾ ಮಂದಣ್ಣಾ ಅವರೇ ಉತ್ತರ ಹೇಳಿದ್ದಾರೆ. ನನ್ನ ಅಧಿಕೃತ ಹೆಸರು ಎಂ ರಶ್ಮಿಕಾ ಮಂದಣ್ಣ. ಅಂದ್ರೆ 'ಮುಂಡಚಾಡ್ಯರ ರಶ್ಮಿಕಾ ಮಂದಣ್ಣ' ಎಂದಿದ್ದಾರೆ. ಅಲ್ಲಿಗೆ ರಶ್ಮಿಕಾ ಮಂದಣ್ಣ ನಿಜವಾದ ಹೆಸರಿನ ಸೀಕ್ರೆಟ್  ಜಗಜ್ಜಾಹೀರಾಗಿದೆ.ಇದು ಗೊತ್ತಾಗಿದ್ದೇ ತಡ, ಹಲವರು ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯಾಗಿ ಕಾಮೆಂಟ್ ಮಾಡತೊಡಗಿದ್ದಾರೆ.

Latest Videos

ರಶ್ಮಿಕಾಗೆ ಬ್ಯಾಡ್ ಟೈಮ್ ಶುರುವಾಯ್ತಾ? 'ಬ್ಯಾಡ್ ಬಾಯ್' ಸಲ್ಲೂ ಜೊತೆ ನಟಿಸಿದ್ದೇ ಮುಳುವಾಯ್ತಾ?

ನನ್ನ ಪೂರ್ತಿ ಹೆಸರು ಮುಂಡಚಾಡ್ಯರ ರಶ್ಮಿಕಾ ಮಂದಣ್ಣ ಎಂದು ನಟಿ ರಶ್ಮಿಕಾ ಮಂದಣ್ಣ ತನ್ನ ಪೂರ್ತಿ ಹೆಸರು ರಿವೀಲ್ ಮಾಡಿದ್ದಾರೆ. ಎಮ್‌ ರಶ್ಮಿಕಾ ಮಂದಣ್ಣ (M Rashmika Mandanna) ಅಂದ್ರೆ ಏನು ಅನ್ನೋದನ್ನ ಸ್ವತಃ ಕನ್ನಡದ ನಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಹೇಳಿಕೊಂಡಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿದ ನಟಿ ರಶ್ಮಿಕಾ ಮಂದಣ್ಣ ಅವರು ಈಗ ನ್ಯಾಷನಲ್ ಸ್ಟಾರ್ ಪಟ್ಟದ ಜೊತೆಜೊತೆಗೆ, 'ನ್ಯಾಷನಲ್ ಕ್ರಶ್' ಪಟ್ಟವನ್ನೂ ಪಡೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ವಿಷಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚಿತ್ರವಿಚಿತ್ರ ಕಾಮೆಂಟ್ ಮಾಡೋದು ಹೊಸ ಸಂಗತಿಯೇನೂ ಅಲ್ಲ. ಅವರ ವೈಯಕ್ತಿಕ ವಿಷಯಗಳಿಗೆ ತಲೆಕೆಡಿಸಿಕೊಂಡಷ್ಟು ಜನರು ತಮ್ಮದೇ ಸಮಸ್ಯೆಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳಲಿಕ್ಕಿಲ್ಲ ಎನ್ನಬಹುದು. ನಟಿ ರಮ್ಯಾ ಕೂಡ ಈ ಬಗ್ಗೆ ಮಾತನಾಡಿ, 'ರಶ್ಮಿಕಾರನ್ನು ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ಕೆಟ್ಟದಾಗಿ ಟ್ರೋಲ್ ಮಾಡಲಾಗುತ್ತದೆ. ಅದು ಸರಿಯಲ್ಲ' ಎಂದಿದ್ದಾರೆ. ಆದರೆ, ಸ್ವತಃ ರಶ್ಮಿಕಾ ಅವರು ಈ ಬಗ್ಗೆ ಬಹುಶಃ ತಲೆಯನ್ನೇ ಕೆಡಿಸಿಕೊಂಡಿಲ್ಲ ಎನ್ನಬಹುದೇನೋ. ಅಥವಾ, ಅದೆಷ್ಟೇ ನೋವಾಗಿದ್ದರೂ ಅದನ್ನು ಹೇಳಿಕೊಂಡಿಲ್ಲ.

19ನೇ ಪುಣ್ಯ ತಿಥಿ: ಅಣ್ಣಾವ್ರ ಈ ಸೀಕ್ರೆಟ್‌ ಇನ್ನೂ ಗೊತ್ತಿಲ್ವಾ?

ಒಟ್ಟಿನಲ್ಲಿ, ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಒರಿಜಿನಲ್ ಹೆಸರನ್ನು, ಅಂದ್ರೆ ಡಾಕ್ಯುಮೆಂಟ್‌ನಲ್ಲಿರೋ ಹೆಸರನ್ನು ಜಗತ್ತಿಗೇ ಬಿಟ್ಟುಕೊಟ್ಟಿದ್ದಾರೆ, ಅದರಲ್ಲೇನೂ ಸೀಕ್ರೆಟ್‌ ಇಲ್ಲ ಅನ್ನೋದನ್ನು ಕೂಡ ರಶ್ಮಿಕಾ ಈ ಮೂಲಕ ಸಾರಿ ಹೇಳಿದ್ದಾರೆ. ಸದ್ಯ 'ಸಿಕಂದರ್' ಸೋಲು ಅವರನ್ನು ಬಾಧಿಸುತ್ತಿದ್ದರೂ ಅದಕ್ಕೆ ನಟಿ ರಶ್ಮಿಕಾ ಕಾರಣವೇ ಅಲ್ಲ. ಅವರ ಪಾತ್ರವನ್ನು ಅವರು ಚೆನ್ನಾಗಿ ನಿರ್ವಹಿಸಿದ್ದಾರೆ. ಸಿನಿಮಾ ಸೋಲಿಗೆ ನಿರ್ದೇಶಕರೇ ಹೊಣೆ ಎನ್ನವುದು ಜಗತ್ತಿಗೇ ಗೊತ್ತಿರುವ ಸತ್ಯ. ಆದರೆ, ಆ ಸೋಲಿನ ಪರಿಣಾಮಕ್ಕೆ ಮಾತ್ರ ನಾಯಕ-ನಾಯಕಿ ಸೇರಿದಂತೆ ಎಲ್ಲರೂ ಪಾಲುದಾದರರೇ ಹೌದು. ಆದರೆ, ಸದ್ಯ ರಶ್ಮಿಕಾರನ್ನು 'ಛಾವಾ' ಸಕ್ಸಸ್ ಕಾಪಾಡುತ್ತಿದೆ. ಆದರೆ, ಸಿಕಂದರ್' ಸೋಲಿನಲ್ಲಿ ಸಿಲುಕಿರೋದು ಸಲ್ಲಾನ್ ಖಾನ್.

ಅಂದಹಾಗೆ, ಇತ್ತೀಚೆಗೆ ಮುಂಬೈನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು 'ನಾನು ಕರ್ನಾಟಕದಲ್ಲಿ ಹುಟ್ಟಿದವಳು, ನಾನು ಬೆಳೆದಿದ್ದು ಅಲ್ಲಿಯೇ. ಸಿನಿಮಾರಂಗಕ್ಕೆ ನಾನು ಬಂದಾಗ ನನಗೆ ಗೊತ್ತಿದಿದ್ದು ಕನ್ನಡ ಹಾಗೂ ಇಂಗ್ಲಿಷ್ ಎರಡೇ ಭಾಷೆ. ಬಳಿಕ ನಾನು ತೆಲುಗು ಕಲಿತುಕೊಂಡಿದ್ದೇನೆ' ಎಂದಿದ್ದಾರೆ. ಈ ಮಾತನ್ನು ರಶ್ಮಿಕಾ ಹೇಳಿದ ಬಳಿಕ ಅವರನ್ನು ದ್ವೇಷಿಸುತ್ತಿದ್ದ ಕೆಲವು ಕನ್ನಡ ಪ್ರೇಮಿಗಳು ಸೈಲೆಂಟ್ ಆಗಿದ್ದಾರೆ. ಬಹುಶಃ ಅವರೀಗ ರಶ್ಮಿಕಾರನ್ನು ಇಷ್ಟಪಡುತ್ತಿರಲೂಬಹುದು. ಯಾರು ಇಷ್ಟಪಡಲೀ ಬಿಡಲಿ, ರಶ್ಮಿಕಾ ಅವರು ಈಗ ನ್ಯಾಷನಲ್ ಸ್ಟಾರ್, ಭಾರತದ ನಂಬರ್ ಒನ್ ನಟಿ!

ಅನಿರುದ್ಧ್ ಮ್ಯೂಸಿಕ್ ಹಬ್ಬ, 60 ನಿಮಿಷದಲ್ಲೇ ಟಿಕೆಟ್ ಸೋಲ್ಡ್ ಔಟ್!

 

 

vuukle one pixel image
click me!