ನನ್ನ ಗೆಳತಿ ನನ್ನ ಗೆಳತಿ ಹಾಡಿನ ರಚನೆ-ಗಾಯಕ ಮಂಜುನಾಥ್ ಸಂಗಳದ ಹೃದಯಾಘಾತಕ್ಕೆ ಬಲಿ

Published : Apr 13, 2025, 02:45 PM ISTUpdated : Apr 13, 2025, 03:56 PM IST
ನನ್ನ ಗೆಳತಿ ನನ್ನ ಗೆಳತಿ ಹಾಡಿನ ರಚನೆ-ಗಾಯಕ ಮಂಜುನಾಥ್ ಸಂಗಳದ ಹೃದಯಾಘಾತಕ್ಕೆ ಬಲಿ

ಸಾರಾಂಶ

ನನ್ನ ಗೆಳತಿ ನನ್ನ ಗೆಳತಿ, ನನ್ನ ನೋಡಿ ನೀ ನಗತಿ ಈ ಜಾನಪದ ಹಾಡು ಯಾರು ಕೇಳಿಲ್ಲ  ಹೇಳಿ. ಹಾಡು ರಚಿಸಿ ಅದ್ಭುತವಾಗಿ ಹಾಡಿ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡ ಜಾನಪದ ಹಾಡು ರಚನೆಕಾರ, ಗಾಯಕ ಮಂಜುನಾಥ ಸಂಗಳದ ತೀವ್ರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಹುಬ್ಬಳ್ಳಿ(ಏ.13) ಜಾನಪದ ಹಾಡುಗಳ ಅಭಿಮಾನಿಗಳಿಗೆ ಆಘಾತವಾಗಿದೆ. ಕರ್ನಾಟಕದ ಜಪ್ರಿಯ ಜಾನಪದ ಹಾಡು ರಚನೆಕಾರ ಹಾದೂ ಗಾಯಕ ಮಂಜುನಾಥ ಸಂಗಳದ ತೀವ್ರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ನನ್ನ ಗೆಳತಿ ನನ್ನ ಗೆಳತಿ, ನನ್ನ ನೋಡಿ ನೀ ನಗತಿ ಹಾಡಿನ ಮೂಲಕ ಮಂಜನಾಥ ಸಂಗಳದ ಕರ್ನಾಟಕದಲ್ಲಿ ಭಾರಿ ಜನಪ್ರಿಯರಾಗಿದ್ದರು. ಕಿರಿಯ ವಯಸ್ಸಿನಲ್ಲೇ ಮಂಜುನಾಥ್ ಸಂಗಲದ ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು, ಪೋಷಕರು, ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. 

ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ
ಹುಬ್ಬಳ್ಳಿಯ ತಾರಿಹಾಳದ ಮಂಜುನಾಥ್ ಸಂಗಳದಗೆ ನಿನ್ನೆ(ಏ.12) ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ಮಂಜುನಾಥ್ ಸಂಗಳದ ಅವರನ್ನು ಹುಬ್ಬಳ್ಳಿ ಆಸ್ಪ್ರತೆಗೆ ದಾಖಲಿಸಲಾಗಿತ್ತು. ಆದರೆ ಪ್ರಯೋಜನವಾಗಲಿಲ್ಲ. ತಪಾಸಣೆ ನಡೆಸಿದ ವೈದ್ಯರು ಮುಂಜುನಾಥ್ ಸಂಗಳದ ಮೃತಪಟ್ಟಿರುವುದು ಖಚಿತಪಡಿಸಿದ್ದಾರೆ. ಮಂಜುನಾಥ್ ಸಂಗಳದ ಅವರಿಗೆ ಹೃದಯಾಘಾತವಾಗಿದೆ ಅನ್ನೋ ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಯತ್ತ ಹಲವರು ಜಮಾಯಿಸಿದ್ದಾರೆ. ಇತ್ತ ಆಸ್ಪತ್ರೆ ಪ್ರಕ್ರಿಯೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.

ಈ ನೋವನ್ನು ಒಂದು ವಾರದಿಂದ ಅನುಭವಿಸುತ್ತಿದ್ದರು, ಚಿಕಿತ್ಸೆ ಸರಿಯಾಗಿ ನಡೆದಿದ್ರೆ...: ಗುರು ಕಿರಣ್

ಕಂಬನಿ ಮಿಡಿದ ಅಭಿಮಾನಿ ಬಳಗ
ಮೃತದೇಹವನ್ನು ಮನಗೆ ತರುವ ದಾರಿ ಉದ್ದಕ್ಕೂ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ತಾರಿಹಾಳದ ಮಂಜುನಾಥ್ ಸಂಗಳದ ಮನೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮುಂಜನಾಥ್ ಸಂಗಳದ ದಿಢಿರ್ ಸಾವು ಹಲವರಿಗೆ ಆಘಾತ ತಂದಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ತಾಣಗಳಲ್ಲಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.  

ಸಿನಿಮಾ ಹಾಡಿಗಿಂತ ಸೂಪರ್ ಹಿಟ್
ನನ್ನ ಗೆಳತಿ ನನ್ನ ಗೆಳತಿ, ನನ್ನ ನೋಡಿ ನೀ ನಗತಿ ಹಾಡು ರಚಿಸಿ ಹಾಡಿದ್ದ ಮಂಜುನಾಥ್ ಸಂಗಲದ ಕರ್ನಾಟಕದ ಎಲ್ಲೆಡೆ ಜನಪ್ರಿಯರಾಗಿದ್ದರು. ಹಲವು ಸಂಗೀತ ವೇದಿಕೆ, ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಈ ಹಾಡು ಖಚಿತವಾಗಿತ್ತು. ಸೋಶಿಯಲ್ ಮೀಡಿಯಾ, ಯೂಟ್ಯೂಬ್ ಸೇರಿದಂತೆ ಎಲ್ಲೆಡೆ ಈ ಹಾಡು ವೈರಲ್ ಆಗಿತ್ತು. ಸಿನಿಮಾ ಹಾಡುಗಳಿಗಿಂತ ನನ್ನ ಗೆಳತಿ ಹಾಡು ವೈರಲ್ ಆಗಿತ್ತು. 

ಮಂಜುನಾಥ್ ಸಂಗಳದ ಅಕಾಲಿಕ ನಿಧನ ಹಲವರನ್ನು ದುಃಖತಪ್ತರನ್ನಾಗಿ ಮಾಡಿದೆ. ಕಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಗ್ಯವಾಗಿದ್ದ ಮಂಜುನಾಥ್ ಸಂಗಳದಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಇದಕ್ಕೂ ಮೊದಲು ಯಾವುದೇ ಸೂಚನೆ ಇರಲಿಲ್ಲ. ಮುಂದುನಾಥ್ ಸಂಗಳದ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಎಪ್ರಿಲ್ 16ರಂದು ಮಂಜುನಾಥ್ ಸಂಗಳದ ಅವರ ಮನೆಯಲ್ಲಿ ಪುಣ್ಯಸ್ಮರಣೆ ನಡೆಯಲಿದೆ ಎಂದು ಕುಟುಂಬ್ಥರು ಮಾಹಿತಿ ನೀಡಿದ್ದಾರೆ.

ನನ್ನ ಗೆಳತಿ ನನ್ನ ಗೆಳತಿ,  ನನ್ನ ನೋಡಿ ನೀ ನಗತಿ ಹಾಡಿನ ಮೂಲಕ ಮಂಜುನಾಥ್ ಸಂಗಳದ ಜನಪ್ರಿಯರಾಗಿದ್ದರು. ಈ ಹಾಡಿನ ಬಳಿಕವೂ ಹಲವು ಹಾಡುಗಳನ್ನು ರಚಿಸಿ ಹಾಡಿದ್ದಾರೆ. ಭಜನೆ ಹಾಡುಗಳ ರಚಿಸಿ ಹಾಡುತ್ತಿದ್ದ ಮಂಜುನಾಥ್  ಸಂಗಳದ ಬಳಿಕ ಹಳ್ಳಿ ಸೊಗಡು, ಸ್ಥಳೀಯ ಸಂಪ್ರದಾಯಿಕ ಪದ್ಧತಿ, ಸಂಸ್ಕೃತಿ, ಪ್ರೀತಿ,ಪ್ರೇಮ. ಪ್ರಣಯಗಳ ಕುರಿತು ಜನಪದ ಹಾಡು ಬರೆದು ಅತ್ಯಂತ ಜನಪ್ರಿಯರಾಗಿದ್ದರು.

43ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸ್ಟಾರ್ ಗಾಯಕ ನಿಧನ! ಶವವಾಗಿ ಪತ್ತೆಯಾದ ಗಾಯಕ ಯಾರು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!